ಬಾಬಾ ರಾಮದೇವ್
ನ್ಯೂಸ್ 18 ಕನ್ನಡ
ಮುಂಬೈ(ಮೇ. 29): ಬಾಬಾ ರಾಮ್ದೇವ್ BSNL ನೊಂದಿಗೆ ಸೇರಿ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಾಬಾ ರಾಮ್ದೇವ್ ಈಗಾಗಲೇ ಸ್ವದೇಶೀ ಸಿಮ್ ಕಾರ್ಡ್ ಲಾಂಚ್ ಮಾಡಿದ್ದು, ಆರಂಭದಲ್ಲಿ ಇದನ್ನು ಕೇವಲ ಪತಂಜಲಿ ಕರ್ಮಚಾರಿಗಳಿಗಷ್ಟೇ ಸಿಮ್ ಕಾರ್ಡ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈವರೆಗೆ ಸಿಕ್ಕ ಮಾಹಿತಿ ಅನ್ವಯ ಈ ಸಿಮ್ಗೆ 144 ರೂಪಾಯಿಗಳ ರೀಚಾರ್ಜ್ ಮಾಡಿಸಿದಲ್ಲಿ ಬಳಕೆದಾರರಿಗೆ ಅನಿಯಮಿತ ಕರೆಗಳು, 2 ಜಿಬಿ ಡೇಟಾ ಹಾಗೂ 100 SMS ಸೌಲಭ್ಯ ಸಿಗಲಿದೆ. ಇನ್ನು ಸಿಮ್ ಕಾರ್ಡ್ ಮಾರುಕಟ್ಟೆಗೆ ಬಂದ ಬಳಿಕ ಪತಂಜಲಿ ಉತ್ಪನ್ನಗಳ ಮೇಲೆ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ ಎಂದು ತಿಳಿದು ಬಂದಿದೆ.
BSNLನ 5 ಲಕ್ಷ ಕೌಂಟರ್ಸ್ಗಳಲ್ಲಿ ಇನ್ನು ಕೆಲವೇ ದಿನಗಳೊಳಗೆ ಪತಂಜಲಿ ಸ್ವದೆಶೀ ಸಮೃದ್ಧಿ ಕಾರ್ಡ್ ಸಿಗಲಿದೆ ಎಂದು ಬಾಬಾ ರಾಮ್ದೇವ್ ತಿಳಿಸಿದ್ದಾರೆ.
ಪತಂಜಲಿಯ ಸ್ವದೇಶೀ ಸಿಮ್ ಕಾರ್ಡ್ ಬಿಡುಗಡೆಗೊಳಿಸಿದ ಬಳಿಕ ಬಾಬಾ ರಾಮ್ದೇವ್ ಸಾಮಾಜಿಕ ಜಾಲಾತಾಣಗಳಲ್ಲಿ ವಿವಿಧ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ.
First published:
May 29, 2018, 5:00 PM IST