Crime News: ಸಾಲ ಮಾಡುವ ಮುನ್ನ ಹುಷಾರ್, ಹೆಚ್ಚಿನ ಬಡ್ಡಿ ಕೊಡದಿದ್ದರೆ ಬೆತ್ತಲೆ ಫೋಟೋ ವೈರಲ್ ಮಾಡ್ತಾರಂತೆ!

ಸಾಲ ಕೊಟ್ಟ ಕಂಪನಿ ಏಜೆಂಟ್‌ಗಳು ದಾಖಲೆಗಾಗಿ ಪತಿ, ಪತ್ನಿಯ ಫೋಟೋ ಪಡೆದಿದ್ದರು. ಬಳಿಕ ಫೋಟೋಗಳನ್ನು ಅಶ್ಲೀಲವಾಗಿ ಬದಲಾಯಿಸಿದ್ದಾರಂತೆ. ಅಶ್ಲೀಲ ಫೋಟೋವನ್ನು ಮೊದಲು ದೂರುದಾರರಿಗೆ ಇಮೇಲ್ ಮಾಡಲಾಗಿದೆ, ನಂತರ ಅವರಿಗೆ ಕಾಲ್ ಮಾಡಿ ಬೆದರಿಕೆ ಹಾಕಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗುಜರಾತ್:  “ಸಾಲ (Loan) ಮಾಡಿಯಾದ್ರೂ ಗಡಿಗೆ ತುಪ್ಪ (Ghee) ತಿನ್ನಬೇಕು” ಅಂತಾರೆ ಹಿರಿಯರು. ಈ ಆಧುನಿಕ ಜೀವನದಲ್ಲಿ (Modern Life) ಬಡವನಾಗಿರಲಿ (Poor), ಶ್ರೀಮಂತನೇ (Rich) ಆಗಿರಲಿ ಪ್ರತಿಯೊಬ್ಬರು ಸಾಲ ಮಾಡಿಯೇ ಮಾಡ್ತಾರೆ. ಆದರೆ ಸಾಲ ಪಡೆಯುವ ಪ್ರಮಾಣ ಹೆಚ್ಚು, ಕಡಿಮೆ ಇರಬಹುದು. ಪಡೆದ ಸಾಲಕ್ಕೆ ಬಡ್ಡಿ (Interest), ಅಸಲು ಅಂತ ವಾಪಸ್ ಕಟ್ಟಬೇಕಾಗುತ್ತದೆ. ಕೆಲವೊಮ್ಮೆ ನಿರ್ದಿಷ್ಟ ಸಮಯಕ್ಕೆ ವಾಪಸ್ ಮಾಡಬೇಕಾಗುತ್ತದೆ. ಹೀಗೆ ಸಾಲ ಮರುಪಾವತಿಗೆ ಹೆಚ್ಚು ಕಡಿಮೆ ಆದರೆ ಸಾಲ ಕೊಟ್ಟವರು ಬೈಯ್ಯಬಹುದು, ಮತ್ತೆ ಸಾಲ ಕೊಡುವುದಿಲ್ಲ ಅಂತ ಎಚ್ಚರಿಕೆ (Warn) ಕೊಡಬಹುದು, ಇನ್ನೂ ಜಾಸ್ತಿಯಾದರೆ ಪೊಲೀಸು (Police), ಕೋರ್ಟ್‌ (Court) ಅಂತ ಹೋಗಬಹುದು. ಆದ್ರೆ ಇಲ್ಲಿ ಆಗಿದ್ದೇ ಬೇರೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡಿಲ್ಲ ಅಂತ ಈ ಖದೀಮರು ಸಾಲ ಪಡೆದವನು ಹಾಗೂ ಆತನ ಪತ್ನಿಯ (Wife) ಖಾಸಗಿ ಫೋಟೋ (Privet Photos) ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ (Viral) ಮಾಡುವ ಬೆದರಿಕೆ ಹಾಕಿದ್ದಾರೆ.

 ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ಕೊಟ್ಟ ವ್ಯಕ್ತಿ

 ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ 34 ವರ್ಷದ ವ್ಯಕ್ತಿಯೊಬ್ಬರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಲ ಕೊಟ್ಟ ವ್ಯಕ್ತಿಗಳು ನನಗೆ ಹಾಗೂ ಪತ್ನಿಗೆ ಕಿರಿಕುಳ ನೀಡುತ್ತಿದ್ದಾರೆ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ. ಸಾಲಗಾರರ ಕಿರುಕುಳ ಆದರೆ ಪೊಲೀಸರ ಹತ್ತಿರ ಹೋಗು, ಈ ಸೈಬರ್ ಕ್ರೈಮ್ ಠಾಣೆಗೆ ಯಾಕೆ ಬಂದಿದ್ದೀಯಾ ಅಂತ ಪ್ರಶ್ನಿಸಿದ್ದಾರೆ. ಆದರೆ ಆತ ಹೇಳಿದ ಮಾತು, ಬಂದ ಕಾರಣ, ಆತನಿಗೆ ಆದ ತೊಂದರೆ ನೋಡಿ ಸೈಬರ್ ಕ್ರೈಮ್ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಸಾಲಗಾರರಿಂದ ಪತಿ ಹಾಗೂ ಪತ್ನಿಗೆ ಕಿರುಕುಳ

ಅಹಮದಾಬಾದ್‌ನ ಬೆಹ್ರಾಂಪುರ ಪ್ರದೇಶದಲ್ಲಿ ವಾಸಿಸುವ ಮತ್ತು ಗಾರ್ಮೆಂಟ್ಸ್ ವ್ಯವಹಾರವನ್ನು ಹೊಂದಿರುವ ವ್ಯಕ್ತಿಯೊಬ್ಬರು ಈ ದೂರನ್ನು ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಡಿಸೆಂಬರ್ 28, 2021 ರಂದು, ಕೋವಿಡ್-19 ನಂತರದ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಸ್ನೇಹಿತರೊಬ್ಬರ ಶಿಫಾರಸಿನ ಮೇರೆಗೆ ಅವರು ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದರು. ಆದರೆ ಸಾಲ ಕೊಟ್ಟ ಸಂಸ್ಥೆಯವರೇ ಈಗ ಪೀಡಿಸುತ್ತಿದ್ದಾರಂತೆ.

ಇದನ್ನೂ ಓದಿ: Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ! ತಪ್ಪಿಸೋಕೆ ಬಂದ ಈ ಮಹಾನುಭಾವ ಏನು ಮಾಡಿದ ನೋಡಿ...

ಅವರು ಆರಂಭದಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದರು ಮತ್ತು 6,000 ರೂ ಸಾಲವನ್ನು ವಿನಂತಿಸಿದರು, ವಿವಿಧ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಅವರು ಸುಮಾರು 3,480 ರೂಗಳಿಗೆ ಪಡೆದರು. ಸುಮಾರು ಒಂದು ವಾರದ ನಂತರ 6,000 ರೂ.ಗಳನ್ನು ವಾಪಸ್ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಸಾಲ ಪಾವತಿಸಿದ ನಂತರವೂ ಕಿರುಕುಳ

ಇದೇ ರೀತಿಯ 14 ಅರ್ಜಿಗಳಿಂದ ಒಟ್ಟು 1.20 ಲಕ್ಷ ರೂ.ಗೆ ಸಾಲ ಪಡೆದಿದ್ದ ಅವರು, ಜನವರಿಯಲ್ಲಿ ಒಟ್ಟು 2.36 ಲಕ್ಷ ರೂ. ಆದಾಗ್ಯೂ, ಅವರು ಹಣವನ್ನು ಪಾವತಿಸಿದ ನಂತರ ಇತರ ರಿಕವರಿ ಏಜೆಂಟ್‌ಗಳಿಂದ ಕರೆಗಳನ್ನು ಪಡೆಯುವುದನ್ನು ಮುಂದುವರೆಸಿದರು.

ಬೆತ್ತಲೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ

ಆ ವ್ಯಕ್ತಿಗೆ ಅಂತಹ ಕರೆಗಳು ಬರುತ್ತಿದ್ದವು ಮಾತ್ರವಲ್ಲದೇ, ಬೆದರಿಕೆ ಕರೆಗಳೂ ಕೂಡ ಬರುವುದಕ್ಕೆ ಶುರುವಾಯ್ತಂತೆ. ಇನ್ನೂ ಹೆಚ್ಚಿನ ಹಣ ಕಟ್ಟದಿದ್ದರೆ ನೀನು ಹಾಗೂ ನಿನ್ನ ಪತ್ನಿಯ ಬೆತ್ತಲೆ ಫೋಟೋಗಳು ನಮ್ಮ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Family Dispute: ಆಸ್ತಿ ವಿಚಾರಕ್ಕೆ ಬಡಿದಾಡಿಕೊಂಡ ಜನರು! ಹೊಡೆದಾಟ ಬಿಡಿಸಲು ಬಂದ ಪೊಲೀಸರು ಸುಸ್ತೋ ಸುಸ್ತು!

 ದಾಖಲೆಗಾಗಿ ಫೋಟೋ ತೆಗೆದುಕೊಂಡು ಮಾರ್ಪಿಂಗ್

ಸಾಲ ಕೊಟ್ಟ ಕಂಪನಿ ಏಜೆಂಟ್‌ಗಳು ದಾಖಲೆಗಾಗಿ ಇವರು ಹಾಗೂ ಪತ್ನಿಯ ಫೋಟೋ ಪಡೆದಿದ್ದರು. ಬಳಿಕ ಅವರ ಪತ್ನಿಯ ಚಿತ್ರವನ್ನು ಅಶ್ಲೀಲವಾಗಿ ಬದಲಾಯಿಸಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ. ಅಶ್ಲೀಲ ಫೋಟೋವನ್ನು ಮೊದಲು ದೂರುದಾರರಿಗೆ ಇಮೇಲ್ ಮಾಡಲಾಗಿದೆ, ನಂತರ ಅವರಿಗೆ ಕಾಲ್ ಮಾಡಿ ಬೆದರಿಕೆ ಹಾಕಲಾಗಿದೆ. ವಂಚಕರು ಮತ್ತೆ ಮತ್ತೆ ಕರೆ ಮಾಡಿ, ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಪಟ್ಟ ವ್ಯಕ್ತಿ  ಇದೀಗ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
Published by:Annappa Achari
First published: