Insurance Scam: ಸಾಲ ತೀರಿಸಲು ಭಯಾನಕ ಹಾದಿ ಹಿಡಿದ ಮಹಿಳೆ: 8 ಕೋಟಿ ವಿಮೆ ಮೊತ್ತಕ್ಕಾಗಿ ಹೀಗಾ ಮಾಡೋದು?

Insurance Scammer: ಬಿಬಿಸಿ ವರದಿಯ ಪ್ರಕಾರ, 2019 ರಲ್ಲಿ, ಸ್ಲೊವೇನಿಯಾದ 22 ವರ್ಷದ ಮಹಿಳೆ ಜೂಲಿಜಾ ಅಡ್ಲೆಸಿಕ್ ಅವರನ್ನು ವಿಮಾ ವಂಚನೆ ಮಾಡಿದ ಆರೋಪದ ಮೇಲೆ ಲುಬ್ಜಾನಾ ನಗರದಿಂದ ಬಂಧಿಸಲಾಗಿದೆ.

ವಿಮೆಗಾಗಿ ಕೈಕತ್ತರಿಸಿಕೊಂಡ ಜೂಲಿಜಾ ಅಡ್ಲೆಸಿಕ್

ವಿಮೆಗಾಗಿ ಕೈಕತ್ತರಿಸಿಕೊಂಡ ಜೂಲಿಜಾ ಅಡ್ಲೆಸಿಕ್

  • Share this:
ಸ್ಲೋವೇನಿಯನ್(ಸೆ.11): ಸಾಲವು (Debt) ಒಬ್ಬ ವ್ಯಕ್ತಿಯನ್ನು ಅದ್ಯಾವ ರೀತಿ ಕಾಡುತ್ತದೆ ಎಂದರೆ, ತಾನು ಮಾಡಲು ಬಯಸದ ಕೆಲಸ ಮಾಡಲೂ ಕೆಲವೊಮ್ಮೆ ಮುಂದಾಗಬೇಕಾಗುತ್ತದೆ. ಸಾಲದಲ್ಲಿರುವ ವ್ಯಕ್ತಿಯ ಜೀವನವು ತುಂಬಾ ನಿರಾಶಾದಾಯಕವಾಗಿರುತ್ತದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಾರೆ. ತಾನು ಗಳಿಸಿದ ಬಹುಪಾಲು ಹಣವನ್ನು ಸಾಲ ತೀರಿಸಲು ವ್ಯಯಿಸಬೇಕಾಗುತ್ತದೆ. ಸದ್ಯ ಸ್ಲೋವೇನಿಯನ್​ನಲ್ಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಮಹಿಳೆ ವಿಮೆಯ (Insurance) ಹಣ ಕ್ಲೈಮ್ ಮಾಡಲು ಕೈ ಕತ್ತರಿಸಿಕೊಂಡಿದ್ದಾಳೆ. ಆಕೆಗೆ ಭಾರೀ ಪ್ರಮಾಣದ ಸಾಲವಿತ್ತೆನ್ನಲಾಗಿದೆ. ಹೀಗಿರುವಾಗ ಆಕೆ ತನ್ನ ಸಾಲ ತೀರಿಸಲು ಅನೇಕ ಮಾರ್ಗಗಳನ್ನು ಹುಡುಕಿದ್ದಾಳೆ. ಈ ನಡುವೆ ಆಕೆ ಬಳಸಿದ ಮಾರ್ಗ ಆಕೆಯನ್ನು ನೇರವಾಗಿ ಜೈಲುಪಾಲಾಗುವಂತೆ ಮಾಡಿದೆ. ಇದೀಗ ಜೈಲಿನಿಂದ (Jail) ಮುಕ್ತಿ ಸಿಕ್ಕಿದ್ದರಿಂದ ಮತ್ತೆ ಚರ್ಚೆಯಲ್ಲಿದ್ದಾರೆ. ಆದರೆ ಈ ಬಾರಿ ಆಕೆಯ ಒಳ್ಳೆಯ ಕೆಲಸಗಳ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ವಿಮೆಗಾಗಿ ಹೈಡ್ರಾಮಾ: 

ಬಿಬಿಸಿ ವರದಿಯ ಪ್ರಕಾರ, 2019 ರಲ್ಲಿ, ಸ್ಲೊವೇನಿಯಾದ 22 ವರ್ಷದ ಮಹಿಳೆ ಜೂಲಿಜಾ ಅಡ್ಲೆಸಿಕ್ ಅವರನ್ನು ವಿಮಾ ವಂಚನೆ ಮಾಡಿದ ಆರೋಪದ ಮೇಲೆ ಲುಬ್ಜಾನಾ ನಗರದಿಂದ ಬಂಧಿಸಲಾಯಿತು. ಜೂಲಿಜಾ ಹೆಸರಿನಲ್ಲಿ ಸುಮಾರು 8 ಕೋಟಿ ರೂ.ಗೆ 5 ವಿಮಾ ಪಾಲಿಸಿಗಳಿದ್ದವು. ಡೈಲಿ ಸ್ಟಾರ್ ವರದಿ ಪ್ರಕಾರ, ಆಕೆ ಸಾಕಷ್ಟು ಸಾಲದಲ್ಲಿದ್ದರೂ ಮರುಪಾವತಿಸಲು ಆಕೆಯ ಬಳಿ ಹಣವಿರಲಿಲ್ಲ. ಆದ್ದರಿಂದ ಆಕೆಯ ಗೆಳೆಯ ಸೆಬಾಸಿಯನ್ ಅಬ್ರಮೊವ್ ತನ್ನ ಹೆತ್ತವರೊಂದಿಗೆ ಸೇರಿ ಒಂದು ಯೋಜನೆಯನ್ನು ಮಾಡಿದಳು.

ಇದನ್ನೂ ಓದಿ: ದೇಶದ ಮೊದಲ ಖಾಸಗಿ ರೈಲು! ಎಲ್ಲೆಲ್ಲಿ ಸಂಚರಿಸುತ್ತೆ? ಇಲ್ಲಿದೆ ನೋಡಿ

ವಿಮಾ ಹಣವನ್ನು ಪಡೆಯಲು ತನ್ನ ಸ್ವಂತ ಕೈಗಳನ್ನೇ ಕತ್ತರಿಸಿಕೊಂಡಳು

ಆಕೆ ವಿಮಾ ಮೊತ್ತವನ್ನು ಪಡೆಯಲು ಜೂಲಿಜಾ ಹೊಳೆದಿದ್ದು ಕೈ ಕತ್ತರಿಸಿಕೊಳ್ಳುವ ಪ್ಲಾನ್. ವಿಮೆಯ ನಿಯಮಗಳ ಪ್ರಕಾರ, ಜೂಲಿಜಾಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಅವಳು ಪ್ರತಿ ತಿಂಗಳು ದೊಡ್ಡ ಮೊತ್ತದ ವಿಮೆ ಮತ್ತು ಉಳಿದ ಹಣವನ್ನು ಸಣ್ಣ ಮೊತ್ತದಲ್ಲಿ ಪಡೆಯಲು ಸಾಧ್ಯವಿತ್ತು. ಮಹಿಳೆ ಸ್ವತಃ ಗರಗಸದಿಂದ ತನ್ನ ಒಂದು ಕೈಯನ್ನು ಕತ್ತರಿಸಿದ್ದಾಳೆ. ಆಸ್ಪತ್ರೆ ತಲುಪಿದಾಗ ಕತ್ತರಿಸಿದ ಕೈಯನ್ನೂ ತೆಗೆದುಕೊಂಡು ಹೋಗದ ಕಾರಣ ಆಸ್ಪತ್ರೆಯವರಿಗೆ ಮತ್ತೆ ಕೈ ಜೋಡಿಸಲು ಸಾಧ್ಯವಾಗಲಿಲ್ಲ. ಆದರೆ ವೈದ್ಯರು ಕೈಯ್ಯನ್ನು ಸರಿಯಾದ ಸಮಯದಲ್ಲಿ ತರಿಸಿದ ಕಾರಣ ಅವರದನ್ನು ಮತ್ತೆ ಜೋಡಿಸಿದ್ದಾರೆ. ಇದಾದ ಬಳಿಕ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಉದ್ದೇಶಪೂರ್ವಕವಾಗಿಯೇ ಆಕೆ ಕೈ ಕತ್ತರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಗೆಳೆಯನ ಇಂಟರ್‌ನೆಟ್ ಸರ್ಚ್ ಹಿಸ್ಟರಿಯಲ್ಲಿ ಆತ ಕೆಲವು ದಿನಗಳಿಂದ ಕೃತಕ ಕೈಗಳ ಬಗ್ಗೆ ಹುಡುಕುತ್ತಿದ್ದ ವಿಚಾರವೂ ಬಯಲಾಗಿದೆ.ಇನ್ಸ್ಟಾಗ್ರಾಂನಲ್ಲಿ ಆಕ್ಟಿವ್

ಜೈಲಿನಿಂದ ಹೊರಬಂದ ಮಹಿಳೆ, Instagram ನಲ್ಲಿ ಸಕ್ರಿಯ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಆಕೆಯ ಪ್ರಕರಣವು ಪೂರ್ಣಗೊಂಡಿದ್ದು ಆಕೆಗೆ ಶಿಕ್ಷೆ ವಿಧಿಸಲಾಯಿತು. ಮರದ ಕೊಂಬೆಯನ್ನು ಕಡಿಯುತ್ತಿದ್ದಾಗ ತನ್ನ ಕೈಯನ್ನು ಕತ್ತರಿಸಿರುವುದಾಗಿ ನ್ಯಾಯಾಲಯದಲ್ಲಿ ತಿಳಿಸಿದ್ದಾಳೆ. ಇಡೀ ವಿಚಾರಣೆಯ ಸಮಯದಲ್ಲಿ, ಆಕೆ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಕಳೆದ ವರ್ಷ ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡು ಶಿಕ್ಷೆಯನ್ನು ಕಡಿಮೆ ಮಾಡಲು ಒತ್ತಾಯಿಸಿದರು.

ಇದನ್ನೂ ಓದಿ: ಎಲ್ಲಾ ಬ್ಯಾಂಕ್​ಗಳಲ್ಲೂ ಹೆಚ್ಚಾಯ್ತು ಬಡ್ಡಿ ದರ! ನೀವ್​ ಟೆನ್ಶನ್​ ಮಾಡ್ಕೋಬೇಡಿ, ಹೀಗ್ ಮಾಡಿ ಸಾಲ ಸಿಗುತ್ತೆ

ಗೆಳೆಯನಿಗೆ 2 ವರ್ಷ 5 ತಿಂಗಳು ಜೈಲು ಶಿಕ್ಷೆಯಾಯಿತು. ಇನ್ನು ಮಹಿಳೆಗೆ ಮೊದಲ ವಿಚಾರಣೆಯಲ್ಲಿ, 3 ವರ್ಷಗಳ ಶಿಕ್ಷೆ ವಿಧಿಸಲಾಯಿತಾದರೂ ಬಳಿಕ ನ್ಯಾಯಾಧೀಶರು ಅದನ್ನು ಅರ್ಧಕ್ಕೆ ಇಳಿಸಿದರು. ಈಗ ಬಿಡುಗಡೆ ಪಡೆದ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಾಕುತ್ತಿದ್ದಾರೆ. ಫೋಟೋಗಳಲ್ಲಿ ತನ್ನ ಕೈಗಳನ್ನು ಮರೆಮಾಡಿದ್ದಾರೆ. ಹೀಗಾಗಿ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ.
Published by:Precilla Olivia Dias
First published: