Instagram Viral video: ಇನ್‌ಸ್ಟಾಗ್ರಾಮ್ ವಿಡಿಯೋಗಾಗಿ ರಸ್ತೆಯಲ್ಲಿ ನೃತ್ಯ ಮಾಡಿ ತೊಂದರೆಗೆ ಸಿಲುಕಿದ ಮಹಿಳೆ!

ಇದೆಲ್ಲಾ ಅವಾಂತರ ಆದ ನಂತರ ಶ್ರೇಯಾ ಸಂಚಾರ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಒತ್ತಾಯಿಸಿದ್ದಾರೆ. "ದಯವಿಟ್ಟು ನಿಯಮಗಳನ್ನು ಉಲ್ಲಂಘಿಸಬೇಡಿ - ಕೆಂಪು ಚಿಹ್ನೆ ಎಂದರೆ ನೀವು ಸಿಗ್ನಲ್ ನಲ್ಲಿ ನಿಲ್ಲಬೇಕು ಎಂದರ್ಥ, ನಾನು ಡ್ಯಾನ್ಸ್ ಮಾಡುತ್ತಿದ್ದೇನೆ ನೀವು ನಿಲ್ಲಬೇಕು ಎಂದರ್ಥವಲ್ಲ" ಎಂದು ಅವರು ಶೀರ್ಷಿಕೆಯಲ್ಲಿ ಹೊಸದಾಗಿ ಬರೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಲವೊಮ್ಮೆ ನಾವು ಏನೋ ಮಾಡಲು ಹೋಗಿ ಅತೀ ಉತ್ಸಾಹದಲ್ಲಿ ಯಡವಟ್ಟು ಮಾಡಿಕೊಳ್ಳುತ್ತೇವೆ ಮತ್ತು ತೊಂದರೆಗೆ ಸಿಲುಕುತ್ತೇವೆ. ಈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಭಿನ್ನವಾದ ವೀಡಿಯೋವನ್ನು ಹಂಚಿಕೊಂಡು ವೈರಲ್ ಮಾಡಿ ಬಿಡಬೇಕು ಎಂದು ಅನೇಕರು ಹುಚ್ಚು ಸಾಹಸಕ್ಕೆ ಇಳಿಯುತ್ತಾರೆ.

  ಬಹುತೇಕರು ಈ ಸಾಮಾಜಿಕ ಜಾಳತಾಣದಲ್ಲಿ ಇರುವ ತಮ್ಮ ಖಾತೆಯ ಪುಟದಲ್ಲಿ ತಾವು ಡ್ಯಾನ್ಸ್ ಮಾಡಿದ ವಿಡಿಯೋ ಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇಲ್ಲೊಬ್ಬ ಮಹಿಳೆಯು ಸಹ ಹೀಗೆ ಡ್ಯಾನ್ಸ್ ಮಾಡಿ ತೊಂದರೆಯನ್ನು ಮೈಮೇಲೆ ಎರೆದು ಕೊಂಡಿದ್ದಾಳೆ. ಏನಪ್ಪಾ ಡ್ಯಾನ್ಸ್ ಮಾಡಿ ಹೇಗೆ ತೊಂದರೆಗೆ ಸಿಲುಕಿದ್ದಾರೆ ಅಂತೀರಾ? ಈ ಮಹಿಳೆ ಡ್ಯಾನ್ಸ್ ಮಾಡಿದ್ದು ರಸ್ತೆಯ ಮಧ್ಯದಲ್ಲಿ ನಿಂತು ಡ್ಯಾನ್ಸ್​ ಮಾಡಿ ತೊಂದರೆಗೆ ಸಿಲುಕಿದ್ದಾಳೆ.

  ಈ ಘಟನೆ ನಡೆದದ್ದು ಮಧ್ಯಪ್ರದೇಶದ ಇಂದೋರ್ ನ ಜನನಿಬಿಡ ಪ್ರದೇಶದಲ್ಲಿ ಎಂದು ಹೇಳಬಹುದು. ಮಹಿಳೆಯು ರಸ್ತೆಯ ಮೇಲೆ ಡ್ಯಾನ್ಸ್ ಮಾಡಲು ವೇಗವಾಗಿ ರಸ್ತೆಗೆ ಬಂದಿದ್ದು, ನಂತರ ರಸ್ತೆಯ ಮೇಲೆ ಪಾದಚಾರಿಗಳಿಗೆ ರಸ್ತೆ ದಾಟಲು ಇರುವಂತಹ ಬಿಳಿಯ ಪಟ್ಟಿಯ ಮೇಲೆ ಅಂದರೆ ಜೀಬ್ರಾ ಕ್ರಾಸಿಂಗ್​ ಮೇಲೆ ಬಂದು ಡ್ಯಾನ್ಸ್ ಮಾಡಿದ್ದಾಳೆ, ಇದೇ ವೇಳೆ ರಸ್ತೆಯಲ್ಲಿ ಇದ್ದಂತಹ ವಾಹನ ಚಾಲಕರು ಹಾಗೂ ಪಾದಾಚಾರಿಗಳಲ್ಲಿ ಕೆಲವರು ಈ ಮಹಿಳೆಯ ಡ್ಯಾನ್ಸ್ ಅನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.

  ಟ್ರಾಫಿಕ್ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಈ ವಿಡಿಯೋ ಮಾಡಲಾಗಿದೆ, ವೀಡಿಯೊಗಾಗಿ ಮಾಡಿದ ಈ ಡ್ಯಾನ್ಸ್ ಅನ್ನು ರಸ್ತೆ ಮೇಲೆ ಮಾಡಿದಂತಹ ಸ್ಟಂಟ್ ಎಂದು ಪರಿಗಣಿಸಿ ಈಗ ಪೊಲೀಸರು ಈ ಮಹಿಳೆಯು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾಳೆ ಎಂದು ನೋಟಿಸ್ ನೀಡಿದ್ದಾರೆ.

  ಶ್ರೇಯಾ ಕಾಲ್ರಾ ಎಂದು ಗುರುತಿಸಲಾದ ಮಹಿಳೆಯು ಮೂರು ದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತನ್ನ ಡ್ಯಾನ್ಸ್ ವೀಡಿಯೊವನ್ನು ಹಂಚಿಕೊಂಡಿದ್ದರು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ಬೇಗನೆ ವೈರಲ್ ಆಗಿತ್ತು. ಕಾರುಗಳು ನಿಧಾನವಾಗುತ್ತಿದ್ದಂತೆ ಕಪ್ಪು ಬಟ್ಟೆ ಧರಿಸಿದ್ದ ಶ್ರೇಯಾ ಜೀಬ್ರಾ ಕ್ರಾಸಿಂಗ್ ಹತ್ತಿರ ಬಂದು ಡ್ಯಾನ್ಸ್ ಮಾಡಿರುವುದನ್ನು ಈ 30 ಸೆಕೆಂಡುಗಳ ವೀಡಿಯೋ ತುಣುಕಿನಲ್ಲಿ ಕಾಣಬಹುದಾಗಿದೆ.

  ಒಂದು ಕ್ಷಣ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾಯುತ್ತಿದ್ದ ವಾಹನ ಸವಾರರು ಅವಳ ಡ್ಯಾನ್ಸ್ ನೋಡಿ ಗೊಂದಲಕ್ಕೊಳಗಾಗಿದ್ದಾರೆ.

  ಈ ವೀಡಿಯೊವನ್ನು ಇಂದೋರ್ ನ ರಸೋಮ ಚೌಕ ದಲ್ಲಿ ಚಿತ್ರೀಕರಿಸಲಾಗಿದೆ. ಕ್ಲಿಪ್ ನ ಆರಂಭದಲ್ಲಿ, ಮಹಿಳೆಯು ಮುಖಕ್ಕೆ ಕಪ್ಪು ಬಟ್ಟೆಯನ್ನು ಹಾಕಿಕೊಂಡು ಸಾರ್ವಜನಿಕ ಸ್ಥಳದಲ್ಲಿ ತನ್ನ ಡ್ಯಾನ್ಸ್ ಅನ್ನು ಚಿತ್ರೀಕರಿಸಿಕೊಂಡಿದ್ದಾರೆ. ವೈರಲ್ ಆದ ವೀಡಿಯೋ ನೋಡಿದ ಹಲವಾರು ಸಾಮಾಜಿಕ ಮಾಧ್ಯಮ ಜಾಲತಾಣಗಳ ಬಳಕೆದಾರರು ಮಹಿಳೆಯ ಈ ಕೆಲಸವನ್ನು ಕಟುವಾಗಿ ಟೀಕಿಸಿದ್ದಾರೆ.

  ಇದೆಲ್ಲಾ ಅವಾಂತರ ಆದ ನಂತರ ಶ್ರೇಯಾ ಸಂಚಾರ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಒತ್ತಾಯಿಸಿದ್ದಾರೆ. "ದಯವಿಟ್ಟು ನಿಯಮಗಳನ್ನು ಉಲ್ಲಂಘಿಸಬೇಡಿ - ಕೆಂಪು ಚಿಹ್ನೆ ಎಂದರೆ ನೀವು ಸಿಗ್ನಲ್ ನಲ್ಲಿ ನಿಲ್ಲಬೇಕು ಎಂದರ್ಥ, ನಾನು ಡ್ಯಾನ್ಸ್ ಮಾಡುತ್ತಿದ್ದೇನೆ ನೀವು ನಿಲ್ಲಬೇಕು ಎಂದರ್ಥವಲ್ಲ" ಎಂದು ಅವರು ಶೀರ್ಷಿಕೆಯಲ್ಲಿ ಹೊಸದಾಗಿ ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: WWE NXT ಫಲಿತಾಂಶಗಳು ಪ್ರಕಟ: ಬ್ಯಾಕ್ ಗೋಲ್ಡಿ ಟೈಟಲ್​ ಗೆದ್ದುಕೊಂಡ ಸಿಯಾಂಪ; ಇಲ್ಲಿವೆ ಮೈನವಿರೇಳಿಸುವ ಚಿತ್ರಗಳು

  ಈ ಹಿಂದೆಯೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಖ್ಯಾತಿ ಪಡೆಯುವ ಆಸೆಗಾಗಿ ಮಾಡಿದ ಸ್ಟಂಟ್ ಗಳು ತುಂಬಾ ಜನರನ್ನು ತೊಂದರೆಗೆ ಸಿಲುಕಿಸಿದ್ದನ್ನ ನಾವು ನೋಡಿದ್ದೆವೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: