Intel-Jio Deal: ಜಿಯೋ ಹೊಸ ಪಾರ್ಟ್ನರ್​​​​ ಇಂಟೆಲ್​​ ಕಂಪನಿ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು

ಇಂಟೆಲ್​​ ಜಿಯೋ ಕಂಪನಿಯಲ್ಲಿ 1,894.5 ಕೋಟಿ ರೂ. ಹಣ ಹೂಡಿಕೆ ಮಾಡುವ ಮೂಲಕ ಶೇಕಡಾ 0.39 ಪಾಲನ್ನು ಖರೀದಿಸಿದೆ. ಹೀಗೆ ಲವು ಕಂಪನಿಗಳ ಬೆನ್ನಲ್ಲೀಗ ಇಂಟೆಲ್​​ ಮುಕೇಶ್ ಅಂಬಾನಿ ಜಿಯೋ ಕಂಪನಿಯೊಂದಿಗೆ ಕೈಜೋಡಿಸಿದೆ. ಜಿಯೋ ಹೊಸ ಪಾರ್ಟ್ನರ್ ಆದ ಈ ಇಂಟೆಲ್​​ ಕಂಪನಿ ಬಗ್ಗೆ ಒಂದಷ್ಟು ಮಾಹಿತಿ ನಿಮ್ಮ ಮುಂದೆ.

news18-kannada
Updated:July 3, 2020, 1:44 PM IST
Intel-Jio Deal: ಜಿಯೋ ಹೊಸ ಪಾರ್ಟ್ನರ್​​​​ ಇಂಟೆಲ್​​ ಕಂಪನಿ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು
ಜಿಯೋ-ಇಂಟೆಲ್ ಕಂಪನಿಗಳು​​
  • Share this:
ನವದೆಹಲಿ(ಜು.03): ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲು ಜಗತ್ತಿನ ಹಲವು ಕಂಪನಿಗಳು ಮುಂದೆ ಬರುತ್ತಿವೆ. ಈಗಾಗಲೇ ಫೇಸ್​ಬುಕ್, ಸಿಲ್ವರ್​​ ಲೇಕ್ ಪಾರ್ಟ್ಸ್ ನರ್ಸ್, ವಿಸ್ತಾ ಈಕ್ವೆಟಿ ಪಾರ್ಟ್ಸ್ ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲಾ, ಅಡಿಯಾ, ಟಿಪಿಜಿ, ಎಲ್ ಕ್ಯಾಟ್ಟರ್ಟನ್, ಪಿಐಎಫ್​​ ಮುಂತಾದ ಕಂಪನಿಗಳು ಜಿಯೊ ಪ್ಲಾಟ್ ಫಾರ್ಮ್​​​ನಲ್ಲಿ ಹೂಡಿಕೆ ಮಾಡಿವೆ. ಈ ಸಾಲಿಗೆ ಮತ್ತೊಂದು ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿ ಇಂಟೆಲ್ ಸೇರ್ಪಡೆಯಾಗಿದೆ.

ಇಂಟೆಲ್​​ ಜಿಯೋ ಕಂಪನಿಯಲ್ಲಿ 1,894.5 ಕೋಟಿ ರೂ. ಹಣ ಹೂಡಿಕೆ ಮಾಡುವ ಮೂಲಕ ಶೇಕಡಾ 0.39 ಪಾಲನ್ನು ಖರೀದಿಸಿದೆ. ಹೀಗೆ ಲವು ಕಂಪನಿಗಳ ಬೆನ್ನಲ್ಲೀಗ ಇಂಟೆಲ್​​ ಮುಕೇಶ್ ಅಂಬಾನಿ ಜಿಯೋ ಕಂಪನಿಯೊಂದಿಗೆ ಕೈಜೋಡಿಸಿದೆ. ಜಿಯೋ ಹೊಸ ಪಾರ್ಟ್ನರ್ ಆದ ಈ ಇಂಟೆಲ್​​ ಕಂಪನಿ ಬಗ್ಗೆ ಒಂದಷ್ಟು ಮಾಹಿತಿ ನಿಮ್ಮ ಮುಂದೆ.

ಇಂಟೆಲ್​​​ ಕಂಪನಿ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಷ್ಟು ಅಂಶಗಳು..

  • ಇಂಟೆಲ್ ಕಾರ್ಪೊರೇಶನ್ ಅಮೆರಿಕಾ ಮೂಲದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ.

  • ಇಂಟೆಲ್​​ ಕಂಪನಿಯೂ ಯುಎಸ್​ಎ ದೇಶದಲ್ಲಿರುವ ಕ್ಯಾಲಿಫೋರ್ನಿಯಾ ಸಂತ ಕ್ಲಾರದಲ್ಲಿದೆ

  • ರಾಬರ್ಟ್ ನಾಯ್ಸ್ ಮತ್ತು ಗೋರ್ಡನ್ ಮೂರ್‌ ಎಂಬುವರು 1968ರ ಜುಲೈ 18ರಂದು ಈ ಕಂಪನಿಯನ್ನು ಸ್ಥಾಪಿಸಿದರು
  • ಇಂಟೆಲ್ ಕಂಪನಿಯು ಸೆಮಿಕಂಡಕ್ಟರ್​​ ಚಿಪ್​​, ಪರ್ಸನಲ್​​ ಕಂಪ್ಯೂಟರ್​​ಗೆ ವಾಣಿಜ್ಯ ಮೈಕ್ರೋಪ್ರೋಸೆಸರ್‌ ಚಿಪ್ ಸೇರಿದಂತೆ ಹಲವು ವಸ್ತುಗಳ ಒದಗಿಸುವಲ್ಲಿ ಯಶಸ್ಸು ಸಾಧಿಸಿದೆ

  • ಬಾಬ್​ ಸ್ವಾನ್​​ ಎಂಬುವರು ಇಂಟೆಲ್​​ ಕಂಪನಿಯ 7ನೇ ಸಿಇಒ ಆಗಿ 2019ರಲ್ಲಿ ಜನವರಿ 31ನೇ ತಾರೀಕಿನಂದು ನೇಮಕವಾದರು

  • ಇಂಟೆಲ್​​ ಕಂಪನಿ ಭಾರತದಲ್ಲಿ ಎರಡು ದಶಗಳಿಂದ ವ್ಯವಹಾರ ಮಾಡುತ್ತಿದೆ

  • ಸಾವಿರಾರು ಮಂದಿ ಭಾರತೀಯರು ಇಂಟೆಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ಧಾರೆ

  • 1991ರಿಂದ ಇಲ್ಲಿಯವರೆಗೂ ಇಂಟೆಲ್​ ಕಂಪನಿ ಪ್ರಪಂಚದ 1,582 ಕಂಪನಿಗಳಲ್ಲಿ 12.9 ಬಿಲಿಯನ್​​ ಯುಸ್ ಡಾಲರ್ಸ್​​ ಹೂಡಿಕೆ ಮಾಡಿದೆ

  • ಈಗ ಜಿಯೋ ಸಂಸ್ಥೆಯಲ್ಲಿ ಶೇರ್​ ಖರಿದೀಸುವ ಮೂಲಕ ಸಿನಿಮಾ, ಮ್ಯೂಸಿಕ್​​ ಸೇರಿದಂತೆ ಟೆಲಿಕಾಂ ಉದ್ಯಮಕ್ಕೂ ಕಾಲಿಟ್ಟಿದೆ​​


ಇದನ್ನೂ ಓದಿ: Intel-Jio Deal: ಇಂಟೆಲ್​-ಜಿಯೋ 1,894 ಕೋಟಿ ರೂ. ಒಪ್ಪಂದದ ಬಗ್ಗೆ ಎರಡು ಕಂಪನಿಗಳು ಹೇಳಿದ್ದೇನು?
First published: July 3, 2020, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading