• Home
  • »
  • News
  • »
  • national-international
  • »
  • NASA: ನಾಸಾದ ಚಂದ್ರಯಾನಕ್ಕೆ ಬೆನ್ನೆಲುಬಾದ ಭಾರತೀಯ ಮೂಲದ ಸುಭಾಷಿಣಿ ಅಯ್ಯರ್

NASA: ನಾಸಾದ ಚಂದ್ರಯಾನಕ್ಕೆ ಬೆನ್ನೆಲುಬಾದ ಭಾರತೀಯ ಮೂಲದ ಸುಭಾಷಿಣಿ ಅಯ್ಯರ್

ನಾಸಾ ಇಂಜಿನಿಯರ್ ಸುಭಾಷಿಣಿ ಅಯ್ಯರ್

ನಾಸಾ ಇಂಜಿನಿಯರ್ ಸುಭಾಷಿಣಿ ಅಯ್ಯರ್

Inspirational Story | ಮಾನವ ಸಹಿತ ಬಾಹ್ಯಾಕಾಶ ಯಾನದ ಯೋಜನೆಯಾಗಿರುವ ‘ಆರ್ಟೆಮಿಸ್’ ನಾಸಾದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಭಾರತ ಮೂಲದ ಇಂಜಿನಿಯರ್ ಸುಭಾಷಿಣಿ ಅಯ್ಯರ್ ಮುಖ್ಯ ಪಾತ್ರ ವಹಿಸಿದ್ದಾರೆ.

  • Share this:

ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್’ ಗಗನಯಾನ ಯೋಜನೆಯ ಮೊದಲ ಹಂತ ಆರಂಭವಾಗಿದ್ದು, ಅದರಲ್ಲಿ ಭಾರತದ ಕೊಯಮತ್ತೂರಲ್ಲಿ ಜನಿಸಿದ್ದ ಸುಭಾಷಿಣಿ ಅಯ್ಯರ್ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ.‘ಆರ್ಟೆಮಿಸ್’ ನ ರಾಕೆಟ್ ಕೋರ್ ಅಥವಾ ಈ ಯೋಜನೆಯ ಬೆನ್ನೆಲುಬಾಗಿರುವ ಯೋಜನೆಯ ಮೂಲ ಹಂತದ ಮೇಲ್ವಿಚಾರಣೆ ನಡೆಸುವ ಹೊಣೆ ಹೊತ್ತುಕೊಂಡಿರುವ ಮೆಕ್ಯಾನಿಕಲ್‍ ಎಂಜಿನಿಯರ್ ಆಗಿರುವ ಸುಭಾಷಿಣಿ ಅಯ್ಯರ್ ಕಳೆದ ಎರಡು ವರ್ಷಗಳಿಂದ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (ಎಸ್‌ಎಲ್‌ಎಸ್) ಜತೆಗೆ ಕೆಲಸ ಮಾಡುತ್ತಿದ್ದಾರೆ.


ನಾಸಾದ ಆರ್ಟೆಮಿಸ್ ಲೂನಾರ್ ಎಕ್ಸ್ ಪ್ಲೊರೇಷನ್ ( ಚಂದ್ರನ ಮೇಲಿನ ಪರಿಶೋಧನೆ) ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಚಂದ್ರನ ಮೇಲೆ ಇನ್ನೂ ಹೆಚ್ಚಿನದನ್ನು ಅನ್ವೇಷಿಸಲು ಸಾಧ್ಯವಾಗಲಿದೆ. ನಾಸಾದ ಹೊಸ ರಾಕೆಟ್ ಆಗಿರುವ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯು (ಎಸ್‌ಎಲ್‌ಎಸ್) ಭೂಮಿಯಿಂದ 2.8 ಲಕ್ಷ ಮೈಲು ದೂರದ ಚಂದ್ರನ ಕಕ್ಷೆಗೆ ಓರಿಯನ್ ಬಾಹ್ಯಾಕಾಶ ನೌಕೆ ತೆರಳಿ ಮೂರು ವಾರಗಳಲ್ಲಿ ಮರಳಲಿದೆ.


ನಾಸಾವು ಮೂರು ಹಂತಗಳಲ್ಲಿ ಚಂದ್ರಯಾನ ಮಾಡಲು ನಿರ್ಧರಿಸಿದ್ದು, ‘ಆರ್ಟೆಮಿಸ್’ I’ ಹಾಗೂ ‘ಆರ್ಟೆಮಿಸ್’ I I’ ಹಾಗೂ ಆರ್ಟೆಮಿಸ್ III ಎಂದು ನಾಮಕರಣ ಮಾಡಲಾಗಿದೆ. ‘ಆರ್ಟೆಮಿಸ್’ I’ ಮಾನವ ರಹಿತ ಯಾನವಾಗಿದ್ದು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (ಎಸ್‌ಎಲ್‌ಎಸ್) ಹಾಗೂ ಓರಿಯನ್‍ ಬಾಹ್ಯಾಕಾಶ ನೌಕೆಯನ್ನು ಪರೀಕ್ಷಿಸಲಿದೆ. ಅದರ ನಂತರ ‘ಆರ್ಟೆಮಿಸ್ II’ ಯೋಜನೆ ಜಾರಿಗೆ ಬರಲಿದ್ದು ಅದರಲ್ಲಿ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (ಎಸ್‌ಎಲ್‌ಎಸ್) ಹಾಗೂ ಓರಿಯನ್ ಪರೀಕ್ಷಾ ನೌಕೆಯು ಮಾನವ ಸಹಿತವಾಗಿ ಬಾಹ್ಯಾಕಾಶಕ್ಕೆ ತೆರಳಲಿದೆ. 2024ರಲ್ಲಿ ಆರ್ಟೆಮಿಸ್ III ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲಿದೆ. ಬಳಿಕ ವರ್ಷಕ್ಕೊಮ್ಮೆ ಈ ಯಾನ ಮುಂದುವರಿಯಲಿದೆ.


ಇದನ್ನೂ ಓದಿ: PM Narendra Modi: ಇಂದು ಸಂಜೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

“ಕೊನೆಯ ಬಾರಿ ಚಂದ್ರನ ಮೇಲೆ ಕಾಲಿರಿಸಿ ಈಗಾಗಲೇ 50 ವರ್ಷಗಳು ಉರುಳಿವೆ. ನಾವೀಗ ಚಂದ್ರನ ಮೇಲೆ ಮಾತ್ರವಲ್ಲ ಚಂದ್ರನಿಂದಾಚೆ ಮಂಗಳನವರೆಗೂ ಮಾನವನನ್ನು ಕಳಿಸಲು ಸಜ್ಜಾಗುತ್ತಿದ್ದೇವೆ. ಕೋರ್ ಹಂತವನ್ನು ನಿರ್ಮಿಸುವ ಹಾಗೂ ಅದನ್ನು ನಾಸಾಗೆ ಹಸ್ತಾಂತರಿಸುವವರೆಗೆ ಅಗತ್ಯವಿರುವ ನೆರವಿನ ಮೇಲ್ವಿಚಾರಣೆ ಮಾಡುವುದು ಈ ಯೋಜನೆಯಲ್ಲಿ ನನ್ನ ಕೆಲಸವಾಗಿದೆ” ಎನ್ನುತ್ತಾರೆ ಸುಭಾಷಿಣಿ.


ಮಾನವ ಸಹಿತ ಬಾಹ್ಯಾಕಾಶ ಯಾನದ ಯೋಜನೆಯಾಗಿರುವ ‘ಆರ್ಟೆಮಿಸ್’ ಅಮೆರಿಕ ನೇತೃತ್ವದ ನಾಸಾದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2017ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಟ್ರಂಪ್ ಇದಕ್ಕೆ ಚಾಲನೆ ನೀಡಿದ್ದರು. 2020ರ ದಶಕದ ಮಧ್ಯಭಾಗದಲ್ಲಿ ಅಂದರೆ 2024ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಮಾನವನನ್ನು ಇಳಿಸುವ ಯೋಜನೆ ಇದಾಗಿದೆ. ಇದೇನಾದರೂ ಯಶಸ್ಸು ಕಂಡರೆ, 1972 ರಲ್ಲಿ ಅಮೆರಿಕ ಅಪೊಲೋ ಯೋಜನೆ ಬಳಿಕ ಚಂದ್ರನ ಮೇಲೆ ಮತ್ತೊಮ್ಮೆ ಮಾನವನನ್ನು ಇಳಿಸಿ ಮತ್ತೆ ಮರಳಿಸಿದ ದಾಖಲೆ ಬರೆಯಲಿದೆ.
ಅಂದಹಾಗೆ, ಸುಭಾಷಿಣಿ ಅಯ್ಯರ್ ಅವರು ವಿ.ಎಲ್.ಬಿ ಜಾನಕಿ ಅಮ್ಮಾಳ್ ಕಾಲೇಜಿನಲ್ಲಿ 1992ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದು, ಆ ಕಾಲೇಜಿನಿಂದ ಮೆಕ್ಯಾನಿಕಲ್‍ ಎಂಜಿನಿಯರಿಂಗ್ ಪದವಿ ಪಡೆದ ಮೊತ್ತ ಮೊದಲ ಮಹಿಳೆಯರ ಪೈಕಿ ಒಬ್ಬರಾಗಿದ್ದರು. ಅವರೀಗ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರ್ ಗಳ ವೈವಿಧ್ಯಮಯ ತಂಡಗಳನ್ನು ಮುನ್ನಡೆಸುತ್ತಿದ್ದಾರೆ.


Published by:Sushma Chakre
First published: