International Literacy Day 2020: ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ; ಭಾರತದ ಸಾಕ್ಷರತೆ ಪ್ರಮಾಣ ಶೇ.77.7

ಭಾರತದಲ್ಲಿ ಸಾಕ್ಷರತೆಯ ದರವನ್ನು ನೋಡುವುದಾದರೆ, ಕೇರಳ ತನ್ನ ಅಗ್ರ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷರತಾ ದರದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ.

news18-kannada
Updated:September 8, 2020, 1:37 PM IST
International Literacy Day 2020: ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ; ಭಾರತದ ಸಾಕ್ಷರತೆ ಪ್ರಮಾಣ ಶೇ.77.7
ಅಂತರಾಷ್ಟ್ರೀಯ ಸಾಕ್ಷರತಾ ದಿನ
  • Share this:
ನವದೆಹಲಿ(ಸೆಪ್ಟೆಂಬರ್ 08): ಇಂದು ಅಂತರಾಷ್ಟ್ರೀಯ ಸಾಕ್ಷರತಾ ದಿನ. ಸಾಕ್ಷರತೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಪ್ರತೀ ವರ್ಷ ಸೆಪ್ಟೆಂಬರ್ 8ರಂದು ವಿಶ್ವ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಕ್ಷರತೆಯು ವ್ಯಕ್ತಿಯೊಬ್ಬ ಘನತೆಯಿಂದ ಬದುಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಬಿಯಾಗಲು ಸಹಕರಿಸುತ್ತದೆ. ಈ ವರ್ಷ ಕೋರೊನಾ ವೈರಸ್​​ನಂತಹ ಸಾಂಕ್ರಾಮಿಕ ರೋಗದ ನಡುವೆ ಅಂತರಾಷ್ಟ್ರೀಯ ಸಾಕ್ಷರತಾ ದಿನವು ಇನ್ನಷ್ಟು ಮಹತ್ವದದಾಗಿದೆ. ಕೊರೋನಾ ಕಾರಣದಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಆನ್​ಲೈನ್​ ತರಗತಿಗಳು ಪ್ರಾರಂಭವಾಗಿವೆ. ಆನ್​ಲೈನ್​ನಲ್ಲಿ ಮುಖಾಮುಖಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಕಲಿಕೆಯ ವಿಧಾನ ಕೊಂಚ ಬದಲಾಗಿದೆ. ಕೊರೋನಾ ಬಿಕ್ಕಟ್ಟಿನ ಮಧ್ಯೆ, ಲಾಕ್​ಡೌನ್​ನಿಂದಾಗಿ ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ವಯಸ್ಕರು ಸಾಕ್ಷರತಾ ಕಾರ್ಯಕ್ರಮಗಳನ್ನು ತಕ್ಷಣ ಸ್ಥಗಿತಗೊಳಿಸಲಾಗಿದೆ. ಹಿಂದೆ ಗುರುಕುಲ ಪದ್ಧತಿ ಜಾರಿಯಲ್ಲಿತ್ತು, ಈಗ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಈಗ ಕಲಿಕೆಯ ವಿಧಾನ ಹಿಂದಿನ ಕಾಲದಂತಿಲ್ಲ, ಬಹಳಷ್ಟು ಬದಲಾವಣೆಗಳಾಗಿವೆ.

Mysuru Dasara 2020: ಮೈಸೂರು ದಸರಾ, ಜಂಬೂ ಸವಾರಿ ಸಂಬಂಧ ಬೆಂಗಳೂರಿನಲ್ಲಿ ಇಂದು ಉನ್ನತ ಮಟ್ಟದ ಸಭೆ

ಅಂತರಾಷ್ಟ್ರೀಯ ಸಾಕ್ಷರತಾ ದಿನ ವಿಶ್ವಸಂಸ್ಥೆ ಗೊತ್ತುಪಡಿಸಿದ ದಿನವಾಗಿದೆ. ಯುನೆಸ್ಕೋದ ಪ್ರಕಾರ, ಅಂತರಾಷ್ಟ್ರೀಯ ಸಾಕ್ಷರತಾ ದಿನ-2020 ಕೋವಿಡ್​-19 ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಕ್ಷರತೆ ಬೋಧನೆ ಮತ್ತು ಕಲಿಕೆಯ ಮೇಲೆ ಗಮನ ಹರಿಸುತ್ತದೆ. ಅದಕ್ಕೂ ಮೀರಿ ಶಿಕ್ಷಣ ತಜ್ಞರ ಪಾತ್ರ ಹಾಗೂ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಮೇಲೂ ಸಹ ತನ್ನ ಗಮನ ಹರಿಸುತ್ತದೆ. ಮುಖ್ಯವಾಗಿ ಯುವಕರು ಹಾಗೂ ವಯಸ್ಕರನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಹೇಳಿದೆ.

ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು 1967ರ ಸೆಪ್ಟೆಂಬರ್ 8ರಂದು ಗೊತ್ತುಪಡಿಸಲಾಯಿತು. ಆದರೆ ಪ್ರಗತಿಯ ಹೊರತಾಗಿಯೂ, ಇನ್ನೂ ಸಹ ವಿಶ್ವಾದ್ಯಂತ 773 ಮಿಲಿಯನ್ ಯುವಕರು ಹಾಗೂ ವಯಸ್ಕರಿಗೆ ಮೂಲಭೂತ ಸಾಕ್ಷರತಾ ಕೌಶಲ್ಯ ಕೊರತೆ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಭಾರತದಲ್ಲಿ ಸಾಕ್ಷರತೆಯ ದರವನ್ನು ನೋಡುವುದಾದರೆ, ಕೇರಳ ತನ್ನ ಅಗ್ರ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷರತಾ ದರದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ. ಎರಡನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಸಾಕ್ಷರತೆಯ ಪ್ರಮಾಣ ಶೇ. 88.7ರಷ್ಟಿದ್ದರೆ, ಉತ್ತರಾಖಂಡದಲ್ಲಿ ಶೇ. 87.6 ರಷ್ಟು ಹಾಗೂ ಹಿಮಾಚಲ ಪ್ರದೇಶದಲ್ಲಿ ಶೇ. 86.6 ರಷ್ಟಿದೆ. ಆಂಧ್ರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ, ಇತ್ತೀಚಿನ ಸರ್ವೇ ಪ್ರಕಾರ, ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.77.7ರಷ್ಟಿದೆ.
Published by: Latha CG
First published: September 8, 2020, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading