• Home
  • »
  • News
  • »
  • national-international
  • »
  • PM Modi- ಸಂಸತ್​ನಲ್ಲಿ ಗದ್ದಲ; ವಿಪಕ್ಷಗಳಿಂದ ಪ್ರಜಾತಂತ್ರಕ್ಕೆ ಅಪಮಾನ: ಪ್ರಧಾನಿ ಮೋದಿ ವ್ಯಗ್ರ

PM Modi- ಸಂಸತ್​ನಲ್ಲಿ ಗದ್ದಲ; ವಿಪಕ್ಷಗಳಿಂದ ಪ್ರಜಾತಂತ್ರಕ್ಕೆ ಅಪಮಾನ: ಪ್ರಧಾನಿ ಮೋದಿ ವ್ಯಗ್ರ

ಸಂಸತ್​ನಲ್ಲಿ ನರೇಂದ್ರ ಮೋದಿ ಮತ್ತಿತರರು

ಸಂಸತ್​ನಲ್ಲಿ ನರೇಂದ್ರ ಮೋದಿ ಮತ್ತಿತರರು

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ನಿರಂತರವಾಗಿ ನಡೆಸುತ್ತಿರುವ ಗದ್ದಲಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೈರಾಣಾಗಿಸಿದೆ. ವಿಪಕ್ಷಗಳ ಈ ವರ್ತನೆಯು ದೇಶದ ಜನತೆಗೆ ಮಾಡಿರುವ ಅವಮಾನ ಎಂದು ಅವರು ಸಿಡುಕಿದ್ದಾರೆ.

  • News18
  • Last Updated :
  • Share this:

    ನವದೆಹಲಿ(ಆ. 03): ಎರಡು ವಾರದಿಂದಲೂ ಸಂಸತ್​ನ ಮುಂಗಾರು ಅಧಿವೇಶನದ ಸಮಯ ಬರೀ ವಿಪಕ್ಷಗಳ ಗದ್ದಲಗಳಲ್ಲೇ ಕಳೆದುಹೋಗಿದೆ. ಸಾಧ್ಯವಿರುವ 107 ಗಂಟೆಗಳ ಪೈಕಿ ಅಧಿವೇಶನ ನಡೆದಿರುವುದು ಕೇವಲ 18 ಗಂಟೆ ಮಾತ್ರ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳ ಸದಸ್ಯರು ಅಧಿವೇಶನವನ್ನ ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ ಪ್ರಧಾನಿಗಳು, ಕೆಲ ಸದಸ್ಯರು ಬಳಸುವ ಕೆಟ್ಟ ಭಾಷೆಯು ಕೇವಲ ಸಂಸತ್ತಿಗೆ ಮಾತ್ರವಲ್ಲ ಈ ದೇಶದ ಜನತೆಗೆ ಮಾಡುವ ಅವಮಾನವಾಗಿದೆ ಎಂದು ಟೀಕಿಸಿದ್ದಾರೆ. ತಮ್ಮ ಸರ್ಕಾರಕ್ಕೆ ಜನಸೇವೆಯ ಬದ್ಧತೆ ಇರುವುದರಿಂದ ತನ್ನ ಎಲ್ಲಾ ಸಚಿವರು ಹಾಗೂ ಸಂಸದರು ಸಂಸತ್ ಅಧಿವೇಶನದಲ್ಲಿ ಉಪಸ್ಥಿತರಬೇಕೆಂದು ತಿಳಿಸಿದ್ದೇನೆ. ವಿಪಕ್ಷ ಸದಸ್ಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡು ಕಲಾಪ ಸಮರ್ಪಕವಾಗಿ ನಡೆಯಲು ಸಾಧ್ಯವಾಗುವಂತೆ ಮಾಡಿ ಎಂದು ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.


    ಜುಲೈ 19ರಂದು ಈ ಬಾರಿಯ ಮುಂಗಾರು ಅಧಿವೇಶನ ಪ್ರಾರಂಭವಾಗಿದೆ. ವಿಪಕ್ಷ ಸದಸ್ಯರು ಒಂದಲ್ಲ ಒಂದು ವಿಚಾರ ಇಟ್ಟುಕೊಂಡು ಅಧಿವೇಶನದಲ್ಲಿ ಗದ್ದಲ ನಡೆಸಿ ಕಲಾಪ ಅಸಾಧ್ಯವಾಗಿಸಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ ಸಂಸತ್ ಕಲಾಪಕ್ಕೆ ಆಗಿರುವ ಅಡ್ಡಿಯಿಂದಾಗಿ 133 ಕೋಟಿ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.


    ಇದನ್ನೂ ಓದಿ: ಕೋವಿಡ್ -19 ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧವೂ ಕೋವ್ಯಾಕ್ಸಿನ್‌ ಪರಿಣಾಮಕಾರಿ; ICMR ಅಧ್ಯಯನ


    ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತರಾಮನ್ ಅವರು ದೇಶದ ಆರ್ಥಿಕತೆ ಮತ್ತೆ ಹಳಿಗೆ ಬರುತ್ತಿರುವ ವಿಚಾರವನ್ನು ಒತ್ತಿಹೇಳಿದ್ದು, ಜಿಎಸ್​ಟಿ ಸಂಗ್ರಹ ದಾಖಲೆ ಮಟ್ಟದಲ್ಲಿದೆ ಎಂದೂ ತಿಳಿಸಿದ್ದಾರೆ. ಇನ್ನು, ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿ ಮುರಳೀಧರನ್, ಜುಲೈ ತಿಂಗಳಲ್ಲಿ ಸಿಕ್ಕಿರುವ ಖುಷಿ ಸುದ್ದಿ ಬಗ್ಗೆ ಪ್ರಧಾನಿ ಮೋದಿ ಹಂಚಿಕೊಂಡಿದ್ದನ್ನ ತಿಳಿಸಿದ್ದಾರೆ. “1.16 ಲಕ್ಷ ಕೋಟಿಯಷ್ಟು ಜಿಎಸ್​ಟಿ ಹಣ ಸಂಗ್ರಹವಾಗಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪಿ ವಿ ಸಿಂಧು ಅವರು ಕಂಚು ಗೆದ್ದಿರುವುದು, ಹಾಕಿ ತಂಡ ಉತ್ತಮ ಸಾಧನೆ ಮಾಡಿದ್ದು ಎಲ್ಲವೂ ಜುಲೈನಲ್ಲೇ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು…. ಹಾಗೆಯೇ, ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ-ರುಪಿ (e-Rupi) ಬಗ್ಗೆಯೂ ಅವರು ಮಾತನಾಡಿದರು” ಎಂದು ವಿ ಮುರಳೀಧರನ್ ತಿಳಿಸಿದ್ದಾರೆ.


    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

    Published by:Vijayasarthy SN
    First published: