Intel-Jio Deal: ಜಿಯೋ ಮೇಲೆ 12ನೇ ಹೂಡಿಕೆ; 0.39 ಪಾಲನ್ನು 1,894 ಕೋಟಿ ರೂಪಾಯಿಗೆ ಖರೀದಿಸಿದ ಇಂಟೆಲ್

ಇಂಟೆಲ್​ ಹೂಡಿಕೆಯಿಂದಾಗಿ ಜಿಯೋ ಈವರೆಗೆ  1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು.

news18-kannada
Updated:July 3, 2020, 8:41 AM IST
Intel-Jio Deal: ಜಿಯೋ ಮೇಲೆ 12ನೇ ಹೂಡಿಕೆ; 0.39 ಪಾಲನ್ನು 1,894 ಕೋಟಿ ರೂಪಾಯಿಗೆ ಖರೀದಿಸಿದ ಇಂಟೆಲ್
ರಿಲಾಯನ್ಸ್ ಜಿಯೋ
  • Share this:
ಮುಂಬೈ (ಜು.3): ರಿಲಾಯನ್ಸ್​ ಇಂಡಸ್ಟ್ರೀಸ್​ ಅಡಿಯಲ್ಲಿ ಬರುವ ಜಿಯೋ ಮೇಲೆ ಕೇವಲ 11 ವಾರಗಳಲ್ಲಿ 12ನೇ ಹೂಡಿಕೆ ಆಗಿದೆ. ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿ ಇಂಟೆಲ್​ ಜಿಯೋದ 0.39 ಪಾಲನ್ನು 1894 ಕೋಟಿ ರೂಪಾಯಿಗೆ ಖರೀದಿಸಿದೆ,

ಇಂಟೆಲ್​ ಹೂಡಿಕೆಯಿಂದಾಗಿ ಜಿಯೋ ಈವರೆಗೆ  1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು. ಇದಾದ ನಂತರ ಸಿಲ್ವರ ಲೇಕ್​ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬದಲ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್ಟನ್​, ಪಿಐಎಫ್​ ಮತ್ತು ಇಂಟೆಲ್​ ಹೂಡಿಕೆ ಮಾಡಿದೆ.

ಸಂಸ್ಥೆಯೊಂದು ನಿರಂತರವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಪಡೆದಿದ್ದು ಇದೇ ಮೊದಲು ಎನ್ನಲಾಗಿದೆ. ಕಳೆದ ವರ್ಷ ಇಕೋಸಿಸ್ಟಮ್ ಹೆಸರಿನ ಸ್ಟಾರ್ಟ್​ಅಪ್​ 1.10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಪಡೆದಿತ್ತು.

ಈ ಒಪ್ಪಂದದ ಕುರಿತಾಗಿ ಮಾತನಾಡಿರುವ ಮುಖೇಶ್​ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂಟೆಲ್​ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ಬೆಳೆಸಲು ಇಂಟೆಲ್​ ಜೊತೆಗಿನ ಒಪ್ಪಂದ ಸಹಕಾರಿ ಆಗಲಿದೆ. 130 ಕೋಟಿ ಜನರಿಗೆ ಇದರ ಸಹಾಯ ಆಗಲಿದೆ ಎಂದು ಅವರು ಹೇಳಿದ್ದಾರೆ.
First published: July 3, 2020, 8:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading