ಯಾವುದು ಅಸಾಧ್ಯ ಅಂತ ನಾವು ಅಂದುಕೊಂಡಿರುತ್ತೇವೆಯೋ, ಅದನ್ನು ಬೇರೆಯೊಬ್ಬರು ಸಾಧಿಸಿರುತ್ತಾರೆ. ಇದರ ಅರ್ಥ ಏನೆಂದರೆ ಕೆಲವರು ಕೆಲಸ ತುಂಬಾ ಕಷ್ಟದ್ದು, ಸಾಧಿಸಲು ಆಗುವುದಿಲ್ಲ ಬಿಡಿ ಅಂತ ಹೇಳಿ ಆ ಕೆಲಸವನ್ನು ಅಲ್ಲಿಗೆ ಬಿಡುತ್ತಾರೆ. ಆದರೆ ಇನ್ನು ಕೆಲವರು ಹಿಡಿದ ಕೆಲಸ ಮತ್ತು ಹಾಕಿಕೊಂಡ ಗುರಿಯನ್ನು ಎಂತಹ ಕಷ್ಟಗಳು ಎದುರಾದರೂ ಸಹ ಅದನ್ನು ಮಾಡಿಯೇ ಬಿಡುತ್ತಾರೆ. 38 ವರ್ಷದ ದೀಪ್ ಜೆ ಕಾಂಟ್ರಾಕ್ಟರ್ ಎಂಬ ಮಹಿಳೆ ಅಂಟಾರ್ಕ್ಟಿಕಾದಂತಹ ಖಂಡವನ್ನು (Antarctica) ತಲುಪಿ ಸಾಧನೆ ಮಾಡಲು ಎಲ್ಲಾ ಅಡೆತಡೆಗಳನ್ನು ಎದುರಿಸಿದರು. 'ಆಜಾದಿ ಕಾ ಅಮೃತ್ ಮಹೋತ್ಸವ್' ದ ಅಂಗವಾಗಿ 'ಕ್ಲೈಮೇಟ್ ಫೋರ್ಸ್ ಅಂಟಾರ್ಕ್ಟಿಕಾ 2022 ಎಕ್ಸ್ಪೆಡಿಷನ್'ನ (Climate Force Antarctica 2022 Expedition) ಭಾಗವಾಗಿರುವ ಮೊದಲ ಮಹಿಳಾ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರದ್ದು.
ಇವರು ಕರ್ನಾಟಕದವರಾಗಿದ್ದು, (Karnataka Woman) ಭಾರತೀಯ ಅರಣ್ಯ ಸೇವೆಗೆ (Forest Department) ಸೇರಿ ಈ ಸಾಧನೆ ಮಾಡಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಖಾಯಿಲೆ ಇದ್ದರೂ ಬಿಡಲಿಲ್ಲ ಈ ಗುರಿಯನ್ನು ತಲುಪುವುದು ದೀಪ್ ಅವರಿಗೆ ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ತರಬೇತಿಯ ಸಮಯದಲ್ಲಿ, ಇವರು ಸಂಧಿವಾತ ಮತ್ತು ಅಪೆಂಡಿಸೈಟಿಸ್ ಕಾಯಿಲೆಗಳಿಂದ ಸಹ ಬಳಲಿದರು. ಆದರೂ, ಇವರು ತನ್ನ ಗುರಿಯ ಕಡೆಗೆ ನೆಟ್ಟಿರುವ ಅವರ ದೃಷ್ಟಿಯನ್ನು ವಿಚಲಿತಗೊಳಿಸಿಕೊಂಡಿಲ್ಲ ಮತ್ತು ಅಂಟಾರ್ಕ್ಟಿಕಾ ಖಂಡವನ್ನು ತಲುಪುವ ಮೂಲಕ ತನ್ನ ಛಾಪನ್ನು ಮೂಡಿಸಿದರು. ಅವರ ಸಾಧನೆಯು ಈಗ ದೇಶಾದ್ಯಂತದ ಮಹಿಳೆಯರಿಗೆ ಸ್ಫೂರ್ತಿಯ ಸೆಲೆ ಎಂದು ಸಾಬೀತುಪಡಿಸುತ್ತಿದೆ.
ಯಾವುದೂ ಅಸಾಧ್ಯವಲ್ಲ ಅಂತಾರೆ ದೀಪ್ ದೀಪ್ ಜೆ ಕಾಂಟ್ರಾಕ್ಟರ್ ಅವರು 2011 ರಲ್ಲಿ ತಮ್ಮ ಪದವಿಯ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕರ್ನಾಟಕ ಅರಣ್ಯ ಸೇವೆಗೆ ಸೇರಿದರು. ಆರಂಭದಲ್ಲಿ, ಅಂಟಾರ್ಕ್ಟಿಕಾಗೆ ಪ್ರಯಾಣಿಸುವ ಬಗ್ಗೆ ಇವರು ಹೆಚ್ಚು ಉತ್ಸುಕಳಾಗಿರಲಿಲ್ಲ. ಆದರೆ ಚಾರುಲತಾ ಸೋಮಲ್ ಎಂಬ 2012 ರ ಬ್ಯಾಚ್ನ ಐಎಎಸ್ ಅಧಿಕಾರಿಯೊಬ್ಬರು ಇವರ ಹೆಸರನ್ನು ಶಿಫಾರಸು ಮಾಡಿದರು.
ಇದೊಂದು ಹವಾಮಾನ ಬದಲಾವಣೆ ಜಾಗೃತಿ ಯಾತ್ರೆ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಅವರು "ನಾನು ಇದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದಾಗ ಇದು ಕೇವಲ ಸಾಮಾನ್ಯ ಪ್ರಯಾಣವಲ್ಲ, ಇದೊಂದು ಹವಾಮಾನ ಬದಲಾವಣೆ ಜಾಗೃತಿ ಯಾತ್ರೆ ಎಂದು ನನಗೆ ಅರ್ಥವಾಯಿತು. ನಾವು ಅದರ ಬಗ್ಗೆ ಕಲಿಯಬೇಕು, ಅಂಟಾರ್ಕ್ಟಿಕಾದ ಮೇಲೆ ಅದರ ಪರಿಣಾಮಗಳನ್ನು ನೋಡಬೇಕು ಮತ್ತು ಅದು ನಮ್ಮ ಸ್ವಂತ ದೇಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಬಯಸಿದ್ದರು" ಎಂದು ದೀಪ್ ಹೇಳಿದರು.
ಸಜ್ಜಾಗಿದ್ದು ಹೇಗೆ? ಇವರಿಗೆ ಆಯ್ಕೆ ಪ್ರಕ್ರಿಯೆಯಿಂದ ತರಬೇತಿಯವರೆಗೆ ಯಾವುದೇ ಅಡೆತಡೆಗಳು ಆಗಿರಲಿಲ್ಲ, ಆನ್ಲೈನ್ ಸಂದರ್ಶನವನ್ನು ನೀಡಬೇಕಾಗಿತ್ತು. ಆ ಸಮಯದಲ್ಲಿ ಕೋವಿಡ್ -19 ಪ್ರೋಟೋಕಾಲ್ನಲ್ಲಿ ಒಳಗೊಂಡಿರುವ ವೀಸಾ ಮತ್ತು ಅಗತ್ಯ ಪ್ರಕ್ರಿಯೆಗಳಿಗೆ ಸಿದ್ಧರಾಗಬೇಕಾಗಿತ್ತು. ಅದರ ನಂತರ, ಇವರ ತರಬೇತಿ ಪ್ರಾರಂಭವಾಯಿತು. ಇವರು ಈ ಯಾತ್ರೆಗೆ ಸಜ್ಜಾಗಲು ಕೆಲಸ ಮಾಡಲು ಪ್ರಾರಂಭಿಸಿದರು.
ಮನಸ್ಸು ಗಟ್ಟಿ ಮಾಡಿಕೊಂಡರು "ಇದು ಕೇವಲ ಸ್ನಾಯುಗಳ ಬಲವಲ್ಲ, ಕೆಳಭಾಗದಲ್ಲಿ ಮೂರರಿಂದ ನಾಲ್ಕು ಪದರಗಳು, ಮೇಲ್ಭಾಗದಲ್ಲಿ ನಾಲ್ಕರಿಂದ ಐದು ಪದರಗಳು, ಮೊಣಕಾಲು ಎತ್ತರದ ಜಲನಿರೋಧಕ ಬೆಚ್ಚಗಿನ ಎರಡು ಕೈಗವಸುಗಳು ಮತ್ತು ಮಕ್ ಬೂಟ್ಗಳು ಸೇರಿದಂತೆ ಎಲ್ಲಾ ಸಲಕರಣೆಗಳೊಂದಿಗೆ ನಾವು ನಡೆಯಲು ಕಲಿಯಬೇಕಾಗಿತ್ತು, ಮಾನಸಿಕ ಶಕ್ತಿಯು ದೈಹಿಕ ಸಾಧನೆಯಿಂದ ಬಂದಿತು. ಅಲ್ಲಿಗೆ ಹೋಗಿ ಬಂದ ನಂತರ, ಈಗ ನನ್ನ ಮನಸ್ಸು ಅದನ್ನು ಮಾಡಬಹುದು ಎಂದು ನಂಬಲು ಪ್ರಾರಂಭಿಸಿತು" ಎಂದು ಅವರು ಸುದ್ದಿ ಮಾಧ್ಯಮಕ್ಕೆ ಹೇಳಿದರು.
ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಹೆಸರೇ ಸೂಚಿಸುವಂತೆ, 2041 ರ 'ಕ್ಲೈಮೇಟ್ ಫೋರ್ಸ್ ಅಂಟಾರ್ಕ್ಟಿಕಾ 2022 ಎಕ್ಸ್ಪೆಡಿಷನ್ ಖಂಡದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಯಾತ್ರೆಯ ಸಮಯದಲ್ಲಿ, ತಂಡವು ದೈತ್ಯ ಮಂಜುಗಡ್ಡೆಯನ್ನು ನೋಡಿತು. "ನಮ್ಮ ಮನಸ್ಸು ಒಂದಿ ಕ್ಷಣ ಗಲಿಬಿಲಿಗೊಂಡಿತ್ತು, ಏಕೆಂದರೆ ಇದು ಕರಗಿ ನೀರಿಗೆ ಸೇರಿದರೆ ಏನಾಗುತ್ತದೆ. ಏರುತ್ತಿರುವ ಸಮುದ್ರ ನೀರಿನ ಮಟ್ಟಗಳ ಬಗ್ಗೆ ಜನರು ಭಯಭೀತರಾಗುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದು ದೀಪ್ ಹೇಳಿದರು.
“ನಾವು ಇಲ್ಲಿ ಮಾಡುವ ಕೆಲವು ಕೆಲಸಗಳು ಅಂಟಾರ್ಕ್ಟಿಕಾದಲ್ಲಿನ ವನ್ಯಜೀವಿಗಳ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎಂದು ನೋಡುವುದು ನಿಜವಾಗಿಯೂ ಆಕರ್ಷಕ ಮತ್ತು ಅಷ್ಟೇ ಹೃದಯ ವಿದ್ರಾವಕವಾಗಿತ್ತು” ಎಂದು ದೀಪ್ ಹೇಳುತ್ತಾರೆ.
ಸುಲಭವಲ್ಲ ಜನರು ಹೆಚ್ಚಾಗಿ ಇಂತಹ ಯಾತ್ರೆಗಳಿಗೆ ಮಹಿಳೆಯರು ಹೋಗುವುದು ಅಷ್ಟು ಸುಲಭವಲ್ಲ ಎಂದು ಹೇಳಿ, ಅವರ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ, ಅವರು ಇದನ್ನು ಸಾಧಿಸಲು ಸಮರ್ಥರಾಗಿರುವುದಿಲ್ಲ ಎಂದು ಹೇಳುತ್ತಾರೆ. ದೀಪ್ ಜೆ ಕಾಂಟ್ರಾಕ್ಟರ್ ಅವರ ಈ ಸಾಧನೆಯು ಈ ಎಲ್ಲಾ ಮಾತುಗಳನ್ನು ಬುಡಮೇಲು ಮಾಡಿದೆ.
"ಲಿಂಗ, ವಯಸ್ಸು, ಸಮಾಜದಲ್ಲಿನ ಸ್ಥಾನಮಾನ, ವೈವಾಹಿಕ ಸ್ಥಿತಿ, ನಮಗೆ ಮಕ್ಕಳಿದ್ದಾರೆಯೇ ಇತ್ಯಾದಿ ಆಧಾರದ ಮೇಲೆ ತಮ್ಮ ಮೇಲೆ ಮಿತಿಗಳನ್ನು ಹೇರುವುದನ್ನು ನಿಲ್ಲಿಸುವಂತೆ ನಾನು ನಮ್ಮ ದೇಶದ ಮಹಿಳೆಯರಿಗೆ ಹೇಳಲು ಬಯಸುತ್ತೇನೆ. ನಮ್ಮ ಮನಸ್ಸಿನಲ್ಲಿರುವ ಅಡೆತಡೆಗಳನ್ನು ನಾವು ಮುರಿದ ಕ್ಷಣ, ಭೌತಿಕ ಅಡೆತಡೆಗಳು ಸಹ ತನ್ನಷ್ಟಕ್ಕೆ ತಾನೇ ಮಾಯವಾಗುತ್ತವೆ" ಎಂದು ದೀಪ್ ಹೇಳಿದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ