• Home
  • »
  • News
  • »
  • national-international
  • »
  • Narendra Modi: ಜಾಹೀರಾತಿನಲ್ಲಿ ನರೇಂದ್ರ ಮೋದಿಗೆ ಆಯ್ತಾ ಅಪಮಾನ? ಜೋರಾಯ್ತು #BoycottCadbury ಅಭಿಯಾನ!

Narendra Modi: ಜಾಹೀರಾತಿನಲ್ಲಿ ನರೇಂದ್ರ ಮೋದಿಗೆ ಆಯ್ತಾ ಅಪಮಾನ? ಜೋರಾಯ್ತು #BoycottCadbury ಅಭಿಯಾನ!

ಕ್ಯಾಡ್‌ಬರಿ ಜಾಹೀರಾತಿನಲ್ಲಿ ಮೋದಿಗೆ ಅಪಮಾನ?

ಕ್ಯಾಡ್‌ಬರಿ ಜಾಹೀರಾತಿನಲ್ಲಿ ಮೋದಿಗೆ ಅಪಮಾನ?

ಕ್ಯಾಡ್‌ಬರೀ ಜಾಹೀರಾತಿನ (Advertisement) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಪಮಾನ (insult) ಮಾಡಿರುವ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಜಾಹೀರಾತಿನಲ್ಲಿ ಏನಿದೆ?

  • Share this:

ನವದೆಹಲಿ: “ಶುಭಾರಂಭ ಒಂದಷ್ಟು ಸಿಹಿಯೊಂದಿಗೆ” ಎನ್ನುವುದು ಪ್ರಸಿದ್ಧ ಕ್ಯಾಡ್‌ಬರೀಸ್ ಚಾಕಲೇಟ್‌ನ (Cadbury's chocolate) ಒಂದು ಪ್ರಖ್ಯಾತ ಸ್ಲೋಗನ್ (slogan). ಚಾಕ್ಲೆಟ್ ಉತ್ಪನ್ನಗಳಿಗೆ ಹೆಸರುವಾಸಿಯಾದ ಕ್ಯಾಡ್‌ಬರಿ ವಿದೇಶಿ ಮೂಲದ ಸಂಸ್ಥೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ (Indian Market) ಹೆಚ್ಚಿನ ಅಧಿಪತ್ಯ ಸಾಧಿಸಿರುವ ಕ್ಯಾಡಬರೀಸ್‌ ಸಂಸ್ಥೆ ಮೇಲೆ ಈ ಹಿಂದೆಯೂ ಆರೋಪಗಳು ಬಂದಿದ್ದವು. ಕ್ಯಾಡಬರೀಸ್ ತನ್ನ ಉತ್ಪನ್ನಗಳಲ್ಲಿ ಗೋಮಾಂಸ (beef) ಬಳಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಕ್ಯಾಡ್‌ಬರೀ ಜಾಹೀರಾತಿನ (Advertisement) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಪಮಾನ (insult) ಮಾಡಿರುವ ಆರೋಪ ಕೇಳಿ ಬಂದಿದೆ. ಕ್ಯಾಡ್‌ಬರಿ ಜಾಹೀರಾತಿನ ವಿರುದ್ಧ ಮೋದಿ ಅಭಿಮಾನಿಗಳು (Fans), ಬಿಜೆಪಿ ನಾಯಕರು (BJP Leaders) ಹಾಗೂ ನೆಟಿಜನ್‌ಗಳು (netizens) ತಿರುಗಿ ಬಿದ್ದಿದ್ದಾರೆ. ಪರಿಣಾಮ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಬೈಕಾಟ್ ಕ್ಯಾಡ್‌ಬರಿ ಅಭಿಯಾನ (#BoycottCadbury campaign) ಜೋರಾಗಿದೆ.


ಕ್ಯಾಡ್‌ಬರಿ ಜಾಹೀರಾತಿನಲ್ಲಿ ಮೋದಿಗೆ ಅಪಮಾನ?


ಪ್ರಸಿದ್ಧ ಕ್ಯಾಡ್‌ಬರಿ ಚಾಕ್ಲೆಟ್ ಉತ್ಪನ್ನಗಳ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ದೀಪಾವಳಿ ಹಬ್ಬದ ಸಂದೇಶ ಸಾರುವ ಜಾಹೀರಾತಿನಲ್ಲಿ ವಿನಾಕಾರಣ ನರೇಂದ್ರ ಮೋದಿಯವರ ತಂದೆಯ ಹೆಸರನ್ನು ಎಳೆದು ತಂದಿದೆ ಅಂತ ಆರೋಪಿಸಲಾಗಿದೆ.‘ದಾಮೋದರ’ ಎಂಬ ಹೆಸರಿನ ಪಾತ್ರ


ಕ್ಯಾಡ್‌ಬರಿ ದೀಪಾವಳಿಗೆ ತನ್ನ ಉತ್ಪನ್ನ ಉತ್ತೇಜಿಸುವ ಟಿವಿ ಜಾಹೀರಾತೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ದಾಮೋದರ ಎಂಬ ದೀಪದ ವ್ಯಾಪಾರಿಯನ್ನು ತೋರಿಸಲಾಗಿದೆ. ಬಡ ವ್ಯಾಪಾರಿಯೊಬ್ಬನ ಹೆಸರನ್ನು ದಾಮೋದರ ಅಂತ ಇಟ್ಟಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Actress Samantha: ಸಮಂತಾರನ್ನು ಕಾಡುತ್ತಿರುವ ಈ ವಿಚಿತ್ರ ಕಾಯಿಲೆ ಬಗ್ಗೆ ಗೊತ್ತಾ? ವ್ಯಕ್ತಿಯನ್ನೇ ಕುಗ್ಗಿಸುತ್ತಾ ಮೈಯೋಸಿಟಿಸ್?


ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಆಕ್ರೋಶ


ಈ ಜಾಹೀರಾತಿಗೆ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಧ್ವಿ ಪ್ರಾಚಿ ಕ್ಯಾಡ್‌ಬರಿ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಬಡ ದೀಪ ಮಾರಾಟಗಾರನ ಹೆಸರಾಗಿ 'ದಾಮೋದರ್' ಅನ್ನು ಬಳಸುವುದನ್ನು ಆಕ್ಷೇಪಿಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಹೊಂದಿರುವ ಯಾರನ್ನಾದರೂ ಕಳಪೆ ಬೆಳಕಿನಲ್ಲಿ ತೋರಿಸಲು ಇದನ್ನು ಮಾಡಲಾಗಿದೆ" ಎಂದು ಹೇಳಿದ್ದಾರೆ. "ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ" ಎಂದು ಸಾಧ್ವಿ ಪ್ರಾಚಿ ಟ್ವೀಟ್ ಮಾಡಿದ್ದಾರೆ.


ಸಾಧ್ವಿ ಪ್ರಾಚಿ ಟ್ವೀಟ್


"ಟಿವಿ ಚಾನೆಲ್‌ಗಳಲ್ಲಿ ಕ್ಯಾಡ್‌ಬರಿ ಚಾಕೊಲೇಟ್‌ನ ಜಾಹೀರಾತನ್ನು ನೀವು ಎಚ್ಚರಿಕೆಯಿಂದ ಗಮನಿಸಿದ್ದೀರಾ? ಬಡ ಅಂಗಡಿಯಿಲ್ಲದ ದೀಪ ಮಾರಾಟಗಾರ ದಾಮೋದರ್. ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಕಳಪೆ ಬೆಳಕಿನಲ್ಲಿ ತೋರಿಸಲು ಇದನ್ನು ಮಾಡಲಾಗಿದೆ. ಚಾಯ್‌ವಾಲೇ ಕಾ ಬಾಪ್ ದಿಯೇವಾಲಾ. ಕ್ಯಾಡ್ಬರಿ ಕಂಪನಿಗೆ ನಾಚಿಕೆಯಾಗುತ್ತಿದೆ" ಎಂದು ಸಾಧ್ವಿ ಪ್ರಾಚಿ ಅವರು ಟ್ವೀಟ್ ಮಾಡಿದ್ದಾರೆ.


ಜೋರಾಯ್ತು ಬೈಕಾಟ್ ಕ್ಯಾಡ್ಬರಿ ಅಭಿಯಾನ


ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಮಂದಿ ಕ್ಯಾಡ್‌ಬರಿ ಜಾಹೀರಾತಿನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭಾರತದಲ್ಲಿ ಕ್ಯಾಡ್ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅನೇಕರು ಟ್ವೀಟ್ ಮಾಡಲು ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ: Bihar Question Paper: ಕಾಶ್ಮೀರವನ್ನು ಪ್ರತ್ಯೇಕ ದೇಶವೆಂದು ಉಲ್ಲೇಖಿಸಿದ ಬಿಹಾರದ ಏಳನೇ ತರಗತಿಯ ಪ್ರಶ್ನೆಪತ್ರಿಕೆ!


ಹಲವು ವಿವಾದಗಳಿಗೆ ಗುರಿಯಾಗಿದ್ದ ಕ್ಯಾಡ್‌ಬರಿ ಇಂಡಿಯಾ


ಈ ಹಿಂದೆಯೂ ತನ್ನ ಜಾಹೀರಾತುಗಳು, ಉತ್ಪನ್ನಗಳ ಮೂಲಕ ಕ್ಯಾಡ್‌ಬರಿ ಸಂಸ್ಥೆ ವಿವಾದಕ್ಕೆ ಗುರಿಯಾಗಿತ್ತು. ಕ್ಯಾಡ್‌ಬರಿಸ್ ಉತ್ಪನ್ನಗಳಲ್ಲಿ ಗೋಮಾಂಸ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. 2021ರಲ್ಲಿ ಇದೇ ರೀತಿ ಬಹಿಷ್ಕಾರದ ಪೋಸ್ಟ್‌ ಟ್ರೆಂಡ್‌ ಆಗಿತ್ತು. ಕ್ಯಾಡ್‌ಬರಿ ಆಸ್ಟ್ರೆಲಿಯಾದ ವೆಬ್‌ನಲ್ಲಿ ನೀಡಿರುವ ವಿವರಣೆಯನ್ನು ಬಳಸಿಕೊಂಡು ಭಾರತದಲ್ಲಿ ಟ್ರೆಂಡ್‌ ಮಾಡಲಾಗಿತ್ತು. ಆದರೆ, ಹಸಿರು ಚುಕ್ಕಿಯೊಂದಿಗೆ ಕಾಣಿಸಿಕೊಳ್ಳುವ ಕ್ಯಾಡ್‌ಬರಿ ಭಾರತದ ಉತ್ಪನ್ನ ಶೇ.100ರಷ್ಟು ಶಾಕಾಹಾರಿ ಎಂದು ಕಂಪನಿ ಸ್ಪಷ್ಟೀಕರಣ ನೀಡಿತ್ತು.

Published by:Annappa Achari
First published: