HOME » NEWS » National-international » INTERNATIONAL YOGA DAY 2021 YOGA TAKES US FROM STRESS TO STRENGTH SAYS PM MODI UNVEILS M YOGA APP LG

International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ

PM Narendra Modi Speech: ಯೋಗ ನಮಗಿರುವ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ನಮ್ಮನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಿದೆ ಎಂದು ಮೋದಿ ಹೇಳಿದರು.

news18-kannada
Updated:June 21, 2021, 8:06 AM IST
International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ(ಜೂ.21): ಇಂದು 7ನೇ ಅಂತರಾಷ್ಟ್ರೀಯ ಯೋಗ ದಿನ. ಈ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಗದ ಮಹತ್ವ ಸಾರಿದ್ದಾರೆ. M Yoga Appನ್ನು ಲಾಂಚ್​ ಮಾಡಿ, ‘ಒಂದು ವಿಶ್ವ-ಒಂದು ಆರೋಗ್ಯ‘  ಎಂಬ ಥೀಮ್​ನ್ನು ಅಭಿವೃದ್ಧಿಪಡಿಸಲು ನಾಂದಿ ಹಾಡಿದ್ದಾರೆ. ಇಡೀ ವಿಶ್ವವೇ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾಗ, ಯೋಗ ಭರವಸೆಯ ಕಿರಣವಾಗಿ ಹೊರಹೊಮ್ಮಿತು ಎಂದು ಮೋದಿ ಹೇಳಿದ್ದಾರೆ. ಪ್ರತಿಯೊಂದು ದೇಶ, ಸಮಾಜ ಹಾಗೂ ಪ್ರತಿಯೊಬ್ಬರೂ ಸಹ ಆರೋಗ್ಯವಾಗಿ ಇರಬೇಕು ಎಂದಿದ್ದಾರೆ.

7ನೇ ವರ್ಷದ ಅಂತರಾಷ್ಟ್ರೀಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು, ಇಡೀ ವಿಶ್ವವೇ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾಗ, ಯೋಗ ಭರವಸೆಯ ಕಿರಣವಾಯಿತು. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ಭಾರತ ಸೇರಿದಂತೆ ವಿಶ್ವದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಆದರೆ ಯೋಗದ ಬಗ್ಗೆ ಇರುವ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಿದರು.

‘ಉತ್ತಮ ಆರೋಗ್ಯಕ್ಕಾಗಿ ಯೋಗ‘ ಈ ವರ್ಷದ ಇಂಟರ್​ನ್ಯಾಷನಲ್ ಯೋಗ ದಿನದ ಥೀಮ್ ಆಗಿದೆ. ವಿಶ್ವಾದ್ಯಂತ ಸುಮಾರು 190 ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ‘ಮನೆಯಲ್ಲೇ ಯೋಗ ಮತ್ತು ಕುಟುಂಬದ ಜೊತೆ ಯೋಗ‘. ಅಂದರೆ ಕೊರೋನಾ ಇರುವ ಕಾರಣ ಮನೆಯಲ್ಲೇ ಯೋಗ ಮಾಡಿ ಎಂದು ಹೇಳಲಾಗಿದೆ.

ಇದನ್ನೂ ಓದಿ:Astrology: ಧನುರಾಶಿಯವರಿಗೆ ಧನಲಾಭ, ವಿವಾಹದ ಯೋಗವೂ ಇದೆ... ಎಲ್ಲಾ ರಾಶಿಗಳ ಫಲದ ಬಗ್ಗೆ ಪೂರ್ಣ ವಿವರ ಇಲ್ಲಿದೆ

ಯೋಗ ನಮಗಿರುವ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ನಮ್ಮನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಿದೆ ಎಂದು ಮೋದಿ ಹೇಳಿದರು.

ಮುಂದುವರೆದ ಅವರು, ನಾನು ಮುಂಚೂಣಿ ಕಾರ್ಯಕರ್ತರು ಹಾಗೂ ವೈದ್ಯರ ಜೊತೆ ಮಾತನಾಡುವಾಗ, ಯೋಗ ಕೊರೋನಾ ವೈರಸ್​​ ವಿರುದ್ದ ನಮ್ಮನ್ನು ರಕ್ಷಿಸುವ ಶೀಲ್ಡ್​ ಆಗಿದೆ ಎಂದು ಅವರು ಹೇಳಿದರು. ವೈದ್ಯರು ಅವರನ್ನು ರಕ್ಷಿಸಿಕೊಳ್ಳಲು ಮಾತ್ರ ಯೋಗ ಮಾಡುವುದಿಲ್ಲ. ಬದಲಾಗಿ ರೋಗಿಗಳ ರಕ್ಷಣೆಗಾಗಿಯೂ ಮಾಡುತ್ತಾರೆ. ಇಂದು ಮೆಡಿಕಲ್ ಸೈನ್ಸ್ ಜೊತೆಗೆ ಯೋಗ​ ಕೂಡ ರೋಗ ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ತಿಳಿಸಿದರು.

ಮುಂದುವರೆದ ಅವರು, ಆಸ್ಪತ್ರೆಗಳಲ್ಲಿ ಡಾಕ್ಟರ್​​ಗಳು, ನರ್ಸ್​​ಗಳು ರೋಗಿಗಳಿಗೆ ಯೋಗ ಹೇಳಿಕೊಡುವ ಅನೇಕ ದೃಶ್ಯಗಳನ್ನು ನೋಡಿದ್ದೇನೆ. ಪ್ರಾಣಯಾಮದಂತಹ ಉಸಿರಾಟ ವ್ಯಾಯಾಮಗಳನ್ನು ಮಾಡುತ್ತಾರೆ. ಪ್ರಾಣಯಾಮ ನಮ್ಮ ಉಸಿರಾಟ ವ್ಯವಸ್ಥೆಯನ್ನು ಇನ್ನು ಸದೃಢಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಸಹ ಮುಖ್ಯವಾಗುತ್ತದೆ. ಇದಕ್ಕೆ ಯೋಗ ಸಹಕಾರಿಯಾಗಿದೆ ಎಂದು ಮೋದಿ ಹೇಳಿದರು.ಇದನ್ನೂ ಓದಿ:Karnataka Unlock 2.O: ರಾಜ್ಯದಲ್ಲಿ ಇಂದಿನಿಂದ ಬಸ್, ಮೆಟ್ರೋ​ ಸಂಚಾರ ಆರಂಭ; ಪಾಲಿಸಬೇಕಾದ ನಿಯಮಗಳೇನು?

ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾದರೆ, ಯೋಗವು ಸಮಸ್ಯೆಯನ್ನು ನಿವಾರಿಸಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ಜೊತೆಗೆ ಸಂತೋಷದ ಜೀವನವನ್ನು ಯೋಗ ನಮಗೆ ನೀಡುತ್ತದೆ ಎಂದು ಮೋದಿ ತಿಳಿಸಿದರು.

M Yoga App ಲಾಂಚ್ ಮಾಡಿದ ಪ್ರಧಾನಿ ಮೋದಿ:

7ನೇ ಅಂತರಾಷ್ಟ್ರೀಯ ದಿನದ ಅಂಗವಾಗಿ ಇಂದು ಪ್ರಧಾನಿ ಮೋದಿ M Yoga App ಅನ್ನು ಲಾಂಚ್ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಈ ಆ್ಯಪ್​ನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಗುತ್ತದೆ. M Yoga App ‘ಒಂದು ದೇಶ- ಒಂದು ಆರೋಗ್ಯ‘ ಥೀಮ್​ ಅನ್ನು ಉತ್ತೇಜಿಸಲು ಯೋಗ ಸಹಕಾರಿಯಾಗುತ್ತದೆ ಎಂಬ ಭರವಸೆ ನನಗಿದೆ. ವಿಶ್ವಸಂಸ್ಥೆಯ ಮುಂದೆ ಭಾರತವು ಅಂತರಾಷ್ಟ್ರೀಯ ಯೋಗ ದಿನದ ಬಗ್ಗೆ ಪ್ರಸ್ತಾವನೆ ಇಟ್ಟಾಗ, ಯೋಗ ವಿಜ್ಞಾನವನ್ನು ಇಡೀ ಜಗತ್ತಿಗೆ ಪರಿಚಯಿಸುವ ಉದ್ದೇಶ ಇತ್ತು. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿದೆ ಭಾರತವು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.
Youtube Video

ಈಗ ಎಂ-ಯೋಗ ಆ್ಯಪ್​ ಬಿಡುಗಡೆ ಮಾಡಲಾಗಿದ್ದು, ಇದು ವಿಶ್ವಾದ್ಯಂತ ಜನರಿಗೆ ಸಹಕಾರಿಯಾಗುವಂತೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವಿಡಿಯೋಗಳನ್ನು ಒಳಗೊಂಡಿದೆ. ಇದು ನಮಗೆ ‘ಒಂದು ದೇಶ-ಒಂದು ಆರೋಗ್ಯ‘ ಎಂಬ ಧ್ಯೇಯವಾಕ್ಯದೊಂದಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
Published by: Latha CG
First published: June 21, 2021, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories