Viral Story: ಚಹಾ ಮಾರುತ್ತಿದ್ದವ ಈಗ ಉನ್ನತ ಅಧಿಕಾರಿ! ಆನಂದ್ ಮಹೀಂದ್ರಾ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ

ಸುಂದರ್ ಶೆಟ್ಟಿ ಎಂಬ ವ್ಯಕ್ತಿ ಚಹಾ ಮಾರುವ ಕೆಲಸ ಶುರು ಮಾಡಿದ ತನ್ನ ತಂದೆ ಇವತ್ತು ಒಬ್ಬ ಅಧಿಕಾರಿಯಾಗಿರುವುದನ್ನು ನೋಡಿ ಖುಷಿ ಪಟ್ಟು, ತನ್ನ ತಂದೆಯ ಹೃದಯಸ್ಪರ್ಶಿ ಪ್ರಯಾಣದ ಬಗ್ಗೆ ಮಾತನಾಡಿದರು ಮತ್ತು ನೀವು ಖಂಡಿತವಾಗಿಯೂ ಅದಕ್ಕೆ ಮಹೀಂದ್ರಾ ಅವರು ನೀಡಿರುವ ಪ್ರತಿಕ್ರಿಯೆಯನ್ನು ಮಿಸ್ ಮಾಡದೆ ನೋಡಲೇಬೇಕು.

ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ

  • Share this:
ಮೊನ್ನೆ ತಾನೇ ಓರ್ವ ವ್ಯಕ್ತಿ 10 ವರ್ಷ ಸತತ ಪರಿಶ್ರಮದಿಂದ ಹಣ ಸಂಪಾದಿಸಿ ಒಂದು ಮಹೀಂದ್ರಾ ಎಸ್‌ಯುವಿ ಯನ್ನು ಖರೀದಿಸಿದ್ದ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ (Social Media) ಮೂಲಕ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರಿಗೆ ತಿಳಿಸಿದ್ದು, ಅದಕ್ಕೆ ಆನಂದ್ ಮಹೀಂದ್ರಾ (Anand Mahindra)  ಪ್ರತಿಕ್ರಿಯೆ ನೀಡಿದ್ದು ನಮಗೆಲ್ಲಾ ತಿಳಿದೇ ಇದೆ. ಈಗ ಮತ್ತೊಮ್ಮೆ ಆನಂದ್ ಮಹೀಂದ್ರಾ ಅವರು ಒಬ್ಬ ವ್ಯಕ್ತಿಯ ಟ್ವಿಟ್ಟರ್ (Twitter) ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಸುದ್ದಿಯಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಅವರು ಸದಾ ಒಂದಲ್ಲ ಒಂದು ಸ್ಪೂರ್ತಿದಾಯಕ ಕತೆ (Inspiring Story), ಸುದ್ದಿಗಳನ್ನು ಹಂಚಿಕೊಳ್ಳುತ್ತಾ  ಫಾಲೋವರ್ಸ್​ಗಳನ್ನು ಸದಾ ಸಕ್ರಿಯರಾಗಿರಿಸಲು ಪ್ರಯತ್ನ ಪಡುತ್ತಾರೆ. 

ಸದ್ಯ ವೈರಲ್ ಆಗುತ್ತಿರುವ ವಿಷಯ ಯಾವುದು?
ಆನ್ಲೈನ್ ನಲ್ಲಿ ತಕ್ಷಣವೇ ವೈರಲ್ ಆಗುವ ವಿಷಯವನ್ನು ಹಂಚಿಕೊಳ್ಳುವುದರ ಜೊತೆಗೆ, ಮಹೀಂದ್ರಾ ಅವರು ತಮ್ಮ ಫಾಲೋವರ್ಸ್ ಗಳೊಂದಿಗೆ ಕಾಲಕಾಲಕ್ಕೆ ಸಂವಹನ ನಡೆಸುತ್ತ ಇರುತ್ತಾರೆ. ಈಗ ಮತ್ತೊಮ್ಮೆ ಆನಂದ್ ಮಹೀಂದ್ರಾ ಅವರು ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ಸುಳ್ಳಲ್ಲ.

ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಮಾಧ್ಯಮದ ಖಾತೆಯ ಮೂಲಕ ಆನಂದ್ ಮಹೀಂದ್ರಾ ಅವರೊಡನೆ ಒಂದು ಸ್ಪೂರ್ತಿದಾಯಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. ತನ್ನ ತಂದೆಯ ಬಗ್ಗೆ ಕಥೆಯೊಂದನ್ನು ಹಂಚಿಕೊಂಡ ಒಬ್ಬ ವ್ಯಕ್ತಿಯ ಕಥೆಗೆ ಉದ್ಯಮಿಯ  ಪ್ರತಿಕ್ರಿಯೆಯು ಆನ್ಲೈನ್ ನಲ್ಲಿ ಸಾಕಷ್ಟು ಗಮನ ಸೆಳೆದಿದೆ ಎಂದು ಹೇಳಬಹುದು.

ಚಹಾ ಮಾರುತ್ತಿದ್ದ ವ್ಯಕ್ತಿ ಈಗ ಒಬ್ಬ ಅಧಿಕಾರಿ
ಸುಂದರ್ ಶೆಟ್ಟಿ ಎಂಬ ವ್ಯಕ್ತಿ ಚಹಾ ಮಾರುವ ಕೆಲಸ ಶುರು ಮಾಡಿದ ತನ್ನ ತಂದೆ ಇವತ್ತು ಒಬ್ಬ ಅಧಿಕಾರಿಯಾಗಿರುವುದನ್ನು ನೋಡಿ ಖುಷಿ ಪಟ್ಟು, ತನ್ನ ತಂದೆಯ ಹೃದಯಸ್ಪರ್ಶಿ ಪ್ರಯಾಣದ ಬಗ್ಗೆ ಮಾತನಾಡಿದರು ಮತ್ತು ನೀವು ಖಂಡಿತವಾಗಿಯೂ ಅದಕ್ಕೆ ಮಹೀಂದ್ರಾ ಅವರು ನೀಡಿರುವ ಪ್ರತಿಕ್ರಿಯೆಯನ್ನು ಮಿಸ್ ಮಾಡದೆ ನೋಡಲೇಬೇಕು.

ಇದನ್ನೂ ಓದಿ: IAS-IPS Family: ಈ ಕುಟುಂಬದಲ್ಲಿ ಮೂವರು ಐಎಎಸ್, ಒಬ್ಬರು ಐಪಿಎಸ್! ಇವರ ಕಥೆ ಇಂಟ್ರೆಸ್ಟಿಂಗ್



ಟ್ವಿಟರ್ ನಲ್ಲಿ ತಮ್ಮ ಸಂವಾದಾತ್ಮಕ ಸೆಷನ್ ಒಂದರಲ್ಲಿ, ಆನಂದ್ ಮಹೀಂದ್ರಾ ಅವರು ಈ ವ್ಯಕ್ತಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. 1965ರ ಸುಮಾರಿಗೆ ತಮ್ಮ ತಂದೆ ಮುಂಬೈ ನಗರದ ಖಾಂಡಿವಲಿಯಲ್ಲಿರುವ ಮಹೀಂದ್ರಾ ಕಾರ್ಖಾನೆಯ ಕ್ಯಾಂಟೀನ್ ನಲ್ಲಿ ಚಹಾ ಮಾರುವವರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂದು ಸುಂದರ್ ಶೆಟ್ಟಿ ಮಾಹಿತಿ ನೀಡಿದರು. ಆದಾಗ್ಯೂ, ಶೆಟ್ಟಿಯ ತಂದೆಯ ಸಾಮರ್ಥ್ಯವನ್ನು ನೋಡಿ, ಕಾರ್ಖಾನೆಯ ಅಧಿಕಾರಿಯೊಬ್ಬರು ಅವರಿಗೆ ವೆಲ್ಡಿಂಗ್ ವಿಭಾಗದಲ್ಲಿ ಕೆಲಸ ನೀಡಲು ಮುಂದಾದರು. ಈಗ ಅವರು ಕೆಲಸದಲ್ಲಿ ಅಧಿಕಾರಿಯಾಗಿದ್ದಾರೆ, ಇದು ನಿಜಕ್ಕೂ ತುಂಬಾ ಒಳ್ಳೆಯ ವಿಚಾರ ಅಲ್ಲವೇ? ಎಂದು ಬರೆದಿದ್ದಾರೆ.

ಪೋಸ್ಟ್ ನೋಡಿ ಆನಂದ್ ಮಹಿಂದ್ರಾ ಪ್ರತಿಕ್ರಿಯೆ ಹೀಗಿತ್ತು
ಕೈಗಾರಿಕೋದ್ಯಮಿಯು, ಸುಂದರ್ ಶೆಟ್ಟಿಯ ತಂದೆಯ ಈ ಸ್ಪೂರ್ತಿ ನೀಡುವಂತಹ ಮತ್ತು ಪ್ರೇರಣಾದಾಯಕವಾದ ಕಥೆಯನ್ನು ಗಮನಿಸಿ ಅವರಿಗೆ ವಿಳಂಬವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಕ್ಷಮೆ ಇರಲಿ ಅಂತ ಹೇಳಿ ಟ್ವೀಟ್ ಶುರು ಮಾಡಿದರು. "ಇಂತಹ ವಿಳಂಬ ಪ್ರತಿಕ್ರಿಯೆಗಾಗಿ ಕ್ಷಮೆಯಾಚಿಸುತ್ತೇನೆ. ನಿಮ್ಮ ತಂದೆಯಂತಹ ಅನೇಕ ವ್ಯಕ್ತಿಗಳ ಕಥೆಗಳು ನನ್ನನ್ನು ಇವತ್ತಿಗೂ ಚೆನ್ನಾಗಿ ಕೆಲಸ ಮಾಡಲು ಪ್ರೇರೇಪಿಸುತ್ತವೆ. ಜೀವನವನ್ನು ಪರಿವರ್ತಿಸುವ ಶಕ್ತಿ ಈ ವ್ಯವಹಾರಕ್ಕೆ ಮಾತ್ರ ಇದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ

ನಿಸ್ಸಂಶಯವಾಗಿ, ಮಹೀಂದ್ರಾ ಅವರ ಈ ಪ್ರತಿಕ್ರಿಯೆಯು ಆನ್ಲೈನ್ ನಲ್ಲಿ ಅನೇಕರ ಗಮನವನ್ನು ಸೆಳೆಯಿತು ಮತ್ತು ನೆಟ್ಟಿಗರಿಂದ ಹಲವಾರು ಪ್ರತಿಕ್ರಿಯೆಗಳನ್ನು ಸಹ ಇದು ಗಳಿಸಿತು. ಅನೇಕ ಜನರು ಮಹೀಂದ್ರಾ ಅವರ ಮಾತುಗಳನ್ನು ತುಂಬಾನೇ ಮೆಚ್ಚಿಕೊಂಡರು. "ನಿಮ್ಮ ಈ ಉತ್ತಮ ಮತ್ತು ಗೌರವಾನ್ವಿತ ಮೆಚ್ಚುಗೆಗೆ ಧನ್ಯವಾದಗಳು ಸರ್" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ನೀವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ" ಎಂದು ಬರೆದಿದ್ದಾರೆ.
Published by:Ashwini Prabhu
First published: