ದೆಹಲಿ (ಫೆ. 24): ಹಿಂದುಳಿದ ಮಕ್ಕಳಲ್ಲಿ ಮಾದಕ ವಸ್ತುಗಳ ಸೇವನೆಯು ನಿರಂತರವಾಗಿ ಕಳವಳಕ್ಕೆ ಕಾರಣವಾಗಿದೆ. ವಿಶೇಷವಾಗಿ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಟ್ರಾಮ್ ನಿಲ್ದಾಣಗಳು ಮತ್ತು ಇತರ ಸ್ಥಳಗಳಲ್ಲಿ ಭಿಕ್ಷೆ ಬೇಡುವವರು ಹೆಚ್ಚಾಗಿ ತಂಬಾಕು, ಮದ್ಯ ಮತ್ತು ಗಾಂಜಾದಂತಹ ದುಶ್ಚಟಗಳಿಗೆ ಒಳಗಾಗಿರುವುದು ಕಂಡುಬರುತ್ತಾರೆ.
ಭಾರತದಾದ್ಯಂತ ಇಂತಹವರ ಸಂಖ್ಯೆಗಳು ತುಂಬಾ ಹೆಚ್ಚಿವೆ ಮತ್ತು 2018 ರಲ್ಲಿ ಏಮ್ಸ್ ನೀಡಿದ ವರದಿಯಲ್ಲಿ ದೆಹಲಿಯ ಪ್ರತಿ ಮೂವರು ಬೀದಿಯಲ್ಲಿ ಇರುವ ಮಕ್ಕಳ ಪೈಕಿ ಒಂದು ಮಗು ತಂಬಾಕು, ಮದ್ಯ ಮತ್ತು ಗಾಂಜಾ ಮುಂತಾದ ವಸ್ತುಗಳನ್ನು ಒಳಗೊಂಡಿರುವ ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿದ್ದಾರೆ ಎಂದು ಕಂಡುಕೊಂಡಿದೆ. ಈ ಮಕ್ಕಳ ಅವಸ್ಥೆ ಎಲ್ಲರಿಗೂ ಕಾಣುವಂತಿದೆ. ಆದರೆ ಈ ಮಕ್ಕಳ ಜೀವನವನ್ನು ಉತ್ತಮಗೊಳಿಸಲು ಬದಲಾವಣೆಯನ್ನು ಉಂಟುಮಾಡುವಲ್ಲಿ ಕೆಲವೇ ನಿಜವಾದ ಪ್ರಯತ್ನಗಳು ನಡೆದಿವೆ. ಅವರಲ್ಲಿ ವಾರಾಣಸಿ ದಂಪತಿಯಾದ ಆಶಿಶ್ ಸಿಂಗ್ ಮತ್ತು ಅವರ ಪತ್ನಿ ಪೂಜಾ ಕೂಡ 50ಕ್ಕೂ ಹೆಚ್ಚು ಮಕ್ಕಳು ದುಶ್ಚಟಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದಾರೆ.
ಭಾರತದಲ್ಲಿ ಕನಿಷ್ಠ 30 ಲಕ್ಷ ಮಕ್ಕಳು ಮಾದಕ ದ್ರವ್ಯ ಮತ್ತು ಇನ್ಹೇಲೆಂಟ್ಗಳಿಗೆ ಹೇಗೆ ವ್ಯಸನಿಯಾಗಿದ್ದಾರೆ ಎಂದು 2019 ರ ವರದಿಯೊಂದು ತಿಳಿಸಿದೆ. ಆಶಿಶ್ 2000 ರಲ್ಲಿ ಕಾನ್ಪುರ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ನಂತರ ಡಿ-ಅಡಿಕ್ಷನ್ ಇನ್ಸ್ಟಿಟ್ಯೂಟ್ ಮಹಿಳಾ ಚೇತ್ನಾ ಸಮಿತಿ ಡ್ರಗ್ಸ್ ಪುನರ್ವಸತಿಯಲ್ಲಿ ಪರಸ್ಪರ ಭೇಟಿಯಾಗಿದ್ದರು. ಆಶಿಶ್ ಅವರು ನಗರದ ಪ್ರದೇಶಗಳಿಗೆ ಭೇಟಿ ನೀಡುವುದು ಮತ್ತು ಮಾದಕ ವ್ಯಸನಿಗಳಿಗೆ ಪುರ್ನವಸತಿ ನೀಡಲು ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇನೆ. ಆದರೆ, ಇದು ಅಲ್ಪಾವಧಿಯ ಪರಿಹಾರ ಎಂದು ತಾನು ಅರಿತುಕೊಂಡಿದ್ದು, ಏಕೆಂದರೆ ಹೆಚ್ಚಿನವರು ಕೇಂದ್ರವನ್ನು ತೊರೆದ ಕೂಡಲೇ ಚಟಕ್ಕೆ ಮತ್ತೆ ಮರಳಿದ್ದಾರೆ. ಈ ಹಿನ್ನೆಲೆ ಶಾಶ್ವತವಾಗಿ ಇಂತಹವರಿಗೆ ಏನಾದರೂ ಮಾಡಲು ನಿರ್ಧರಿಸಿದೆವು ಎಂದು ದಿ ಬೆಟರ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಟೀ ಬ್ಯಾಗ್, ಟೀ ಕಪ್ ಮೇಲೆ ಸೆಕ್ಸಿಯೆಸ್ಟ್ ಬರಹ ಬರೆದು ಕ್ಷಮೆ ಕೇಳಿದ ಚೀನಾದ ಪ್ರಸಿದ್ಧ ಚಹಾ ಅಂಗಡಿ..!
ಆಶಿಶ್ ಮತ್ತು ಅವರ ಪತ್ನಿ ಪೂಜಾ ಅವರು ಸಾರ್ವಜನಿಕ ಪ್ರಯಾಣದ ಪ್ರದೇಶಗಳಾದ ರೈಲ್ವೆ ಸ್ಟೇಷನ್ಗಳು, ಬಸ್ ನಿಲ್ದಾಣಗಳಲ್ಲಿ ಇನ್ಹೇಲೆಂಟ್ಗಳು, ಥಿನ್ನರ್ಗಳಿಗೆ ಹೇಗೆ ವ್ಯಸನಿಯಾಗುತ್ತಾರೆಂದು ತಿಳಿದುಕೊಂಡರು ಮತ್ತು ಅವರು ಎಲ್ಲಿಂದ ಬರುತ್ತಿದ್ದಾರೆಂದು ಪತ್ತೆ ಹಚ್ಚಲು ನಿರ್ಧರಿಸಿದರು. ಅವರಲ್ಲಿ ಹೆಚ್ಚಿನವರು ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್ಗಢ ಮತ್ತು ಭಾರತದ ಇತರ ಭಾಗಗಳಿಂದ ಬಂದವರು ಮತ್ತು ಅವರನ್ನು ಅನಾಥರು ಅಥವಾ ಕುಟುಂಬದಿಂದ ಕೈಬಿಡಲಾಯಿತು ಎಂದು ತಿಳಿದುಬಂದಿತು.
ಈಗ 43 ರ ಹರೆಯದ ಆಶಿಶ್ ಮತ್ತು ಅವರ ಪತ್ನಿ ಪೂಜಾ ಈ ಮಕ್ಕಳಿಗೆ ದುಃಖ ಮತ್ತು ಕಷ್ಟಗಳ ಜೀವನದಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ. ದಂಪತಿಯ ಸ್ಪೂರ್ತಿದಾಯಕ ಕಥೆಯನ್ನು ಫೇಸ್ಬುಕ್ನಲ್ಲಿ 'ಹ್ಯೂಮನ್ಸ್ ಆಫ್ ವಾರಾಣಸಿ' ಸಮುದಾಯದವರು ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ದಂಪತಿ ಎರಡು, ಎರಡೂವರೆ ಹಾಗೂ ಆರು ವರ್ಷ ವಯಸ್ಸಿನ ಮೂರು ಮಕ್ಕಳನ್ನು ಗುರುತಿಸಿ ಪೊಲೀಸರೊಂದಿಗೆ ಮಾತನಾಡಿದರು ಮತ್ತು ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ತಿಳಿದ ನಂತರ ಅವರನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡಿದರು. ಇವರಿಬ್ಬರು ತಮ್ಮ ಎನ್ಜಿಒಗೆ ಕುಟುಂಬ್ ಎಂದು ಹೆಸರಿಟ್ಟರು.
ಇದನ್ನೂ ಓದಿ: MBA Chai Wala: 8000 ರೂ.ನಿಂದ 3 ಕೋಟಿಯ ಬ್ಯುಸಿನೆಸ್; ಈ ಚಾಯ್ ವಾಲಾನ ಸಾಧನೆಗೆ ಮೆಚ್ಚಲೇಬೇಕು!
ಆರಂಭದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದರೂ, ದಂಪತಿಗೆ ನಿಕೋಲಾ ಫ್ರಾಕ್ ಎಂಬ ಜರ್ಮನ್ ನರ್ಸ್ ಹಣಕಾಸು ನೆರವು ನಿಡಿದರು. ಇದು ತಮ್ಮ ಅದೃಷ್ಟ ಎಂದು ಹೇಳಿಕೊಂಡ ಅವರು, ಆಕೆ ಮೊದಲಿಗೆ 56,000 ರೂಗಳನ್ನು ವರ್ಗಾಯಿಸಿದರು, ಮತ್ತು ಪ್ರತಿ ತಿಂಗಳು ಎನ್ಜಿಒಗೆ ಹಣ ಕಳುಹಿಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. ಅಲ್ಲದೆ, ಕೆಲವು ಫ್ರೆಂಚ್ ಪ್ರವಾಸಿಗರು ತಮ್ಮ ಎನ್ಜಿಒ ಬಗ್ಗೆ ತಿಳಿದುಕೊಂಡರು ಮತ್ತು ಹಣಕಾಸಿನ ನೆರವು ನೀಡಿದರು. ಅಮೆರಿಕ ಮೂಲದ ಮತ್ತೊಂದು ಸಂಸ್ಥೆ ವಿಷನ್ ಬಿಲ್ಡರ್ ಗಳು ಮಕ್ಕಳಿಗಾಗಿ ಕುಟುಂಬ್ ವಿಲೇಜ್ ಎಂಬ 3 ಎಕರೆ ಜಾಗದಲ್ಲಿ ಕಟ್ಟಡ ರಚಿಸಲು ಭೂಮಿಯನ್ನು ಖರೀದಿಸಲು ಸಹಾಯ ಮಾಡಿದರು.
ಹೀಗೆ ವರ್ಷಗಳಲ್ಲಿ ಎನ್ಜಿಒ ಬೆಳೆದಿದೆ ಮತ್ತು ಈಗ ಶಿಕ್ಷಣ ಪಡೆದ 50 ಮಕ್ಕಳನ್ನು ಹೊಂದಿದೆ. ಇದರಿಂದ ಮಕ್ಕಳು ಏನನ್ನಾದರೂ ಮಾಡುತ್ತಾರೆ ಹಾಗೂ ಉತ್ತಮ ಜೀವನವನ್ನು ನಡೆಸುತ್ತಾರೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ