ಪಿಎನ್​​ಬಿ ಹಗರಣ: ನೀರವ್​​ ಮೋದಿ ಸಹೋದರ ನೇಹಾಲ್​ಗೆ ಇಂಟರ್​ಪೋಲ್​​ ರೆಡ್ ಕಾರ್ನರ್​​​ ನೋಟಿಸ್​​

ಇತ್ತೀಚೆಗೆ ಪಿಎನ್​​ಬಿ ಹಗರಣದಲ್ಲಿ ನೀರವ್​​ ಮೋದಿ ಸಹೋದರ ನಿಶಾಲ್ ಪಾತ್ರ ಇರಬಹುದು ಎಂದು​ ಲಂಡನ್​​ ನ್ಯಾಯಲಯ ಶಂಕೆ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಇಂಟರ್​​ಪೋಲ್ ರೆಡ್​​ ಕಾರ್ನರ್​​ ನೋಟಿಸ್​ ನೀಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

news18
Updated:September 13, 2019, 12:54 PM IST
ಪಿಎನ್​​ಬಿ ಹಗರಣ: ನೀರವ್​​ ಮೋದಿ ಸಹೋದರ ನೇಹಾಲ್​ಗೆ ಇಂಟರ್​ಪೋಲ್​​ ರೆಡ್ ಕಾರ್ನರ್​​​ ನೋಟಿಸ್​​
ನೀರವ್ ಮೋದಿ
news18
Updated: September 13, 2019, 12:54 PM IST
ನವದೆಹಲಿ(ಸೆ.13): ಪಿಎನ್‍ಬಿ ಬ್ಯಾಂಕ್​ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ವಜ್ರ ವ್ಯಾಪಾರಿ ನೀರವ್ ಮೋದಿ ಸಹೋದರ ನೇಹಾಲ್​​ಗೆ ಇಂಟರ್ ಪೋಲ್ ರೆಡ್ ಕಾರ್ನರ್​​ ನೋಟಿಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ ಮನವಿ ಮೇರೆಗೆ ರೆಡ್​​ ಕಾರ್ನರ್​​ ನೋಟಿಸ್​​ ನೀಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಪಿಎನ್​​ಬಿ ಹಗರಣದಲ್ಲಿ ನೀರವ್​​ ಮೋದಿ ಸಹೋದರ ನಿಶಾಲ್ ಪಾತ್ರ ಇರಬಹುದು ಎಂದು​ ಲಂಡನ್​​ ನ್ಯಾಯಲಯ ಶಂಕೆ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಇಂಟರ್​​ಪೋಲ್ ರೆಡ್​​ ಕಾರ್ನರ್​​ ನೋಟಿಸ್​ ನೀಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

ಈ ಹಿಂದೆ ನೀರವ್​​ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 286 ಕೋಟಿ ಹಣ ತನ್ನ ವಿದೇಶಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಈ ಮೂಲಕ ಹಣವನ್ನು ತನ್ನ ಸ್ವಿಜ್ ಅಕೌಂಟ್​ಗೆ ರವಾನೆ ಮಾಡಲಾಗಿತ್ತು. ಇದನ್ನು ಪತ್ತೆ ಹಚ್ಚಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್​​ ಮೋದಿ ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸಲು ಸ್ವಿಜರ್ಲೆಂಡ್ ಸರ್ಕಾರಕ್ಕೆ  ಒತ್ತಾಯಿಸಿದ್ದರು. ಅಧಿಕಾರಿಗಳ ಒತ್ತಡಕ್ಕೆ ಕೊನೆಗೂ ಮಣಿದಿರುವ ಸ್ವಿಜರ್ಲೆಂಡ್ ನೀರವ್ ಮೋದಿಯವರ ಅಕೌಂಟ್ ಸ್ಥಗಿತಗೊಳಿಸಲು ಮುಂದಾಗಿತ್ತು.

ನ್ಯಾಯಾಲಯದಿಂದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿರುವ 48 ವರ್ಷದ ನೀರವ್ ಮೋದಿ ಲಂಡನ್​ನಲ್ಲಿ ನೆಲೆಸಿದ್ಧಾರೆ. ಈತನನ್ನು​ ಪತ್ತೆ ಹಚ್ಚಿರುವ ಇಡಿ ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್​ಗೆ ಮನವಿ ಮಾಡಿತ್ತು. ಈ ನಿಟ್ಟಿನಲ್ಲಿ ಕಳೆದ ಮಾರ್ಚ್​ನಲ್ಲಿ ಮೋದಿಯನ್ನು ಬಂಧಿಸಿದ್ದ ಲಂಡನ್ ಸರ್ಕಾರ ವಾಂಡ್ಸ್​ವರ್ತ್​ ಜೈಲಿನಲ್ಲಿ ಬಂಧನದಲ್ಲಿಟ್ಟಿದೆ. ಈ ವರೆಗೆ ಮೋದಿ ಜಾಮೀನಿಗಾಗಿ ನಾಲ್ಕು ಬಾರಿ ಮನವಿ ಸಲ್ಲಿಸಿದ್ದರೂ ಅಲ್ಲಿನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ಹಿಂದಿ ದಿವಸ್​​ ವಿರುದ್ಧ ಸೆ.14ಕ್ಕೆ ಕರಾಳ ದಿನಾಚರಣೆ; ಕನ್ನಡಿಗರ ಬೃಹತ್​​ ಹಕ್ಕೊತ್ತಾಯ ಮೆರವಣಿಗೆ

ಏನಿದು ಪ್ರಕರಣ?: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
-----------
Loading...

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...