Danger TV Shows: ರಿಯಾಲಿಟಿ ಶೋ ನೋಡಿದ ವಿದ್ಯಾರ್ಥಿಗಳು ಬಾಲಕನನ್ನೇ ಕಿಡ್ನಾಪ್ ಮಾಡಿದ್ರು! ಮುಂದೆ ನಡೆದಿದ್ದು ಮಾತ್ರ ಆಘಾತಕಾರಿ ಘಟನೆ

ಟಿವಿಗಳಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿ (Serials), ಸಿನಿಮಾಗಳು (Cinema), ಗೇಮ್ ಶೋಗಳು (Game Show), ರಿಯಾಲಿಟಿ ಶೋಗಳು (Reality Shows) ಮಕ್ಕಳ ಮನಸ್ಸಿನ (Children's minds) ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಇದಕ್ಕೆ ಉದಾಹರಣೆ (Example) ಎನ್ನುವಂತೆ ಆಘಾತಕಾರಿ ಘಟನೆಯೊಂದು (Incident) ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ: ಮಾತು ಮನೆ ಕೆಡಿಸಿತು ಅಂತಾರೆ. ಆದ್ರೆ ಈ ಆಧುನಿಕ ಸಮಾಜದಲ್ಲಿ ಮೊಬೈಲ್ (Mobile) ಮತ್ತು ಟಿವಿ (TV) ಮನೆ (Home) ಕೆಡಿಸಿತು ಅಂದ್ರೆ ತಪ್ಪಾಗೋದಿಲ್ಲ. ಸಾವಿಲ್ಲದ (Death) ಮನೆಯ ಸಾಸಿವೆ (Mustard) ಸಿಗಬಹುದು ಆದ್ರೆ ಮೊಬೈಲ್ ಮತ್ತು ಟಿವಿ ಇಲ್ಲದ ಮನೆ ಸಿಗುವುದು ಕಷ್ಟ ಕಷ್ಟ. ಹೀಗೆ ಮನೆಯಲ್ಲಿ ಸುಲಭವಾಗಿ ಸಿಗುವ ಮೊಬೈಲ್ ಮತ್ತು ಟಿವಿ ಉಂಟು ಮಾಡುವ ಪರಿಣಾಮ (Effect) ಮಾತ್ರ ಊಹಿಸಲೂ ಅಸಾಧ್ಯ. ಟಿವಿಗಳಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿ (Serials), ಸಿನಿಮಾಗಳು (Cinema), ಗೇಮ್ ಶೋಗಳು (Game Show), ರಿಯಾಲಿಟಿ ಶೋಗಳು (Reality Shows) ಮಕ್ಕಳ ಮನಸ್ಸಿನ (Children's minds) ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಇದಕ್ಕೆ ಉದಾಹರಣೆ (Example) ಎನ್ನುವಂತೆ ಉತ್ತರ ಪ್ರದೇಶದಲ್ಲಿ (Uttar Pradesh) ಆಘಾತಕಾರಿ ಘಟನೆಯೊಂದು (Incident) ನಡೆದಿದೆ.

 ಬಾಲಕನ್ನು ಅಪಹರಿಸಿ ಕೊಂದ ಅಪ್ರಾಪ್ತರು

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಶಾಲಾ ಬಾಲಕನನ್ನು ಅಪಹರಿಸಿ ನಂತರ ಕೊಂದ ಆರೋಪದ ಮೇಲೆ ಐವರು ಹದಿಹರೆಯದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.  ತಮ್ಮದೇ ಶಾಲೆಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕನನ್ನು ಐವರು ಸೇರಿ ಕಿಡ್ನಾಪ್ ಮಾಡಿ, ಕೊಲೆ ಮಾಡಿದ್ದಾರೆ. ಬಾಲಕನ ಪೋಷಕರಿಂದ ಹಣ ಸುಲಿಗೆಗಾಗಿ ಹುಡುಗನನ್ನು ಅಪಹರಿಸಿದ್ದಾರೆ. ಬಳಿಕ ಆತನನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ತೀರಿಸಲು ಬಾಲಕನ ಅಪಹರಣ

10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಯಾವುದೋ ಲೇವಾದೇವಿ ನಡೆಸಿ 40 ಸಾವಿರ ರೂಪಾಯಿ ಕಳೆದುಕೊಂಡಿರುತ್ತಾನೆ. ಮತ್ತೆ ಹಣವನ್ನು ವಾಪಸ್‌ ಪಡೆಯುವ ಬಗ್ಗೆ ಯೀಚಿಸುತ್ತಾ ವಿಚಾರವನ್ನು ತನ್ನ ನಾಲ್ವರು ಸ್ನೇಹಿತರಿಗೆ ತಿಳಿಸುತ್ತಾನೆ. ಎಲ್ಲರೂ ಹೇಗಾದರೂ ಹಣ ಹೊಂದಿಸಬೇಕೆಂದು ತೀರ್ಮಾನ ಮಾಡುತ್ತಾರೆ. ಈ ವೇಳೆ ಯಾರನ್ನಾದರೂ ಅಪಹರಿಸಿ ಹಣಕ್ಕೆ ಬೇಡಿಕೆಯಿಡುವು ಐಡಿಯಾ ಮಾಡುತ್ತಾರೆ.

ಇದನ್ನೂ ಓದಿ: Wife's Head Cut: ಹೆಂಡತಿ ತಲೆ ಕಡಿದ ಗಂಡ, ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಬಂದ!

 ಆಟ ಆಡುತ್ತಿದ್ದ ಬಾಲಕನ ಅಪಹರಣ

15 ಮತ್ತು 16 ವರ್ಷ ವಯಸ್ಸಿನವರಾದ ಇವರು ಅಂದುಕೊಂಡಂತೆ ಶಾಲೆ ಬಳಿ ಒಂಟಿಯಾಗಿ ಆಟವಾಡುತ್ತಿದ್ದ ಬಾಲಕನನ್ನು ಅಪಹರಿಸಿದ್ದಾರೆ. ಅಲ್ಲಿಂದ ಆರೋಪಿಗಳು ಬಾಲಕನನ್ನು ಬೈಕ್ ನಲ್ಲಿ ಕರೆದುಕೊಂಡು ಅಲಿಘಡ್ ಪ್ರದೇಶದಲ್ಲಿರುವ ಆರೋಪಿಯ ಮನೆಯಲ್ಲಿ ಕಟ್ಟಿಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟರೆ ಸಿಕ್ಕಿಬೀಳಬಹುದೆಂಬ ಅನುಮಾನದಿಂದ ಬಾಲಕನ ಬಾಯಿಗೆ ಕರ್ಚೀಫ್‌ ತುರುಕಿ ಕೊಲೆಗೈದು ನದಿಗೆ ಎಸೆದಿದ್ದಾರೆ. ಬಳಿಕ ಅವನ ಕರವಸ್ತ್ರವಸ ಬಟ್ಟೆಗಳನ್ನು ಪ್ರತ್ಯೇಕ ಪ್ರದೇಶದಲ್ಲಿ ಪೊದೆಗಳಲ್ಲಿ ಎಸೆದು ಬುಲಂದ್‌ಶಹರ್‌ಗೆ ಮರಳಿದ್ದಾರೆ.

ನದಿಯಲ್ಲಿ ಪತ್ತೆಯಾಯ್ತು ಬಾಲಕನ ಶವ

ಮತ್ತೊಂದೆಡೆ, ಬಾಲಕನ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮರುದಿನ ಬಾಲಕನ ಶವ ನದಿಯಲ್ಲಿ ಪತ್ತೆಯಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು 100 ಸಿಸಿ ಕ್ಯಾಮೆರಾಗಳ ದೃಶ್ಯಾವಳಿ 200 ಜನರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಐವರು ಆರೋಪಿಗಳ ತಗಲಾಕ್ಕೊಂಡಿದ್ದಾರೆ. ಮೊದಲಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಕೊನೆಗೂ ಸತ್ಯ ಒಪ್ಪಿಕೊಂಡ ಅವರನ್ನು ಶನಿವಾರ ಬಂಧನ ಮಾಡಿದ್ದಾರೆ.

 ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ

 ಟಿವಿ ಶೋಗಳಿಂದ ಪ್ರಭಾವಿತರಾಗಿ ಅಪರಾಧಿ ಕೃತ್ಯ

ಟಿವಿಯಲ್ಲಿನ ಜನಪ್ರಿಯ ಅಪರಾಧ ಕಾರ್ಯಕ್ರಮದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ ಎಂದು ಬಾಲಕರು ಹೇಳಿದ್ದಾರೆ. ಆರಂಭದಲ್ಲಿ ಅವರು ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅಲ್ಲದೇ ಹುಡುಗನ ನಾಪತ್ತೆಯ ಬಗ್ಗೆ ವಿವಿಧ ಕಥೆಗಳನ್ನು ಕಟ್ಟಿದರು. ಆದರೆ ಅಂತಿಮವಾಗಿ ಬಾಲಕನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಟಿವಿಯಲ್ಲಿನ ಜನಪ್ರಿಯ ಅಪರಾಧ ಕಾರ್ಯಕ್ರಮದಿಂದ ತಾವು ಸ್ಫೂರ್ತಿ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ.
Published by:Annappa Achari
First published: