LIC Savings Scheme: ಈಗಿನ ಕಾಲದಲ್ಲಿ ಎಷ್ಟು ದುಡಿದರೂ ಸಾಲುವುದಿಲ್ಲ ಎನ್ನುವಂಥಾ ಪರಿಸ್ಥಿತಿ ಇದೆ. ಮನೆಮಂದಿಯೆಲ್ಲಾ ದುಡಿದರೂ ಕುಟುಂಬದಲ್ಲಿ ಯಾವುದಾದರೂ ಒಂದು ಸಮಾರಂಭ ಬಂದರೆ ಸಾಕು ಮತ್ತೆ ಸಾಲ ಮಾಡುವ ಸ್ಥಿತಿ ತಪ್ಪಿದ್ದಲ್ಲ. ಇನ್ನು ಹೆಣ್ಣುಮಕ್ಕಳ ಮದುವೆ ಅನ್ನೋದು ಭಾರತೀಯ ಸಮಾಜದಲ್ಲಿ ಇಂದಿಗೂ ಪೋಷಕರು ತಮ್ಮ ಜವಾಬ್ದಾರಿ ಎಂದೇ ಪರಿಗಣಿಸುವ ವಿಚಾರ. ಹಾಗಾಗಿ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಕ್ಷಣದಿಂದಲೇ ಆಕೆಯ ಮದುವೆಗೆ ತಯಾರಿ ಎನ್ನುವಂತೆ ಉಳಿತಾಯಗಳನ್ನು ಮಾಡಲು ಶುರು ಮಾಡಿಬಿಡುತ್ತಾರೆ. ಆದರೆ ಇಂದು ಎಷ್ಟು ಹಣ ಉಳಿಸಿದರೆ ಮುಂದೆ ಮದುವೆಗೆ ಸಾಕಾಗುವಷ್ಟು ದುಡ್ಡು ಕೈಯಲ್ಲಿರುತ್ತದೆ ಎನ್ನುವ ಬಗ್ಗೆ ಲೆಕ್ಕ ಇರುವುದು ಬಹಳ ಮುಖ್ಯ. ಹಣದ ಹೂಡಿಕೆಗಳ ಸರಿಯಾದ ಪ್ಲಾನಿಂಗ್ ಎಂದಿಗೂ ಅವಶ್ಯಕ. ಈ ವಿಚಾರದಲ್ಲಿ ಸಾಮಾನ್ಯ ಜನರ ಪಾಲಿನ ನೆಚ್ಚಿನ ಹೂಡಿಕೆ ಜೊತೆಗಾರ ಅಂದ್ರೆ ಬಹುಶಃ ಭಾರತೀಯ ಜೀವ ವಿಮಾ ಅಂದ್ರೆ ಎಲ್ಐಸಿ ಎಂದು ಕಾಣುತ್ತದೆ.
ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದ ಹೆಣ್ಣುಮಕ್ಕಳ ಮದುವೆಗಾಗಿ ನೀಡಿರುವ ಈ ವಿಶೇಷ ಯೋಜನೆಯಲ್ಲಿ ಮಗಳ ಮದುವೆಯ ಸಂದರ್ಭದಲ್ಲಿ ನಿಮಗೆ ಒಟ್ಟು 22 ಲಕ್ಷ ರೂಪಾಯಿಗಳು ಸಿಗುತ್ತವೆ. ಆ ಹಣದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಅದ್ಧೂರಿಯಾಗಿ ನಿಮಗಿಷ್ಟ ಬಂದಂತೆ ಮಗಳ ಮದುವೆ ಮಾಡಬಹುದು. ಹಾಗಂತ ಇದಕ್ಕೆ ದೊಡ್ಡ ಮೊತ್ತದ ಹೂಡಿಕೆಯ ಅವಶ್ಯಕತೆ ಇಲ್ಲ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ಇಂದು ಕೇವಲ 150 ರೂಪಾಯಿಗಳಿಂದ ನಿಮ್ಮ ಉಳಿತಾಯ ಆರಂಭಿಸಿದರೆ ಸಾಕು. ಮಗಳು ಬೆಳೆದು ಮದುವೆಗೆ ಬರುವಷ್ಟರಲ್ಲಿ ನೀವು ದಿವಾಳಿಯಾಗುವುದು ತಪ್ಪುತ್ತದೆ.
ಇದನ್ನೂ ಓದಿ: Corona Death: ತಂದೆಯ ಶವ ಬೇಡ, ಅವರ ಹಣ, ದಾಖಲೆ ತಂದುಕೊಡಿ ಸಾಕು : ಮೈಸೂರಿನಲ್ಲೊಂದು ಅಮಾನವೀಯ ಘಟನೆ
ಈ ಪಾಲಿಸಿ ಅಡಿಯಲ್ಲಿ ನೀವು ಪ್ರತಿದಿನ 150 ರೂಪಾಯಿಗಳನ್ನು ಮಾತ್ರ ಹೂಡಿಕೆ ಮಾಡಬೇಕು. ನೀವು ಮಗಳ ಮದುವೆ ಮಾಡುವಾಗ ನಿಮಗೆ 22 ಲಕ್ಷ ರೂಪಾಯಿ ಸಿಗುತ್ತದೆ. ಈ ಪಾಲಿಸಿಯನ್ನು ತೆಗೆದುಕೊಂಡ ನಂತರ ಒಂದು ವೇಳೆ ತಂದೆ ಸತ್ತರೆ, ಯಾವುದೇ ಹೂಡಿಕೆ ಮಾಡುವ ಅವಶ್ಯಕತೆಯಿಲ್ಲ. ನಿಮಗೆ ಸುಲಭವಾಗಿ ಹೇಳುವುದಾದರೆ ಹೆಣ್ಣು ಮಗಳ ತಂದೆಯ ಮರಣದ ನಂತರ ಪ್ರೀಮಿಯಂ ಪಾವತಿಸದಿದ್ದರೂ ಸಹ ಪಾಲಿಸಿ ಮುಂದುವರಿಯುತ್ತದೆ. ಅಷ್ಟೇ ಅಲ್ಲ, ತಂದೆಯ ಮರಣದ ನಂತರ ನಿಮಗೆ ಕೂಡಲೇ 10 ಲಕ್ಷ ರೂಪಾಯಿ ಸಿಗುತ್ತದೆ. ಇದಲ್ಲದೆ, ತಂದೆಯು ಒಂದು ವೇಳೆ ಅಪಘಾತದಲ್ಲಿ ಸತ್ತರೆ, ಆಗಲೂ 20 ಲಕ್ಷ ರೂಪಾಯಿ ಸಿಗುತ್ತದೆ.
ಇದು ಹೆಣ್ಣುಮಕ್ಕಳ ಬದುಕು ಮತ್ತು ಭವಿಷ್ಯವನ್ನು ಸುಭದ್ರ ಮಾಡುವ ನೂತನ ಯೋಜನೆಯಾಗಿದೆ. ಈ ನೀತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಎಲ್ಐಸಿ ವೆಬ್ಸೈಟ್ಗೆ ಭೇಟಿ ನೀಡಬಹುದು. ಇದಲ್ಲದೆ, ನೀವು ಹತ್ತಿರದ ಎಲ್ಐಸಿ ಏಜೆಂಟರಿಂದ ಕೂಡಾ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದು ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯಂತ ಸಮೃದ್ಧ ಮನಿ ಬ್ಯಾಕ್ ಸ್ಕೀಂ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ