ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್​ ಸೌಲಭ್ಯ ಪುನರಾರಂಭ; ಸಾಮಾಜಿಕ ಜಾಲತಾಣದ ಬಳಕೆಗಿಲ್ಲ ಅವಕಾಶ

ಜಮ್ಮು ಮತ್ತು ಕಾಶ್ಮೀರದ ಹೋಟೆಲ್, ಟ್ರಾವೆಲ್ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಲ್ಲಿ ಮತ್ತೆ ಇಂಟರ್ನೆಟ್ ಸೇವೆ ಒದಗಿಸಲಾಗಿದೆ. ಜಮ್ಮು, ಸಾಂಬಾ, ಕಥುವಾ, ರಯೇಸಿ ಜಿಲ್ಲೆಗಳಲ್ಲಿ ಕಡಿಮೆ ವೇಗದ ಇಂಟರ್ನೆಟ್​ ವ್ಯವಸ್ಥೆಯನ್ನು ಒದಗಿಸಲಾಗಿದೆ.

Sushma Chakre | news18-kannada
Updated:January 15, 2020, 10:44 AM IST
ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್​ ಸೌಲಭ್ಯ ಪುನರಾರಂಭ; ಸಾಮಾಜಿಕ ಜಾಲತಾಣದ ಬಳಕೆಗಿಲ್ಲ ಅವಕಾಶ
ಸಾಂದರ್ಭಿಕ ಚಿತ್ರ
  • Share this:
ಶ್ರೀನಗರ (ಜ. 15): ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ನೆಟ್​ವರ್ಕ್, ಇಂಟರ್ನೆಟ್, ಬ್ರಾಡ್​ಬ್ಯಾಂಡ್​ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಆ ಸೇವೆಗಳನ್ನು ಆರಂಭಿಸಿರುವುದಾಗಿ ಜಮ್ಮು ಕಾಶ್ಮೀರ ಆಡಳಿತ ಖಚಿತಪಡಿಸಿದೆ.

5 ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ ಹೋಟೆಲ್, ಟ್ರಾವೆಲ್ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಲ್ಲಿ ಮತ್ತೆ ಇಂಟರ್ನೆಟ್ ಸೇವೆ ಒದಗಿಸಲಾಗಿದೆ. ಜಮ್ಮು, ಸಾಂಬಾ, ಕಥುವಾ, ರಯೇಸಿ ಜಿಲ್ಲೆಗಳಲ್ಲಿ ಕಡಿಮೆ ವೇಗದ ಇಂಟರ್ನೆಟ್​ ವ್ಯವಸ್ಥೆಯನ್ನು ಒದಗಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ಮಾತ್ರ ಇನ್ನೂ ರದ್ದುಪಡಿಸಿಲ್ಲ.

ಕಾಶ್ಮೀರದಲ್ಲಿ 400 ಇಂಟರ್ನೆಟ್ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗುವುದು. ಇಂಟರ್ನೆಟ್​ ಪೂರೈಸುವ ಸಂಸ್ಥೆಗಳು ಅಗತ್ಯ ಸೌಲಭ್ಯಗಳಾದ ಆಸ್ಪತ್ರೆ, ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಮದ್ಯಸೇವನೆ ಮಾಡಿದ ತಮಿಳುನಾಡು ವಿದ್ಯಾರ್ಥಿನಿಯರ ಅಮಾನತು ಪ್ರಕರಣ; ಮಹಿಳಾ ಆಯೋಗದಿಂದ ನೋಟಿಸ್ ಜಾರಿ

ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್​ ಸೇವೆಯನ್ನು ಕಡಿಗೊಳಿಸಿರುವುದಕ್ಕೆ ಸುಪ್ರೀಂಕೋರ್ಟ್​ ಜಮ್ಮು ಆಡಳಿತವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಇಂಟರ್ನೆಟ್​ ಸೇವೆಯನ್ನು ಒದಗಿಸಲಾಗಿದೆ. ಪೋಸ್ಟ್ ಪೇಡ್ ಮೊಬೈಲ್ ಗಳಿಗೆ 2ಜಿ ಸಂಪರ್ಕವನ್ನು ನೀಡಲಾಗಿದ್ದು, ಜಮ್ಮು, ಸಾಬಾ, ಕತುವಾ, ಉಧಂಪುರ ಮತ್ತು ರಯೇಸಿಯಲ್ಲಿ ಇ ಬ್ಯಾಂಕಿಂಗ್ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಆ. 5ರಂದು ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್​ ಸಂಪರ್ಕವನ್ನು ರದ್ದುಗೊಳಿಸಲಾಗಿತ್ತು.

 
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading