ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ ಇಂಟರ್​ಪೊಲ್

ನಿತ್ಯಾನಂದ ಸ್ವಾಮಿ ಈಕ್ವೆಡಾರ್​ನಲ್ಲಿದ್ದಾರೆ ಎಂಬ ವಾದವನ್ನು ನಿರಾಕರಿಸಿರುವ ಆ ದೇಶದ ರಾಯಭಾರ ಕಚೇರಿ, ಅವರ ಆಶ್ರಯದ ಮನವಿಯನ್ನು ತಿರಸ್ಕರಿಸಲಾಗಿತ್ತು ಎಂದು ಕಳೆದ ತಿಂಗಳು ಸ್ಪಷ್ಟನೆ ನೀಡಿತ್ತು.

HR Ramesh | news18-kannada
Updated:January 22, 2020, 4:09 PM IST
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ ಇಂಟರ್​ಪೊಲ್
ನಿತ್ಯಾನಂದ ಸ್ವಾಮಿ
  • Share this:
ನವದೆಹಲಿ: ಗುಜರಾತ್ ಪೊಲೀಸರ ಮನವಿ ಮೇರೆಗೆ ಅತ್ಯಾಚಾರ ಮತ್ತು ಅಪಹರಣ ಆರೋಪಿ, ಸ್ವಯಂಘೋಷಿತ ದೇವಮಾವನ ನಿತ್ಯಾನಂದ ಸ್ವಾಮಿ ವಿರುದ್ಧ ಇಂಟರ್​ಪೊಲ್​ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಹಾಗೂ ಅಡಗಿಕೊಂಡಿರುವ ದೇವಮಾನವವನ್ನು ಹುಡುಕಿಕೊಡಲು ಸಹಾಯ ಮಾಡುವುದಾಗಿ ಹೇಳಿದೆ.

ಅಪರಿಚಿತ ಸ್ಥಳಗಳಲ್ಲಿ ನಿತ್ಯಾನಂದ ಧರ್ಮೋಪದೇಶ ನೀಡುವ ವಿಲಕ್ಷಣ ವಿಡಿಯೋಗಳು ಹರಿದಾಡುತ್ತಿವೆಯಾದರೂ, ಅವರು ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿಲ್ಲ.

ನಿತ್ಯಾನಂದ ಸ್ವಾಮಿ ಈಕ್ವೆಡಾರ್​ನಲ್ಲಿದ್ದಾರೆ ಎಂಬ ವಾದವನ್ನು ನಿರಾಕರಿಸಿರುವ ಆ ದೇಶದ ರಾಯಭಾರ ಕಚೇರಿ, ಅವರ ಆಶ್ರಯದ ಮನವಿಯನ್ನು ತಿರಸ್ಕರಿಸಲಾಗಿತ್ತು ಎಂದು ಕಳೆದ ತಿಂಗಳು ಸ್ಪಷ್ಟನೆ ನೀಡಿತ್ತು.

ಅತ್ಯಾಚಾರ ಹಾಗೂ ಅಪಹರಣದ ಆರೋಪಿಯಾಗಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಕೆಲ ದಿನಗಳಿಂದ ನಾಪತ್ತೆಯಾಗಿದ್ಧರು. ತನಿಖಾ ಸಂಸ್ಥೆಗಳು ಅವರ ಪತ್ತೆಗಾಗಿ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಇತ್ತೇಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ನಿತ್ಯಾನಂದ, ತಾವು ಹೊಸ ಹಿಂದೂ ದೇಶ ಕಟ್ಟುತ್ತಿದ್ದು, ಇಲ್ಲಿಗೆ ಯಾರು ಬೇಕಾದರೂ ಬರಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ದೇಶಕ್ಕೆ ಸೇರಿದ ದ್ವೀಪವೊಂದನ್ನು ನಿತ್ಯಾನಂದ ಖರೀದಿಸಿದ್ದು, ಈ ದ್ವೀಪಕ್ಕೆ ಅವರು ಕೈಲಾಸ ಎಂದು ಹೆಸರಿಟ್ಟಿದ್ಧಾರೆ ಎನ್ನಲಾಗಿತ್ತು. ಟ್ರಿನಿಡಾಡ್ ಅಂಡ್ ಟೊಬಾಗೋ ದ್ವೀಪಗಳ ಸಮೀಪ ಇರುವ ಈ ಕೈಲಾಸ ದ್ವೀಪವನ್ನು ಹಿಂದೂ ಸಾರ್ವಭೌಮ ದೇಶ ಎಂದು ಸ್ವಘೋಷಣೆ ಮಾಡಿದ್ದರು. ಇನ್ನೂ ಅಚ್ಚರಿಯ ವಿಷಯವೆಂದರೆ, ಇವರ ಕೈಲಾಸ ರಾಷ್ಟ್ರಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಪಡೆಯಲು ಗಂಭೀರ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅಮೆರಿಕದ ಪ್ರಖ್ಯಾತ ಕಾನೂನು ಸಲಹಾ ಸಂಸ್ಥೆಯೊಂದು ಈಗಾಗಲೇ ಕೈಲಾಸ ರಾಷ್ಟ್ರದ ಮಾನ್ಯತೆಗೆ ವಿಶ್ವಸಂಸ್ಥೆ ಬಳಿ ಅರ್ಜಿ ಗುಜರಾಯಿಸಿದೆ ಎಂಬ ಸುದ್ದಿ ಕೇಳಿಬಂದಿದ್ದವು.

ಬ್ಲೂ ಕಾರ್ನರ್ ನೋಟಿಸ್ ಎಂದರೇನು?

ಬ್ಲೂ ಕಾರ್ನರ್ ನೋಟಿಸ್ ಸಾಮಾನ್ಯವಾಗಿ ವಿಚಾರಣೆಗಾಗಿ ನೀಡಲಾಗುತ್ತದೆ. ಆರೋಪಿಯ ಎಲ್ಲಿದ್ದಾನೆ? ಆರೋಪಿ ಗುರುತು ಪತ್ತೆಗಾಗಿ ಈ ನೋಟಿಸ್ ನೀಡಲಾಗುತ್ತದೆ. ಈ ನೋಟಿಸ್ ಇಂಟರ್ ಪೊಲ್ ಮುಖಾಂತರ ತಲುಪಿಸಲಾಗುತ್ತದೆ. ದೇಶ ಬಿಟ್ಟು ವಿದೇಶಕ್ಕೆ ಹಾರಿದ ಆರೋಪಿಗಳನ್ನು ಕರೆಸಿಕೊಳ್ಳಲು ಇದು ಅಗತ್ಯವಾಗುತ್ತದೆ. ಆದರೆ, ರೆಡ್ ಕಾರ್ನರ್ ನೋಟಿಸ್ ಇದಕ್ಕಿಂತ ಕಠಿಣವಾಗಿದ್ದು, ಜಾರಿ ನಿರ್ದೇಶನಾಲಯ ಈ ನೋಟಿಸ್ ಜಾರಿಗೊಳಿಸಿದರೆ ಆರೋಪಿ ಇದ್ದ ಕಡೆಯಲ್ಲೇ ಆತನನ್ನು ಬಂಧಿಸಿ ಕರೆ ತರಬಹುದಾಗಿದೆ.

ಇದನ್ನು ಓದಿ: ನಿತ್ಯಾನಂದರ ‘ಕೈಲಾಸ’ ವಾಸ; ಅಮೆರಿಕ ಖಂಡದಲ್ಲೊಂದು ಹೊಸ ‘ಹಿಂದೂ ರಾಷ್ಟ್ರ’?
First published: January 22, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading