• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ವಿಮಾನಗಳ ಪ್ರಯಾಣಿಕರಿಗೆ ಬಿಸಿ ಆಹಾರ ನೀಡಲು ಅನುಮತಿ; ಮಾಸ್ಕ್ ಧರಿಸದವರು ಫ್ಲೈಟ್ ಹತ್ತುವಂತಿಲ್ಲ

ವಿಮಾನಗಳ ಪ್ರಯಾಣಿಕರಿಗೆ ಬಿಸಿ ಆಹಾರ ನೀಡಲು ಅನುಮತಿ; ಮಾಸ್ಕ್ ಧರಿಸದವರು ಫ್ಲೈಟ್ ಹತ್ತುವಂತಿಲ್ಲ

ವಿಮಾನ

ವಿಮಾನ

ಇನ್ನುಮುಂದೆ ದೇಶೀಯ ವಿಮಾನಗಳಲ್ಲಿ ಮೊದಲೇ ಪ್ಯಾಕ್ ಮಾಡಿ ಇಡಲಾದ ಊಟ-ತಿಂಡಿಗಳನ್ನು ನೀಡಲಾಗುವುದು. ಹಾಗೇ, ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಬಿಸಿಯಾದ ಆಹಾರವನ್ನು ನೀಡಲಾಗುವುದು.

  • Share this:

ನವದೆಹಲಿ (ಆ. 28): ಕೊರೋನಾದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಹಾಗೂ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದೀಗ ವಿಮಾನ ಪ್ರಯಾಣಿಕರ ಮೇಲಿನ ನಿರ್ಬಂಧವನ್ನು ಕೊಂಚ ಸಡಿಲಗೊಳಿಸಲಾಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಊಟ-ತಿಂಡಿ ವಿತರಿಸಲು ಅನುಮತಿ ನೀಡಲಾಗಿದೆ.


ಇದಕ್ಕೂ ಮೊದಲು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಬಿಸಿ ಆಹಾರ ವಿತರಿಸುವುದನ್ನು ನಿರ್ಬಂಧಿಸಲಾಗಿತ್ತು. ಕೊರೋನಾ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಇನ್ನುಮುಂದೆ ದೇಶೀಯ ವಿಮಾನಗಳಲ್ಲಿ ಮೊದಲೇ ಪ್ಯಾಕ್ ಮಾಡಿ ಇಡಲಾದ ಊಟ-ತಿಂಡಿಗಳನ್ನು ನೀಡಲಾಗುವುದು. ಹಾಗೇ, ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಬಿಸಿಯಾದ ಆಹಾರವನ್ನು ನೀಡಲಾಗುವುದು. ಈ ಮೂಲಕ ಇನ್ನುಮುಂದೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರಿಗೆ ಊಟ-ತಿಂಡಿ ವಿತರಿಸಲಾಗುವುದು.



ಇದನ್ನೂ ಓದಿ: ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಕೆ.ಜೆ. ಜಾರ್ಜ್​ಗೆ ಮತ್ತೆ ಸಮನ್ಸ್​ ಜಾರಿ


ಏರ್​ಲೈನ್​ಗಳಿಗೆ ಕೆಲವು ಸೂಚನೆಯನ್ನೂ ನೀಡಲಾಗಿದ್ದು, ಪ್ರಯಾಣಿಕರಿಗೆ ನೀಡುವ ಊಟದ ಟ್ರೇ ಸೆಟಪ್​ಗಳನ್ನು ಮತ್ತೆ ಬಳಸಬಾರದು. ಟೀ, ಕಾಫಿ ಮುಂತಾದ ಪಾನೀಯಗಳನ್ನೂ ಯೂಸ್​ ಆ್ಯಂಡ್ ಥ್ರೋ ಕಪ್, ಬಾಟಲಿ​ಗಳಲ್ಲಿಯೇ ನೀಡಬೇಕು ಎಂದು ಸೂಚಿಸಲಾಗಿದೆ. ಪ್ರತಿಬಾರಿ ಊಟ-ತಿಂಡಿಗಳನ್ನು ನೀಡುವಾಗಲೂ ವಿಮಾನದ ಸಿಬ್ಬಂದಿ ಹೊಸ ಗ್ಲೌಸ್​ಗಳನ್ನು ಹಾಕಿಕೊಳ್ಳಬೇಕು ಎಂದು ಕೂಡ ಆದೇಶಿಸಲಾಗಿದೆ.




ಹಾಗೇ, ವಿಮಾನದಲ್ಲಿ ಪ್ರಯಾಣಿಸುವವರಿಗೆ ಇಯರ್​ ಫೋನ್​ಗಳನ್ನು ನೀಡುವುದಾದರೆ ಯೂಸ್​ ಆ್ಯಂಡ್​ ಥ್ರೋ ಇಯರ್ ಫೋನ್​ಗಳನ್ನೇ ನೀಡಬೇಕು ಎಂದು ಸೂಚಿಸಲಾಗಿದೆ. ಈ ಮೊದಲು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಲಾಕ್​ಡೌನ್ ಬಳಿಕ ಕೇವಲ ಪ್ಯಾಕ್ ಮಾಡಿದ ಮತ್ತು ತಂಪು ಆಹಾರಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದಿಷ್ಟೇ ಅಲ್ಲದೆ, ವಿಮಾನದ ಪ್ರಯಾಣಿಕರಲ್ಲಿ ಯಾರಾದರೂ ಮಾಸ್ಕ್ ಧರಿಸದೆ ಇದ್ದರೆ ಅವರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಬೇಕೆಂದು ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ.

top videos
    First published: