ಮಂಗಳ ಗ್ರಹದಲ್ಲಿ (MARS) ಒಂದು ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸಲು ಬಯಸುವಿರಾದರೆ ನಾಸಾ(NASA) ನಿಮಗಾಗಿ ಯೋಜನೆಯೊಂದನ್ನು ಹೊರತಂದಿದೆ. ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ಮಾಡಿರುವ ನಾಸಾ ಗ್ರಹ ಹೋಲುವ 3ಡಿ ಪ್ರಿಂಟೆಂಡ್ ಪ್ರದೇಶದಲ್ಲಿ ವಾಸಿಸಲು 4 ಜನರಿಗೆ ಅವಕಾಶ ನೀಡಲಿದೆ. ಈ ಸಲುವಾಗಿ ಅರ್ಜಿಗಳನ್ನು ಸ್ವೀಕರಿಸಲು ಸಂಸ್ಥೆ ಪ್ರಾರಂಭಿಸಿದ್ದು ಇಲ್ಲಿ ವಾಸಿಸಲು ಬಯಸುವವರು ಮುಕ್ತವಾಗಿ ಅರ್ಜಿ ಹಾಕಬಹುದಾಗಿದೆ.1,700 ಚದರ ಅಡಿಯ ಮಂಗಳ ಗ್ರಹವನ್ನು ಹೋಲುವ 3ಡಿ ಚಿತ್ರವನ್ನು ನಾಸಾ ಹೂಸ್ಟನ್‌ನ ಜಾನ್ಸನ್ ಸ್ಪೇಸ್ ಸೆಂಟರ್‌ನಲ್ಲಿರುವ ಕಟ್ಟಡದೊಳಗೆ ರಚಿಸಿದೆ. ಹಣ ಪಾವತಿಸಿದ ಭಾಗವಹಿಸುವವರು ಮನೆಯೊಂದಿಗೆ ಸೀಮಿತ ಸಂವಹನ, ನಿರ್ಬಂಧಿತ ಆಹಾರ ಹಾಗೂ ಸಂಪನ್ಮೂಲಗಳ ಜೊತೆಗೆ ಪರಿಕರಗಳ ವಿಫಲತೆಯೊಂದಿಗೆ ಅಂತರಿಕ್ಷದ ಮಂಗಳ ಪರಿಶೋಧನಾ ಕಾರ್ಯಾಚರಣೆ ಪೂರ್ಣಗೊಳಿಸುತ್ತಾರೆ.
ಮುಂದಿನ ವರ್ಷ ಶರತ್ಕಾಲದಲ್ಲಿ ಆರಂಭವಾಗುವ ಮೊದಲ ಪ್ರಯೋಗದೊಂದಿಗೆ ನಾಸಾ ಈ ಮೂರು ಪ್ರಯೋಗಗಳನ್ನು ಯೋಜಿಸುತ್ತಿದೆ. ಬಾಹ್ಯಾಕಾಶದ ಸಿದ್ಧ ಆಹಾರ ದೊರೆಯಲಿದ್ದು ಈ ಸಮಯದಲ್ಲಿ ಯಾವುದೇ ಯೋಜನೆಗಳನ್ನು ಸಂಸ್ಥೆ ರಚಿಸಿಲ್ಲ. “ದಿ ಮಾರ್ಟಿಯನ್” ಚಲನಚಿತ್ರದಲ್ಲಿ ಆಲೂಗಡ್ಡೆಗಳನ್ನು ಬೆಳೆದ ಹಾಗೆ ಕೆಲವೊಂದು ಸಸ್ಯಗಳನ್ನು ಬೆಳೆಸಬಹುದಾಗಿದ್ದರೂ ಆಲೂಗಡ್ಡೆ ಬೆಳೆಸುವ ಹಾಗಿಲ್ಲ. ಮಾನವರ ಕಾರ್ಯನಿರ್ವಹಣೆ ನೋಡುವುದಕ್ಕಾಗಿ ನಾಸಾ ಯೋಜನೆಯನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದೆ. ನಾವು ಗ್ರಹದ ವಾಸ್ತವಿಕ ಸನ್ನಿವೇಶಗಳನ್ನು ನೋಡುತ್ತಿದ್ದೇವೆ ಎಂದು ಪ್ರಮುಖ ವಿಜ್ಞಾನಿ ಗ್ರೇಸ್ ಡೌಗ್ಲಾಸ್ ತಿಳಿಸಿದ್ದಾರೆ.
ಅಪ್ಲಿಕೇಶನ್ ಪ್ರಕ್ರಿಯೆ ಆರಂಭವಾಗಿದ್ದು ಯಾರನ್ನೂ ಈ ಯೋಜನೆಗಾಗಿ ಹುಡುಕುತ್ತಿಲ್ಲ. ವಿಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪೈಲಟ್ ಅನುಭವ ಸೇರಿದಂತೆ ಅವಶ್ಯಕತೆಗಳು ಕಟ್ಟುನಿಟ್ಟಾಗಿವೆ. ಅಮೆರಿಕದ ನಾಗರಿಕರು ಅಥವಾ ಖಾಯಂ ಯುಎಸ್ ನಿವಾಸಿಗಳು ಮಾತ್ರ ಅರ್ಹರು. ಅರ್ಜಿದಾರರ ವಯಸ್ಸು 30 ರಿಂದ 55ರ ಒಳಗೆ ಇರಬೇಕು. ಜೊತೆಗೆ ಯಾವುದೇ ದೈಹಿಕ ಸಮಸ್ಯೆಗಳಿಲ್ಲದೆ ಆರೋಗ್ಯವಂತರಾಗಿರಬೇಕು ಹಾಗೂ ಚಲನೆಯ ಕಾಯಿಲೆಗೆ ಒಳಗಾಗಿರಬಾರದು ಎಂದು ನಾಸಾ ಸ್ಪಷ್ಟಪಡಿಸಿದೆ.
ಗಗನಯಾತ್ರಿಗಳಂತಿರುವ ಜನರನ್ನು ನಾಸಾ ಹುಡುಕುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದ್ದು ಮಂಗಳ ಗ್ರಹಕ್ಕೆ ಹೋಗಲು ನಿಜವಾದ ಅರ್ಹತೆ ಪಡೆದ ಜನರಾದರೆ ಈ ಪ್ರಯೋಗಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ಕೆನಡಾದ ಗಗನಯಾತ್ರಿ ಕ್ರಿಸ್ ಹ್ಯಾಡ್‌ಫೀಲ್ಡ್ ತಿಳಿಸಿದ್ದಾರೆ. ಮಾರ್ಸ್ 500 ಎಂದು ಕರೆಯಲಾದ ಯೋಜನೆಯೊಂದರಲ್ಲಿ ಈ ಹಿಂದೆ ರಷ್ಯಾ ಕೂಡ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸಿತ್ತು. ಆದರೆ ಇವರುಗಳು ಸಾಮಾನ್ಯ ಜನರಾಗಿದ್ದರು. ಅಂತೆಯೇ ಗಗನ ಯಾತ್ರೆಯ ಯಾವುದೇ ಜ್ಞಾನ ಇವರಿಗಿರಲಿಲ್ಲ. ಹೀಗಾಗಿ ಈ ಯೋಜನೆ ವಿಫಲವಾಯಿತು ಎಂದು ಕ್ರಿಸ್ ನೆನಪಿಸಿಕೊಂಡಿದ್ದಾರೆ.
ಅರ್ಹತೆಯುಳ್ಳ ಸರಿಯಾದ ವ್ಯಕ್ತಿಗೆ ಇದೊಂದು ಜೀವಮಾನದ ಅದ್ಭುತ ಅನುಭವವಾಗಿರುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನಲ್ಲಿನ ಕಕ್ಷೆಯಲ್ಲಿ 5 ತಿಂಗಳ ಕಾಲ ನೆಲೆಸಿದ್ದ ಹ್ಯಾಡ್‌ಫೀಲ್ಡ್ ತಮ್ಮ ಅಭಿಪ್ರಾಯ ತಿಳಿಸಿದ್ದು ಅಲ್ಲಿದ್ದುಕೊಂಡೇ ಗಿಟಾರ್ ನುಡಿಸಿ “ಸ್ಪೇಸ್ ಓಡಿಟಿ” ಎಂಬ ಡೇವಿಡ್ ಬೋವಿಯವರ ಕವರ್ ವಿಡಿಯೋ ಹಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ