International Cat Day 2021: ನಾಯಿಯಂತೆ ಬೆಕ್ಕು ಕೂಡಾ ನೆಚ್ಚಿನ ಸಾಕುಪ್ರಾಣಿಯಾಗಿದ್ದು ಹೇಗೆ? ಅಂದ್ಹಾಗೆ ನಿಮಗೆ ಬೆಕ್ಕು ಇಷ್ಟಾನಾ?

International Cat Day 2021: ಬೆಕ್ಕುಗಳು ಬೇರೆ ಸಾಕು ಪ್ರಾಣಿಗಳಿಗೆ ಹೋಲಿಸಿದರೆ ವಿಭಿನ್ನ. ಇವುಗಳು ಪ್ರೀತಿಯನ್ನು ತೋರಿಸುವ ಪರಿ ಬೇರೆಯದ್ದೇ ಆಗಿರುತ್ತದೆ. ಬೆಕ್ಕುಗಳು ಹೆಚ್ಚಾಗಿ ಅದರ ತುಂಟಾಗಳಿಗೆ ಪ್ರಸಿದ್ಧ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
International Cat Day: ನಾಯಿ ಮತ್ತು ಬೆಕ್ಕು ಅಥವಾ ಯಾವುದೇ ಸಾಕುಪ್ರಾಣಿ  ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಹೆಚ್ಚಿನ ಜನರ ಮನೆಯಲ್ಲಿ ಒಂದು ನಾಯಿ ಅಥವಾ ಬೆಕ್ಕು ಇದ್ದೇ ಇರುತ್ತದೆ. ಅವುಗಳನ್ನು ಸಹ ಮನುಷ್ಯರಂತೆ ನೋಡಿಕೊಳ್ಳುವುದರ ಜೊತೆಗೆ ಅಷ್ಟೇ ಪ್ರೀತಿಯನ್ನು ನೀಡಲಾಗುತ್ತದೆ. ಅವುಗಳ ಹುಟ್ಟಿದ ದಿನದಿಂದ ಹಿಡಿದು ಪ್ರತಿಯೊಂದನ್ನು ಆಚರಿಸಿ ಸಂಭ್ರಮಪಡುತ್ತಾರೆ. ಅವುಗಳು ಕೂಡ ಮನೆಯ ಸದಸ್ಯರಾಗುತ್ತವೆ. ಇನ್ನು ಆಗಸ್ಟ್ 8 ರಂದು, ವಿಶ್ವ ಅಂತರಾಷ್ಟ್ರೀಯ ಬೆಕ್ಕು ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸಾಕುಪ್ರಾಣಿಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಪ್ರಾಣಿ ಕಲ್ಯಾಣಕ್ಕಾಗಿ ಅಂತರಾಷ್ಟ್ರೀಯ ನಿಧಿ  ಸಂಸ್ಥೆಯು 2002ರಿಂದ ಈ ದಿನವನ್ನು ಆಚರಿಸುವಂತೆ ಘೋಷಣೆ ಮಾಡಿದ್ದು, ಅಂದಿನಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಇನ್ನು ಈ ಬೆಕ್ಕುಗಳು ಹೆಚ್ಚು ಮಾಂಸಹಾರಿಗಳಾಗಿವೆ. ಅಲ್ಲದೇ ಭೂಮಿಯಲ್ಲಿರುವ  cool ಜೀವಿಗಳಲ್ಲಿ ಬೆಕ್ಕು ಸಹ ಒಂದು. ಸ್ವತಂತ್ರವಾಗಿರುವುದು, ಸಾಹಸ ಮಾಡುವುದು ಇವೆಲ್ಲವೂ  ಈ ಸಣ್ಣ ಪ್ರಾಣಿಗೆ ಸೂಕ್ತವಾಗಿದೆ.

ಈ ದಿನವನ್ನು ಬೆಕ್ಕುಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಹಾಗೂ ಅದರ ಪ್ರೀತಿಯ ಅರಿವು ಮೂಡಿಸಲು ಆಚರಿಸಲಾಗುತ್ತದೆ. ಅಲ್ಲದೇ ಈ ದಿನದಂದು ಹೆಚ್ಚಿನ ಜನರು ಈ  ರಸ್ತೆಯಲ್ಲಿರುವ ಬೆಕ್ಕುಗಳನ್ನು ದತ್ತು ಪಡೆಯಲು ಹಾಗೂ ಬೆಕ್ಕಿನ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೇ ಬೆಕ್ಕಿನ ಆಹಾರ ಪದ್ಧತಿಗಳೇನು, ಅವುಗಳನ್ನು ಎಂಥಹ ಸ್ಥಳದಲ್ಲಿ ಸಾಕಬೇಕು ಸೇರಿದಂತೆ ಹಲವಾರು ವಿಚಾರಗಳನ್ನು ತಿಳಿಸಲೆಂದು ಈ ದಿನವನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ: ನೀರು ಅಂದ್ರೆ ಅಲರ್ಜಿ: ಸ್ನಾನ ಮಾಡುವ ಪ್ರಕ್ರಿಯೆ ನೋವು ಕೊಡುತ್ತದೆಯಂತೆ ಈ ಯುವತಿಗೆ..!

ಬೆಕ್ಕುಗಳು ಬೇರೆ ಸಾಕು ಪ್ರಾಣಿಗಳಿಗೆ ಹೋಲಿಸಿದರೆ ವಿಭಿನ್ನ. ಇವುಗಳು ಪ್ರೀತಿಯನ್ನು ತೋರಿಸುವ ಪರಿ ಬೇರೆಯದ್ದೇ ಆಗಿರುತ್ತದೆ. ಬೆಕ್ಕುಗಳು ಹೆಚ್ಚಾಗಿ ಅದರ ತುಂಟಾಟಗಳಿಗೆ ಪ್ರಸಿದ್ಧ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಬೆಕ್ಕುಗಳ ಆಟಾಟೋಪಾದ ವಿಡಿಯೋಗಳು ಹೆಚ್ಚು ವೈರಲ್ ಆಗಿ, ಜನರ ಪ್ರೀತಿಗೆ ಪಾತ್ರರಾಗುತ್ತವೆ.

ನೀವು ಬೆಕ್ಕಿನೊಂದಿಗೆ ಬದುಕುವುದು ಎಂದರೆ ಅದರ ಪ್ರಪಂಚದೊಳಗೆ ಜೀವಿಸಿದಂತೆ ಅರ್ಥ. ಅವುಗಳಿಗೆ ದಿನಿತ್ಯದ ಆಹಾರ, ತಿಂಡಿ ತಿನಿಸುಗಳನ್ನು ನೀಡುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವುದು ನಿಮ್ಮ ಕರ್ತವ್ಯ.  ನೀವು ಅವುಗಳನ್ನು ನೋಡಿಕೊಳ್ಳುತ್ತಿದ್ದೀರಿ ಎಂದರೆ ಅವುಗಳ ಒಡನಾಡಿ ಎಂದರ್ಥ. ಬೆಕ್ಕು ಮನೆಯಲ್ಲಿದ್ದರೆ ಒಂದು ವಿಚಾರವನ್ನು ನೀವು ತಿಳಿದಿರಬೇಕು. ಅದೇನೆಂದರೆ ಬೆಕ್ಕು ಮನೆಯ ಯಜಮಾನ ಎಂಬುದು. ಅದೇನೆ ಇರಲಿ ಬೆಕ್ಕಿನೊಡನೆ ಜೀವನ ನಡೆಸುವುದೇ ಒಂದು ಅದ್ಭುತ ಸಂಗತಿ.

ಬೆಕ್ಕು ನಮ್ಮ ಜೀವನದ ಭಾಗವಾಗಿ ಬಿಡುತ್ತದೆ. ನಮ್ಮ ಬದುಕನ್ನ ಸಂಪೂರ್ಣವಾಗಿ ಆವರಿಸಿಕೊಂಡು ಬಿಡುತ್ತವೆ. ಅವುಗಳೊಂದಿಗೆ ನೀವು ಮಾತನಾಡಲು ಆರಂಭಿಸುತ್ತೀರಾ.  ಅಷ್ಟೇ ಅಲ್ಲದೇ ನೀವೇ ಬೇಕಾದರೆ ಗಮನಿಸಿ ನಿಮ್ಮ ಫೋನ್​ನಲ್ಲಿ ನಿಮ್ಮ ಫೋಟೋಗಿಂತ ಹೆಚ್ಚಾಗಿ ನಿಮ್ಮ ಮುದ್ದಿನ ಬೆಕ್ಕಿನ ಫೋಟೋ ಹೆಚ್ಚಿರುತ್ತದೆ.

ಇದನ್ನೂ ಓದಿ: ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು: ಯಾರು ಇದನ್ನು ತಿನ್ನಬಾರದು..!

ಇವೆಲ್ಲ ಒಂದೆಡೆಯಾದರೇ ಬೆಕ್ಕು ಮತ್ತು ನಾಯಿಯ ವಿಚಾರವಾಗಿ ಹಲವು ವಾದ ವಿವಾದಗಳು ನಡೆಯುತ್ತವೆ. ಕೆಲವರು ಬೆಕ್ಕು ಬೆಸ್ಟ್ ಎಂದರೆ , ಇನ್ನು ಕೆಲವರು ನಾಯಿ ಬೆಸ್ಟ್ ಎಂದು ವಾದಿಸುತ್ತಾರೆ.  ಅವರ ಈ ಚರ್ಚೆ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ.

ಇದು ಎಷ್ಟು ಚರ್ಚೆಯ ವಿಷಯ ಎಂದರೆ ಜನರು ಎರಡು ವರ್ಗಗಳಾಗಿ ವಿಂಗಡಿಸಿಕೊಂಡಿದ್ದಾರೆ .   Dog Person ಮತ್ತು  Cat Person ಎಂದು. ಸಂಶೋಧನೆಗಳ ಪ್ರಕಾರ ಜನರ ಗುಣದ ಅನುಸಾರವಾಗಿ ಅವರು ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಬೆಕ್ಕನ್ನು ಇಷ್ಟಪಡುವ ಜನರು  ಹೆಚ್ಚು  ಜನರೊಂದಿಗೆ ಬೆರೆಯುವುದಿಲ್ಲ ಮತ್ತು ಹೊಸ ಅನ್ವೇಷಣೆಯನ್ನು ಮಾಡಲು ಸಿದ್ಧರಿರುವುದಿಲ್ಲ. ಆದರೆ ನಾಯಿ ಇಷ್ಟಪಡುವ ಜನರು ಹೆಚ್ಚು ಸಾಮಾಜಿಕವಾಗಿರುತ್ತಾರೆ ಮತ್ತು ಹೊಸ ಅನುಭವಗಳಿಗೆ ತಮ್ಮನ್ನ ನಾವು ತೆರೆದಿಡುತ್ತಾರೆ.

ಸಾಕುಪ್ರಾಣಿಗಳು ಪ್ರತಿಯೊಬ್ಬರ ಜೀವನದ ಅದ್ಭುತ ಅಂಶ. ಸಾಕುಪ್ರಾಣಿಯನ್ನು ಹೊಂದಿರುವುದು ಒಬ್ಬ ವ್ಯಕ್ತಿಗೆ ಜೀವನದಲ್ಲಿ ಸಹಾನುಭೂತಿ, ಪ್ರೀತಿ ಮತ್ತು ಕಾಳಜಿಯನ್ನು ಕಲಿಸುತ್ತದೆ.
Published by:Sandhya M
First published: