International Mother Language Day 2022: ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ, ಇತಿಹಾಸ & ಮಹತ್ವ ತಿಳಿಯಿರಿ

1999 ರಲ್ಲಿ, ಯುನೆಸ್ಕೋ ಫೆಬ್ರವರಿ 21 ಅನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಘೋಷಿಸಿತು. ಅದಾಗಿ ಒಂದು ವರ್ಷಕ್ಕೆ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಉದ್ಘಾಟನಾ ಸಮಾರಂಭ ನೆರವೇರಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾತೃಭಾಷೆ (Mother Language) ಸದಾ ಹೃದಯದಲ್ಲಿ ಇರುವ ಭಾಷೆ. ತಮ್ಮ ತಮ್ಮ ಭಾಷೆಗಳಿಗಾಗಿ ಹೋರಾಡಿದವರ ಮತ್ತು ಪ್ರಾಣ ಕೊಟ್ಟವರ ಉದಾಹರಣೆಗಳು ವಿಶ್ವದಾದ್ಯಂತ (World Wide) ಕಾಣಬಹುದು. ಜನರು ಇಂಗ್ಲೀಷ್ (English) ಭಾಷೆಯ ಒಲವಿನಲ್ಲಿ ಮೈಮರೆಯುತ್ತಿರುವ ಈ ದಿನಗಳಲ್ಲಿ, ಮಾತೃಭಾಷೆಯ ಬಗ್ಗೆ ಪ್ರೇಮವನ್ನು ಬಡಿದೆಬ್ಬಿಸುವ ಅಗತ್ಯವಿದೆ. ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ (International Mother Language Day). ಪ್ರಪಂಚದೆಲ್ಲೆಡೆ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು (ಬಹು ಭಾಷೆಗಳನ್ನು ಮಾತನಾಡುವ ಸಾಮರ್ಥ್ಯ ಅಥವಾ ಬಳಕೆ) ಉತ್ತೇಜಿಸುವ ಉದ್ದೇಶದಿಂದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಕುರಿತ ಅರಿವನ್ನು ಉತ್ತೇಜಿಸಲು ಪ್ರತಿ ವರ್ಷ ಫೆಬ್ರವರಿ 21 ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು 1999 ರ ನವೆಂಬರ್ 17 ರಂದು ಯುನೆಸ್ಕೋ ಘೋಷಿಸಿತು. ಇದು 2002 ರಲ್ಲಿ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿಯಿಂದ ಔಪಚಾರಿಕವಾಗಿ ಗುರುತಿಸಲ್ಪಟ್ಟಿತು. “ಜಗತ್ತಿನ ಜನರು ಬಳಸುವ ಎಲ್ಲಾ ಭಾಷೆಗಳ ಸಂರಕ್ಷಣೆ ಮತ್ತು ರಕ್ಷಣೆಯನ್ನು ಉತ್ತೇಜಿಸಲು” ಈ ದಿನಾಚರಣೆಯು ಒಂದು ವಿಸ್ತಾರವಾದ ಉಪಕ್ರಮದ ಭಾಗವಾಗಿದೆ ಎಂದು ಯುಎನ್ ಜನರಲ್ ಅಸೆಂಬ್ಲಿ ಅಂಗೀಕರಿಸಿದೆ. ಮೊದಲ ಬಾರಿಗೆ, ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಕಲ್ಪನೆಯನ್ನು ಮಾಡಿದ್ದು ಬಾಂಗ್ಲಾದೇಶ.

ಇದನ್ನೂ ಓದಿ: Amit Shah Interview: "ಯೋಗಿ ಸರ್ಕಾರಕ್ಕೆ ಹಿಂದೂ-ಮುಸ್ಲಿಂ ಎಲ್ಲರ ಒಳಿತೂ ಮುಖ್ಯ" ಅಮಿತ್ ಶಾ ಸ್ಪಷ್ಟನೆ

“ಸ್ಥಿರ ಸಮಾಜಗಳಿಗೆ ಇರುವ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯ ಪ್ರಾಮುಖ್ಯತೆಯನ್ನು ಯುನೆಸ್ಕೋ ನಂಬುತ್ತದೆ. ಇದು ಶಾಂತಿಗಾಗಿ, ಇತರರಿಗೆ ಸಹಿಷ್ಣುತೆ ಮತ್ತು ಗೌರವವನ್ನು ಬೆಳೆಸುವ ಸಂಸ್ಕೃತಿಗಳು ಹಾಗೂ ಭಾಷೆಗಳಲ್ಲಿನ ವ್ಯತ್ಯಾಸಗಳನ್ನು ಸಂರಕ್ಷಿಸಲು, ಅದರ ಆದೇಶದೊಳಗೆ ಕೆಲಸ ಮಾಡುತ್ತದೆ” ಎಂದು ಯುನೆಸ್ಕೋ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿರುವ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಕುರಿತ ಪುಟದಲ್ಲಿ ತಿಳಿಸಲಾಗಿದೆ.

ಹಿಂದಿನ ಪೂರ್ವ ಬಂಗಾಳದಲ್ಲಿ, 1952 ರಲ್ಲಿ ಬಂಗಾಳಿ ಭಾಷಾ ಚಳುವಳಿ ಪ್ರಾರಂಭವಾದಾಗ, ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಗೆ ಸಂಬಂಧಿಸಿದಂತೆ ಮೊದಲ ಹೆಜ್ಜೆ ಇಡಲಾಯಿತು. ಅದಾದ 3 ವರ್ಷಗಳ ಬಳಿಕ, ಅಂದರೆ 1955 ರಲ್ಲಿ ಬಾಂಗ್ಲಾದೇಶದಲ್ಲಿ ಭಾಷಾ ಚಳುವಳಿ ದಿನವನ್ನು ಆಚರಿಸಲಾಯಿತು.

1999 ರಲ್ಲಿ, ಯುನೆಸ್ಕೋ ಫೆಬ್ರವರಿ 21 ಅನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಘೋಷಿಸಿತು. ಅದಾಗಿ ಒಂದು ವರ್ಷಕ್ಕೆ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಉದ್ಘಾಟನಾ ಸಮಾರಂಭ ನೆರವೇರಿತು.

ಈ ವರ್ಷದ ಥೀಮ್

ಕಳೆದ 15 ವರ್ಷಗಳಿಂದಲೂ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಒಂದು ಥೀಮ್‍ಗೆ ಅನುಗುಣವಾಗಿ ಆಚರಿಸುತ್ತಾ ಬರಲಾಗುತ್ತಿದೆ. 2006 ರಲ್ಲಿ ಈ ದಿನಾಚರಣೆಗೆ ಪ್ರಪ್ರಥಮ ಬಾರಿಗೆ ಥೀಮ್ ಅನ್ನು ಜೋಡಿಸಿದಾಗ ಆಯ್ಕೆ ಮಾಡಿಕೊಂಡಿದ್ದು “ ಭಾಷೆಗಳು ಮತ್ತು ಸೈಬರ್‌ಸ್ಪೇಸ್‌” ಎಂಬ ಥೀಮ್ ಅನ್ನು. ಅದರ ಮರು ವರ್ಷ, ಅಂದರೆ 2007 ರಲ್ಲಿ “ಬಹು ಭಾಷಾ ಶಿಕ್ಷಣ” ಥೀಮ್ ಇತ್ತು. 2022 ರ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಥೀಮ್ “ಬಹು ಭಾಷಾ ಕಲಿಕೆಗೆ ತಂತ್ರಜ್ಞಾನದ ಬಳಕೆ: ಸವಾಲುಗಳು ಮತ್ತು ಅವಕಾಶಗಳು”. ಇದರ ಮುಖ್ಯ ಉದ್ದೇಶ. ಬಹುಭಾಷಾ ಶಿಕ್ಷಣವನ್ನು ಮುನ್ನಡೆಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಮತ್ತು ಪ್ರತಿಯೊಬ್ಬರಿಗೂ ಗುಣಮಟ್ಟದ ಬೋಧನೆ ಮತ್ತು ಕಲಿಕೆಯ ಅಭಿವೃದ್ಧಿಯನ್ನು ಬೆಂಬಲಿಸುವದರ ಬಗ್ಗೆ ಚರ್ಚಿಸುವುದಾಗಿದೆ.

ಇದನ್ನೂ ಓದಿ: Brain Dead: ಮೆದುಳು ನಿಷ್ಕ್ರಿಯಗೊಂಡ ಬಳಿಕ ಯಾವ್ಯಾವ ಅಂಗಗಳನ್ನು ದಾನ ಮಾಡಬಹುದು?

ಶಿಕ್ಷಣ ರಂಗದಲ್ಲಿ ತಂತ್ರಜ್ಞಾನದ ಬಳಕೆ ಮಾಡುವುದರಿಂದ ಅಪಾರ ಅವಕಾಶಗಳಿಗೆ ಬಾಗಿಲನ್ನು ತೆರೆದಂತಾಗುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಹೆಚ್ಚಿನ ರಾಷ್ಟ್ರಗಳು ಆನ್‍ಲೈನ್ ಕಲಿಕೆಗೆ ಒತ್ತು ನೀಡಿದ್ದನ್ನು ಇದಕ್ಕೆ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಅದರಲ್ಲಿ ಅಲ್ಪಸ್ವಲ್ಪ ತೊಡಕುಗಳಿದ್ದರೂ, ಅವೆಲ್ಲವನ್ನು ನಿವಾರಿಸಿ, ತಂತ್ರಜ್ಞಾನದ ಬಳಕೆಯ ಮೂಲಕ ಬಹುಭಾಷಾ ಕಲಿಕೆ ಮತ್ತು ಬಹುಭಾಷಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ದಿನಗಳಲ್ಲಿ ಹೆಚ್ಚಿನವರು ಅಭಿಪ್ರಾಯ ಪಡುತ್ತಿದ್ದಾರೆ.

2022 ರ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲು, ಯುನೆಸ್ಕೋ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ (ಪ್ಯಾರಿಸ್ ಸಮಯ) ವೆಬಿನಾರನ್ನು ಆಯೋಜಿಸಿದೆ.
Published by:Latha CG
First published: