ಸಾಂಕ್ರಾಮಿಕದ ನಡುವೆಯೇ ವಾಯುಯಾನ ಸೇವೆಗಳು ದುಬಾರಿಯಾಗಿದ್ದು ಈ ಚಳಿಗಾಲದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ (International Aviation) ವೆಚ್ಚವು ಕೋವಿಡ್-19 (Covid 19) ಸಾಂಕ್ರಾಮಿಕಕ್ಕಿಂತಲೂ ಮೊದಲು ಇದ್ದ ವೆಚ್ಚಕ್ಕಿಂತ ಕನಿಷ್ಠ 2 - 3 ಪಟ್ಟು ಹೆಚ್ಚು ದುಬಾರಿಯಾಗಿ ಪರಿಣಮಿಸಿದೆ. ಕೋವಿಡ್ ಹೊಸ ರೂಪಾಂತರ ಓಮಿಕ್ರಾನ್ (omicron) ಕಳವಳದ ನಡುವೆಯೇ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಆರಂಭಗೊಂಡಿದ್ದು ಹಿಂದೆ ಇದ್ದ ಬೆಲೆಗಿಂತ ಇದೀಗ ಪ್ರಯಾಣ ವೆಚ್ಚಗಳು ದುಪ್ಪಟ್ಟುಗೊಂಡಿವೆ. ವಿಮಾನ ದರ ಈ ಹಿಂದಿಗಿಂತ ಎಷ್ಟು ಹೆಚ್ಚಾಗಿದೆ ಎಂಬುದನ್ನು ನೋಡೋಣ.
ವಿಮಾನ ಸೇವೆಗಳನ್ನು ಆರಂಭಿಸಿದ್ದರೂ ವಿಮಾನಯಾನ ವ್ಯವಸ್ಥೆಗಳು ಸೀಮಿತವಾಗಿವೆ. ಈ ಕಾರಣದಿಂದಾಗಿ ರಾಷ್ಟ್ರಗಳು ಯಾವ ರೀತಿಯ ವ್ಯವಸ್ಥೆಗಳನ್ನು ಹೊಂದಿವೆ ಎಂಬುದನ್ನು ಆಧರಿಸಿ ವೆಚ್ಚಗಳು ಏರಿಳಿತಗೊಳ್ಳುತ್ತಿವೆ. ಅದೇ ರೀತಿ ಓಮಿಕ್ರಾನ್ ರೂಪಾಂತರದ ಸಮಸ್ಯೆಯ ನಡುವೆಯೇ ಭಾರತದಿಂದ ಯುಎಇ, ಯುಎಸ್, ಬ್ರಿಟನ್ ಮತ್ತು ಕೆನಡಾದಂತಹ ದೇಶಗಳಿಗೆ ವಿಮಾನ ಪ್ರಯಾಣ ದರಗಳು ಏರಿಕೆಯಾಗಿವೆ.
ಲಕ್ಷ ಲಕ್ಷ ಏರಿಕೆ
ದೆಹಲಿಯಿಂದ ಕೆನಡಾದ ಟೊರಂಟೋಗೆ ಅತಿ ಕಡಿಮೆ ವಿಮಾನ ದರ ಈಗ ಅಂದಾಜು 2.37 ಲಕ್ಷ ರೂಗಳು; ಹಿಂದಿನ ಬೆಲೆ ಸುಮಾರು 80,000 ರೂ. ಗಳಾಗಿತ್ತು.
ಬ್ರಿಟನ್‌ನ 'ಕೆಂಪು ಪಟ್ಟಿ' (Red List) ಯಿಂದ ಭಾರತವನ್ನು ಹೊರತೆಗೆದ ನಂತರ, ವಿಮಾನ ಪ್ರಯಾಣಗಳು ಏರಿಕೆಯಾಗುತ್ತಿರುವಂತೆಯೇ, ವಿಮಾನ ದರಗಳು ಹೆಚ್ಚಾಗಲಾರಂಭಿಸಿದವು. ಕನಿಷ್ಠ ಫ್ಲೈಟ್‌ಗಳು ಮತ್ತು ಪ್ರಯಾಣಿಕರ ಹೆಚ್ಚುವರಿ ಪ್ರಯಾಣದಿಂದಾಗಿ ರಿಟರ್ನ್ ಟಿಕೆಟ್ ದರದಲ್ಲೂ ಏರಿಕೆಯಾಗುತ್ತಿವೆ. ಉದಾಹರಣೆಗೆ, ದೆಹಲಿಯಿಂದ ಲಂಡನ್‌ಗೆ ಇದೀಗ ಸುಮಾರು 1.2 ಲಕ್ಷ ರೂ ವೆಚ್ಚವಾಗಿದ್ದು, ಹಿಂದಿನ ದರ 60,000 ರೂ. ಗಳಾಗಿತ್ತು.
ಭಾರತದಿಂದ (Delhi Airport) ಯುಎಇಗೆ ರಿಟರ್ನ್ ಫ್ಲೈಟ್‌ಗಳ (Return Flight) ದರ ದುಪ್ಪಟ್ಟಾಗಿವೆ ಅಂದರೆ 33,000 ರೂ. ಆಗಿದ್ದು, ಈ ಹಿಂದೆ ಸಂಪೂರ್ಣ ಪ್ರಯಾಣ ದರವು (ಹೋಗಿ ಬರುವ ದರ) ಅಂದಾಜು 20,000 ರೂ. ಗಳಾಗಿತ್ತು.
ಶೇ 100ರಷ್ಟು ಏರಿಕೆ
ಸರಾಸರಿಯಾಗಿ, ಭಾರತ-ಅಮೆರಿಕ ರಿಟರ್ನ್ ಟಿಕೆಟ್‌ಗಳ ಬೆಲೆ ಇದೀಗ ಅಂದಾಜು 1.7 ಲಕ್ಷ ರೂ. ಗಳು ಈ ಹಿಂದೆ ಪ್ರಯಾಣ ದರ 90,000 ರೂ. ಗಳು. ಚಿಕಾಗೋ, ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ ಸಿಟಿಗೆ ವಿಮಾನ ದರಗಳು 100% ದಷ್ಟು ಏರಿಕೆ ಕಂಡಿವೆ. ಬ್ಯುಸಿನೆಸ್ ಕ್ಲಾಸ್ ದರ ದುಪ್ಪಟ್ಟುಗೊಂಡು ಸರಿ ಸುಮಾರು 6 ಲಕ್ಷ ರೂ. ತಲುಪಿದೆ.
ಇದನ್ನು ಓದಿ: ಕೋವಿಡ್ ಲಸಿಕೆ ಪಡೆಯದಿದ್ರೆ ಮದ್ಯ, ರೇಷನ್ ಇಲ್ಲ; ಕರ್ನಾಟಕ ಸೇರಿದಂತೆ ಅನೇಕ ರಾಜ್ಯದಲ್ಲಿ ನಿಯಮ
ಪ್ರಯಾಣ ದರಗಳಲ್ಲಿ ಉಂಟಾಗಿರುವ ಏರಿಕೆಯು ಕೋವಿಡ್ ಸಾಂಕ್ರಾಮಿಕದ ನಡುವೆಯೇ ಪ್ರಯಾಣಿಕರಿಗೆ ಹೆಚ್ಚಿನ ಸಂಕಷ್ಟವನ್ನು ತಂದೊಡ್ಡಲಿವೆ. ಈ ನಡುವೆಯೇ ವಿಮಾನ ಪ್ರಯಾಣಿಕರು ಸರಕಾರವನ್ನು ಹೆಚ್ಚುವರಿ ವಿಮಾನ ಸೇವೆಗಳಿಗಾಗಿ ವಿನಂತಿಸಿಕೊಂಡಿದ್ದಾರೆ. ಪ್ರಸ್ತುತ ವಿಮಾನ ಸೇವೆಗಳು ಕನಿಷ್ಠವಾಗಿರುವುದರಿಂದ ಪ್ರಯಾಣ ದರದಲ್ಲೂ ದುಪ್ಪಟ್ಟು ಏರಿಕೆಯ ಬಿಸಿ ಪ್ರಯಾಣಿಕರನ್ನು ತಟ್ಟುತ್ತಿದೆ.
ಇದನ್ನು ಓದಿ: ವ್ಯಾಟ್ ಕಡಿತಗೊಳಿಸಿದ ದೆಹಲಿ ಸರ್ಕಾರ; ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಪ್ರೀತಿ ಚೋಪ್ರಾ ಬೆಲೆ ಏರಿಕೆಯ ಬಿಸಿಯಿಂದಾಗಿ ಅನುಭವಿಸುತ್ತಿರುವ ಕಷ್ಟವನ್ನು ನಿವೇದಿಸಿಕೊಂಡಿದ್ದು ವಿಮಾನಯಾನ ಬೆಲೆಗಳು ವಿಪರೀತವಾಗಿದ್ದು ಆಗಾಗ್ಗೆ ಪ್ರಯಾಣಿಸಬೇಕೆಂಬ ನಮ್ಮ ಆಸೆಗೆ ತಣ್ಣೀರೆರಚಿದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅದೇ ರೀತಿ ಪ್ರಯಾಣಿಕರು ಎರಡು ಕೋವಿಡ್ ಪರೀಕ್ಷೆ ವರದಿಗಳನ್ನು ನೀಡಬೇಕಾಗಿದ್ದು ಒಂದು ತಲುಪುವ ಸ್ಥಳಕ್ಕೆ ಹೋಗಬೇಕಾದಾಗ ಅದೇ ರೀತಿ ಅಲ್ಲಿಂದ ಮರಳುವಾಗ ಇನ್ನೊಂದು ಕೋವಿಡ್ ಪರೀಕ್ಷೆಯನ್ನು ನಡೆಸಬೇಕಾಗಿದೆ.
ಸೇವೆ ಪುನರ್ ಆರಂಭ
ಕೇಂದ್ರವು ಡಿಸೆಂಬರ್ 15 ರಿಂದ ನಿಯಮಿತ ಅಂತರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸುತ್ತಿದ್ದು, 14 ದೇಶಗಳಲ್ಲಿ ಸೀಮಿತ ಸೇವೆಗಳು ಇರುತ್ತವೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. "ಅಪಾಯದಲ್ಲಿರುವ" ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮತ್ತು ಆ ಮೂಲಕ 100% ಅಂತರಾಷ್ಟ್ರೀಯ ವಿಮಾನಗಳ ಪುನರಾರಂಭವನ್ನು ಕಾಣದ ದೇಶಗಳೆಂದರೆ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಫಿನ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂ ಝೀಲ್ಯಾಂಡ್, ಜಿಂಬಾಬ್ವೆ ಮತ್ತು ಸಿಂಗಾಪುರ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ