Intel-Jio Deal: ಇಂಟೆಲ್​-ಜಿಯೋ 1,894 ಕೋಟಿ ರೂ. ಒಪ್ಪಂದದ ಬಗ್ಗೆ ಎರಡು ಕಂಪನಿಗಳು ಹೇಳಿದ್ದೇನು?

ಇಂಟೆಲ್​​ ಕಂಪನಿ ಜಿಯೋ ಫಾರ್ಮ್​​ನಲ್ಲಿ 1,894.50 ಕೋಟಿ ರೂ. ಹೂಡಿಕೆ ಮಾಡಿದೆ. ಈ ಮೂಲಕ ಜಿಯೋದಲ್ಲಿ ಶೇಕಡಾ 0.39 ಪರ್ಸೆಂಟ್ ಪಾಲು ಖರೀದಿ ಮಾಡಿದೆ. ಇದರ ಷೇರು ಮೌಲ್ಯ 4.91 ಲಕ್ಷ ಕೋಟಿ ರೂ. ಮತ್ತು ಉದ್ಯಮ ಮೌಲ್ಯ 5.16 ಕೋಟಿ ರೂ. ಆಗಿದೆ.

news18-kannada
Updated:July 3, 2020, 2:21 PM IST
Intel-Jio Deal: ಇಂಟೆಲ್​-ಜಿಯೋ 1,894 ಕೋಟಿ ರೂ. ಒಪ್ಪಂದದ ಬಗ್ಗೆ ಎರಡು ಕಂಪನಿಗಳು ಹೇಳಿದ್ದೇನು?
ಜಿಯೋ-ಇಂಟೆಲ್ ಕಂಪನಿಗಳು​​
  • Share this:
ನವದೆಹಲಿ(ಜು.03): ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಕಂಪನಿಯಲ್ಲಿ ಹೂಡಿಕೆ ಮುಂದುವರಿದಿದೆ. ಇತ್ತೀಚೆಗಷ್ಟೇ ಫೇಸ್​ಬುಕ್, ಸಿಲ್ವರ್​​ ಲೇಕ್ ಪಾರ್ಟ್ಸ್ ನರ್ಸ್, ವಿಸ್ತಾ ಈಕ್ವೆಟಿ ಪಾರ್ಟ್ಸ್ ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲಾ, ಅಡಿಯಾ, ಟಿಪಿಜಿ, ಎಲ್ ಕ್ಯಾಟ್ಟರ್ಟನ್, ಪಿಐಎಫ್​​ ಮುಂತಾದ ಕಂಪನಿಗಳು ಜಿಯೊ ಪ್ಲಾಟ್ ಫಾರ್ಮ್​​​ನಲ್ಲಿ ಹೂಡಿಕೆ ಮಾಡಿದ್ದವು. ಈ ಬೆನ್ನಲ್ಲೀಗ ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿ ಇಂಟೆಲ್ ಕಂಪನಿಯೂ ಜಿಯೊ ಪ್ಲಾಟ್ ಫಾರ್ಮ್​​ನಲ್ಲಿ ಹೂಡಿಕೆ ಮಾಡಿದೆ.

ಇಂಟೆಲ್​​ ಕಂಪನಿ ಜಿಯೋ ಫಾರ್ಮ್​​ನಲ್ಲಿ 1,894.50 ಕೋಟಿ ರೂ. ಹೂಡಿಕೆ ಮಾಡಿದೆ. ಈ ಮೂಲಕ ಜಿಯೋದಲ್ಲಿ ಶೇಕಡಾ 0.39 ಪರ್ಸೆಂಟ್ ಪಾಲು ಖರೀದಿ ಮಾಡಿದೆ. ಇದರ ಷೇರು ಮೌಲ್ಯ 4.91 ಲಕ್ಷ ಕೋಟಿ ರೂ. ಮತ್ತು ಉದ್ಯಮ ಮೌಲ್ಯ 5.16 ಕೋಟಿ ರೂ. ಆಗಿದೆ.

ಇಂಟೆಲ್ ಕಂಪನಿಗೆ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್​​ಗೆ 1,68,818 ಕೋಟಿ ರೂ. ಹೂಡಿಕೆ 10 ದೊಡ್ಡ ಕಂಪನಿಗಳಿಂದ ಹರಿದು ಬಂದಿತ್ತು. ಆದರೀಗ ಇಂಟೆಲ್​​ ಕಂಪನಿ ಹೂಡಿಕೆ ಪರಿಣಾಮ ಜಿಯೋ ಇದುವರೆಗೂ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ.

ಇನ್ನು, ಈ ಒಪ್ಪಂದದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಪ್ರಪಂಚದ ದೈತ್ಯ ಕಂಪನಿ ಇಂಟೆಲ್​​ ಜತೆಗೆ ಜಿಯೋ ಕೈಜೋಡಿಸಿದೆ. ನಾವು ಜಗತ್ತಿನಾದ್ಯಂತ ಡಿಜಿಟಲ್​​ ಮಾರ್ಕೆಟ್​​ ವಿಸ್ತರಣೆಗಾಗಿ ಕೆಲಸ ಮಾಡಲಿದ್ದೇವೆ. ಇಂಟೆಲ್​​​​ ಜಗತ್ತನ್ನು ಸಂಶೋಧನೆ ಮತ್ತು ತಂತ್ರಜ್ಞಾನದ ಮೂಲಕ ಬದಲಾವಣೆ ಮಾಡಲು ಹೊರಟಿದೆ. 1.3 ಬಿಲಿಯನ್ ಭಾರತೀಯರ ಎಲ್ಲಾ ಕ್ಷೇತ್ರಗಳ ಆರ್ಥಿಕತೆ ಸದೃಢಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: Intel-Jio Deal: ಜಿಯೋ ಮೇಲೆ 12ನೇ ಹೂಡಿಕೆ; 0.39 ಪಾಲನ್ನು 1,894 ಕೋಟಿ ರೂಪಾಯಿಗೆ ಖರೀದಿಸಿದ ಇಂಟೆಲ್

ಜಿಯೋ ಕಂಪನಿಯೂ ಇಂಟೆಲ್​​ ಜತೆಗೆ ಸೇರಿ ಭಾರತೀಯರಿಗೆ ಕಡಿಮೆ ದರದಲ್ಲಿ ಡಿಜಿಟಲ್​​​​​ ಸರ್ವೀಸ್​​ ಸಿಗುವಂತೆ ಮಾಡುವ ಉದ್ದೇಶ ಹೊಂದಿದೆ. ಇದು ಜನರ ಬದುಕನ್ನು ಮತ್ತಷ್ಟು ಶ್ರೀಮಂಗಗೊಳಿಸಲಿದೆ. ನಾವು ಡಿಜಿಟಲ್​​ ಯುಗ ಮತ್ತು ಮಾಹಿತಿ ತಂತ್ರಜ್ಞಾನದಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇವೆ ಎಂದರು ಇಂಟೆಲ್​​ ಕ್ಯಾಪಿಟಲ್​​​ ಪ್ರೆಸಿಡೆಂಟ್​​ ತಮ್ಮ ಅಭಿಪ್ರಾಯ ಹಂಚಿಕೊಂಡರು.
First published: July 3, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading