ಮಹಾಭಾರತ ಸಂದರ್ಭದಲ್ಲೇ ಇಂಟರ್​ನೆಟ್​ ಇತ್ತು: ತ್ರಿಪುರಾ ಸಿಎಂ


Updated:April 18, 2018, 8:05 PM IST
ಮಹಾಭಾರತ ಸಂದರ್ಭದಲ್ಲೇ ಇಂಟರ್​ನೆಟ್​ ಇತ್ತು: ತ್ರಿಪುರಾ ಸಿಎಂ

Updated: April 18, 2018, 8:05 PM IST
ಅಗರ್ತಲಾ: ಮಹಾಭಾರತದ ಸಂದರ್ಭದಲ್ಲೆ ಇಂಟರ್​ನೆಟ್​ ಹಾಗೂ ಸ್ಯಾಟಲೈಟ್​ ತಂತ್ರಜ್ಞಾನ ಚಾಲ್ತಿಯಲ್ಲಿತ್ತು ಎಂದು ತ್ರಿಪುರಾ ಸಿಎಂ ಬಿಪ್ಲಬ್​ ದೇವ್​ ಹೇಳಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ನ ಪ್ರಾದೇಶಿಕ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಲಕ್ಷಾಂತರ ವರ್ಷಗಳ ಹಿಂದೆ ಇಂಟರ್​ನೆಟ್​ ಎಂಬ ತಂತ್ರಜ್ಞಾನ ಕಂಡುಹಿಡಿದಿದ್ದು ಭಾರತೀಯರು ಎಂದು ಹೇಳಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಧೃತರಾಷ್ಟ್ರನಿಗೆ ಕುರುಕ್ಷೇತ್ರದ 14 ದಿನಗಳ ಯುದ್ಧಭೂಮಿಯ ಘಟನೆಯನ್ನು ಸಂಜಯ ನಿರೂಪಿಸಿದ್ದಾನೆ ಅಂದಲ್ಲಿ ಆಗಲೇ ತಂತ್ರಜ್ಞಾನ ಇತ್ತು ಎನ್ನುವುದು ಗೊತ್ತಾಗುತ್ತದೆ. ಅಂದೇ ಇಂಟರ್ ನೆಟ್, ಉಪಗ್ರಹ ಇತ್ತು. ಸಾವಿರ ವರ್ಷಗಳ ಹಿಂದೇನೆ ತಂತ್ರಜ್ಞಾನದ ಆವಿಷ್ಕಾರ ಆಗಿದೆ. ಒಂದು ವೇಳೆ ಇಂಟರ್ನೆಟ್ ಇಲ್ಲದೇ ಇದ್ದರೆ ಕುರುಕ್ಷೇತ್ರದಲ್ಲಿ ಯುದ್ಧವನ್ನು ಸಂಜಯ ವಿವರಿಸುವಾಗ ಧೃತರಾಷ್ಟ್ರ ಅದನ್ನು ನೋಡಿದ್ದು ಹೇಗೆ? ಇದರರ್ಥ ಇಂಟರ್ನೆಟ್ ಇತ್ತು, ಸ್ಯಾಟಲೈಟ್ ಮತ್ತು ಅದರ ತಂತ್ರಜ್ಞಾನ ಆಗಿನ ಕಾಲದಲ್ಲೇ ಭಾರತದಲ್ಲಿ ಇತ್ತು ಎಂದು ದೇಬ್ ಹೇಳಿದ್ದಾರೆ.

ಯುರೋಪ್​ ಅಮೆರಿಕಾದಂತಹ ದೇಶಗಳು ಇಂಟರ್​ನೆಟ್​ನ್ನು ಮೊದಲನೇ ಬಾರಿಗೆ ಕಂಡು ಹಿಡಿದಿದ್ದು ಎಂದು ಹೇಳುವುದನ್ನು ಒಪ್ಪಲಾರೆ ಎಂದಿರುವ ದೇವ್ ​ಇಷ್ಟೊಂದು ಉತ್ಕೃಷ್ಟ ತಂತ್ರಜ್ಞಾನ ಹೊಂದಿರುವ ದೇಶದಲ್ಲಿ ನಾನು ಹುಟ್ಟಿದ್ದೇನೆ ಎಂಬುದರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ಮಹಾಭಾರತ ಬಳಿಕವೂ ನಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಇತ್ತು ಆದರೆ ಕಾರಣಾಂತರದಿಂದ ಕಳೆದುಕೊಂಡಿದೆ ಎಂದು ದೇವ್​ ನುಡಿದಿದ್ದಾರೆ.

 

 
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ