• Home
 • »
 • News
 • »
 • national-international
 • »
 • Intranasal Covid Vaccine: ಮೂಗಿನ ಮೂಲಕ ಕೊರೊನಾ ಲಸಿಕೆ, ಯಾವ ಆಸ್ಪತ್ರೆಯಲ್ಲಿ ಎಷ್ಟು ದರ?

Intranasal Covid Vaccine: ಮೂಗಿನ ಮೂಲಕ ಕೊರೊನಾ ಲಸಿಕೆ, ಯಾವ ಆಸ್ಪತ್ರೆಯಲ್ಲಿ ಎಷ್ಟು ದರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಾದ್ಯಂತ 9 ಪ್ರಯೋಗ ತಾಣಗಳಲ್ಲಿ 875 ರೋಗಿಗಳಲ್ಲಿ ಬೂಸ್ಟರ್ ಡೋಸ್ ಅಧ್ಯಯನಗಳನ್ನು ನಡೆಸಿದ ನಂತರ ರಾಷ್ಟ್ರೀಯ ಔಷಧ ನಿಯಂತ್ರಣ ಈ ಲಸಿಕೆಗೆ ಅನುಮೋದನೆ ನೀಡಿದೆ.

 • News18 Kannada
 • 3-MIN READ
 • Last Updated :
 • Delhi, India
 • Share this:

ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್‌ಕೋವಾಕ್‌ (iNCOVACC) ಜನವರಿಯಿಂದ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಜನವರಿ ನಾಲ್ಕನೇ ವಾರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 325 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ800 ರೂಪಾಯಿಗೆ ಈ ಲಸಿಕೆ ಲಭ್ಯವಿರಲಿದೆ. ಕೋವಿನ್‌ ಅಪ್ಲಿಕೇಷನ್‌ ನಲ್ಲಿ ಈಗಾಗಲೇ iNCOVACC ಎಂಟ್ರಿಯಾಗಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾಗಿದೆ. ಆದ್ರೆ ಅವರು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ನಂತಹ ಎರಡು ಡೋಸ್‌ಗಳ ಲಸಿಕೆಗಳನ್ನು ಮೊದಲೇ ಪಡೆದಿರಬೇಕಾಗುತ್ತದೆ.


ಈ ತಿಂಗಳ ಆರಂಭದಲ್ಲಿ, ಭಾರತ್ ಬಯೋಟೆಕ್ iNCOVACC ಲಸಿಕೆಯು ಬೂಸ್ಟರ್ ಡೋಸ್‌ಗಳ ಬಳಕೆಗಾಗಿ ಕೇಂದ್ರೀಯ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದನೆಯನ್ನು ಪಡೆಯಿತು.


9 ಕಡೆ ಪ್ರಯೋಗ
ಭಾರತದಾದ್ಯಂತ 9 ಪ್ರಯೋಗ ತಾಣಗಳಲ್ಲಿ 875 ರೋಗಿಗಳಲ್ಲಿ ಬೂಸ್ಟರ್ ಡೋಸ್ ಅಧ್ಯಯನಗಳನ್ನು ನಡೆಸಿದ ನಂತರ ರಾಷ್ಟ್ರೀಯ ಔಷಧ ನಿಯಂತ್ರಣ ಈ ಲಸಿಕೆಗೆ ಅನುಮೋದನೆ ನೀಡಿದೆ.


iNCOVACC ಸ್ವೀಕರಿಸುವವರು ಲಾಲಾರಸದಲ್ಲಿ ಅಳೆಯಲಾದ ಮ್ಯೂಕೋಸಲ್ IgA ಪ್ರತಿಕಾಯಗಳ ಗಮನಾರ್ಹ ಮಟ್ಟವನ್ನು ಪ್ರದರ್ಶಿಸಿದ್ದಾರೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿನ ಮ್ಯೂಕೋಸಲ್ IgA ಪ್ರತಿಕಾಯಗಳು ಸೋಂಕುಗಳ ಪ್ರಸರಣವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.


ಮೂಗಿನ ಮೂಲಕ ನೀಡಲಾಗುತ್ತದೆ ಲಸಿಕೆ
iNCOVACC® ಒಂದು ಮರುಸಂಯೋಜಕ ಪುನರಾವರ್ತನೆ-ಕೊರತೆಯ ಅಡೆನೊವೈರಸ್ ವೆಕ್ಟರ್ಡ್ ಲಸಿಕೆಯಾಗಿದೆ. ಈ ಲಸಿಕೆ ಹಂತ I, II ಮತ್ತು III ಕ್ಲಿನಿಕಲ್ ಪ್ರಯೋಗಗಳಲ್ಲಿ ಯಶಸ್ವಿ ಫಲಿತಾಂಶ ನೀಡಿದೆ.


ಮೂಗಿನೊಳಗೆ ಹನಿಗಳ ಮೂಲಕ ಈ ಲಸಿಕೆಯ್ನು ನೀಡಲಾಗುತ್ತದೆ. ಈ ವ್ಯವಸ್ಥೆಯನ್ನು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ವಿತರಣೆಗಾಗಿಯೇ ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಕೋವಿಡ್ -19 ಸೋಂಕು ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಲಾದ ಮೊದಲ ಸೂಜಿ-ರಹಿತ ಬೂಸ್ಟರ್ iNCOVACC ಆಗಲಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.


ಮೂಗಿನ ಲಸಿಕೆಗಳಿಂದ ಹಲವು ಪ್ರಯೋಜನ
ಚುಚ್ಚುಮದ್ದುಗಳಿಗೆ ಹೋಲಿಸಿದರೆ ಮೂಗಿನ ಲಸಿಕೆಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ. ವೈರಸ್‌ನ ಪ್ರವೇಶ ಬಿಂದುಗಳನ್ನು ರಕ್ಷಿಸುವುದರ ಜೊತೆಗೆ, ಈ ಲಸಿಕೆ ಸಂಗ್ರಹಿಸಲು ಹಾಗೂ ವಿತರಿಸಲು ಸುಲಭವಾಗಿದೆ.


ಇದನ್ನೂ ಓದಿ: Tushar Gandhi: ನೋಟುಗಳ ಮೇಲಿನ ಗಾಂಧಿ ಚಿತ್ರವನ್ನೂ ತೆಗೆದುಬಿಡಿ: ಮರಿಮೊಮ್ಮಗನೇ ಹೀಗಂದಿದ್ದೇಕೆ?


"ನಾವು COVAXIN ಮತ್ತು iNCOVACC, ಎರಡು ವಿಭಿನ್ನ ಪ್ಲಾಟ್‌ಫಾರ್ಮ್‌ಗಳಿಂದ ಎರಡು ವಿಭಿನ್ನ ವಿತರಣಾ ವ್ಯವಸ್ಥೆಗಳೊಂದಿಗೆ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ.


ವಿವಿಧ ರಾಜ್ಯಗಳಲ್ಲಿ ಲಸಿಕೆ ಉತ್ಪಾದನೆ
ವೆಕ್ಟರ್ ಇಂಟ್ರಾನಾಸಲ್ ಡೆಲಿವರಿ ಪ್ಲಾಟ್‌ಫಾರ್ಮ್ ಇದಾಗಿದ್ದು ಸಾರ್ವಜನಿಕ ಆರೋಗ್ಯ ತುರ್ತು ಮತ್ತು ಸಾಂಕ್ರಾಮಿಕ ಸಮಯದಲ್ಲಿ ತ್ವರಿತ ಉತ್ಪನ್ನ ಅಭಿವೃದ್ಧಿ, ಸ್ಕೇಲ್-ಅಪ್, ನೋವುರಹಿತ ಪ್ರತಿರಕ್ಷಣೆ ಸಾಮರ್ಥ್ಯವನ್ನು ನೀಡುತ್ತದೆ ಎಂದು ಭಾರತ್ ಬಯೋಟೆಕ್ ಕಾರ್ಯನಿರ್ವಾಹಕ ಅಧ್ಯಕ್ಷ ಡಾ ಕೃಷ್ಣ ಎಲಾ ಹೇಳಿದ್ದಾರೆ. ಕಂಪನಿಯು ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿದಂತೆ ದೊಡ್ಡ ಉತ್ಪಾದನಾ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.


ಅಂದಹಾಗೆ ಈ ಲಸಿಕೆಯನ್ನು ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್, ಪೂರ್ವಭಾವಿ ಸುರಕ್ಷತಾ ಮೌಲ್ಯಮಾಪನಕ್ಕೆ ಸಂಬಂಧಿಸಿದ ಉತ್ಪನ್ನ ಅಭಿವೃದ್ಧಿ, ಬೃಹತ್-ಪ್ರಮಾಣದ ಉತ್ಪಾದನೆ, ವಿತರಣಾ ಸಾಧನ ಅಭಿವೃದ್ಧಿ, ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆ.


ಇದನ್ನೂ ಓದಿ: Manali: 1 ಲಕ್ಷ ಟೂರಿಸ್ಟ್​, 35 ಸಾವಿರ ಗಾಡಿಗಳು, 150 ಪೊಲೀಸ್: ಹೊಸ ವರ್ಷಕ್ಕೂ ಮುನ್ನ ಹೀಗಿದೆ ಮನಾಲಿ ಸ್ಥಿತಿ!


ಉತ್ಪನ್ನ ಅಭಿವೃದ್ಧಿ ಮತ್ತು ಕ್ಲಿನಿಕಲ್ ಪ್ರಯೋಗಗಳಿಗೆ ಭಾರತ ಸರ್ಕಾರವು ಜೈವಿಕ ತಂತ್ರಜ್ಞಾನ ಇಲಾಖೆಯ ಕೋವಿಡ್ ಸುರಕ್ಷಾ ಕಾರ್ಯಕ್ರಮದ ಮೂಲಕ ಭಾಗಶಃ ಹಣವನ್ನು ನೀಡಿದೆ ಎನ್ನಲಾಗಿದೆ. ಒಟ್ಟಾರೆ ಇನ್ನೇನು ಸ್ವಲ್ಪ ದಿನದಲ್ಲಿ ಬೂಸ್ಟರ್‌ ಲಸಿಕೆ ಲಭ್ಯವಾಗುತ್ತಿದೆ ಎನ್ನುವುದೇ ಸಮಾಧಾನಕರ ಸಂಗತಿ.

Published by:ಗುರುಗಣೇಶ ಡಬ್ಗುಳಿ
First published: