News18 India World Cup 2019

ರಾಹುಲ್​​ ಮಾನಸ ಸರೋವರ ಯಾತ್ರೆ ಸುತ್ತ ಭಾರೀ ಚರ್ಚೆ: ‘ಚೈನೀಸ್​ ಗಾಂಧಿ’ ಎಂದು ಬಿಜೆಪಿ ವ್ಯಂಗ್ಯ

ರಾಹುಲ್​ ಗಾಂಧಿ ಅವರು ಶಿವಭಕ್ತ. ತಮ್ಮ ಹರಕೆ ತೀರಿಸಿಕೊಳ್ಳಲು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾರೆ. ಹಿಂದೂಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ, ಶಿವನಿಗೆ ಅವಮಾನ ಮಾಡುತ್ತಿದ್ದಾರೆ.

Ganesh Nachikethu
Updated:September 1, 2018, 12:33 PM IST
ರಾಹುಲ್​​ ಮಾನಸ ಸರೋವರ ಯಾತ್ರೆ ಸುತ್ತ ಭಾರೀ ಚರ್ಚೆ: ‘ಚೈನೀಸ್​ ಗಾಂಧಿ’ ಎಂದು ಬಿಜೆಪಿ ವ್ಯಂಗ್ಯ
ರಾಹುಲ್​ ಗಾಂಧಿ ಅವರು ಶಿವಭಕ್ತ. ತಮ್ಮ ಹರಕೆ ತೀರಿಸಿಕೊಳ್ಳಲು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾರೆ. ಹಿಂದೂಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ, ಶಿವನಿಗೆ ಅವಮಾನ ಮಾಡುತ್ತಿದ್ದಾರೆ.
Ganesh Nachikethu
Updated: September 1, 2018, 12:33 PM IST
ನ್ಯೂಸ್​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​.01): ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧೀ ಅವರು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್​ ನಡುವೆ ವಾಕ್​ ಸಮರ ಮುಂದುವರೆದಿದೆ. ರಾಹುಲ್​ ಯಾತ್ರೆಗೆ ತೆರಳುವ ಮುನ್ನ ಚೀನಾ ಎಂಬಸಿ ಅಧಿಕಾರಿಗಳು ವಿದಾಯ ಹೇಳಬೇಕಿತ್ತು ಎಂದು ಬಯಸಿದ್ದರು. ಹೀಗಾಗಿ ಚೀನಾ ಜತೆಗೆ ರಾಹುಲ್​​ ಉತ್ತಮ​ ಸಂಬಂಧ ಹೊಂದಿದ್ದಾರೆ. ಈ ಬಗ್ಗೆ ಉತ್ತರಿಸಿ ಎಂದು ಬಿಜೆಪಿ ಆಗ್ರಹಿಸುತ್ತಿದೆ.

ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​, ರಾಹುಲ್ ಗಾಂಧಿ ಅವರ​ ಮಾನಸ ಸರೋವರ ಯಾತ್ರೆ ವಿಚಾರಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ. ರಾಹುಲ್​ ಗಾಂಧಿಯೋರ್ವ ಶಿವಭಕ್ತ, ಇತ್ತೀಚೆಗೆ ದೈವಭಕ್ತರಾಗಿ ಬದಲಾಗಿದ್ದಾರೆ. ಶಿವನ ದರ್ಶನಕ್ಕಾಗಿ ಯಾತ್ರೆ ಕೈಗೊಂಡಿದ್ಧಾರೆ ಎಂದು ಕಾಂಗ್ರೆಸ್​ ಸಮಜಾಯಿಷಿ ನೀಡಿದೆ.

ಬಿಜೆಪಿ ವಕ್ತಾರ ಸಂಬಿತ ಪಾತ್ರ ಈ ಸಂಬಂಧ ಟ್ವೀಟ್​ ಮಾಡಿದ್ದು, ಯಾತ್ರಗೆ ತೆರಳುವ ಸಂದರ್ಭದಲ್ಲಿ ಚೈನಾ ರಾಯಭಾರಿ ಬೀಳ್ಕೊಡುಗೆ ನೀಡಬೇಕೆಂದು ಯಾಕೇ ಬಯಸಿದ್ದೀರಿ ರಾಹುಲ್​ ಜೀ? ಎಂದು ಪ್ರಶ್ನಿಸಿದ್ಧಾರೆ. ಅಲ್ಲದೇ ನಿಮ್ಮ ಹೆಸರು ರಾಹುಲ್​ ಗಾಂಧಿಯೇ ಹೊರತು, ಚೈನೀಸ್​ ಗಾಂಧಿ ಅಲ್ಲವಲ್ಲ. ಆದರೂ ನೀವು ಚೀನಾ ಜತೆಗೆ ಯಾಕೇ ಸಂಬಂಧ ಹೊಂದಿದ್ದೀರಿ? ಎಂದು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದೆ ವೇಳೆ ಡೋಕ್ಲಾಮ್​ ಗಡಿ ವಿವಾದ ಸಂದರ್ಭದಲ್ಲಿಯೂ ನೀವು ಭಾರತ ವಿರೋಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದೀರಿ. ಬೀಜಿಂಗ್​ ಒಲಿಂಪಿಕ್ಸ್​ ಪ್ರಾರಂಭೋತ್ಸವಕ್ಕೆ ನಿಮ್ಮನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಸೋನಿಯಾ ಗಾಂಧಿ ಅವರು ಕೂಡ ಚೀನಾ ದೇಶಕ್ಕೆ ವಿಶೇಷ ಅತಿಥಿ. ಹೀಗಾಗಿ ಈ ಸಂಬಂಧಗಳನ್ನು ನಾವು ಏನೆಂದು ಅರ್ಥೈಸಿಕೊಳ್ಳಬೇಹು ಹೇಳಿ ಎಂದು ಗಂಭೀರ ಆರೋಪ ಎಸಗಿದ್ದಾರೆ.

ಸಂಬಿತ ಪಾತ್ರ ಗಂಭೀರ ಆರೋಪಕ್ಕೆ ಉತ್ತರಿಸಿರುವ ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜಿವಾಲ ಅವರು, ರಾಹುಲ್​ ಗಾಂಧಿ ಅವರು ಶಿವಭಕ್ತ. ತಮ್ಮ ಹರಕೆ ತೀರಿಸಿಕೊಳ್ಳಲು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾರೆ. ಹಿಂದೂಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ, ಪರಮಾತ್ಮ ಶಿವನಿಗೆ ಅವಮಾನ ಮಾಡುತ್ತಿದ್ದಾರೆ. ಯಾತ್ರಗೆ ಹೋಗಲು ಬಿಜೆಪಿ ಅನುಮತಿ ಪಡಯಬೇಕೆ ಎಂದು ಎದುರೇಟು ನೀಡಿದ್ಧಾರೆ.
Loading...

ರಾಹುಲ್ ಗಾಂಧಿ ಅವರು 12 ದಿನಗಳ ಕಾಲ ಯಾತ್ರೆ ಕೈಗೊಂಡಿದ್ದಾರೆ. ಅವರು ಈ ಪವಿತ್ರ ಯಾತ್ರೆ ಕೈಗೊಳ್ಳಲು ಕಾರಣ ಕರ್ನಾಟಕವೇ ಎಂಬುದು ಕುತೂಹಲದ ವಿಚಾರ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ನಿಮಿತ್ತವಾಗಿ ಏಪ್ರಿಲ್ 26ರಂದು ರಾಹುಲ್ ಗಾಂಧಿ ಅವರು ದೆಹಲಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ, ಅವರಿದ್ದ ವಿಮಾನ ತಾಂತ್ರಿಕ ದೋಷದಿಂದ ತುರ್ತು ಲ್ಯಾಂಡಿಂಗ್ ಆಗಬೇಕಾಯಿತು.

ಈ ವೇಳೆ ರಾಹುಲ್ ಗಾಂಧಿ ಅವರಿಗೆ ಸಾವಿನ ದರ್ಶನವೇ ಆಗಿಹೋಗಿತ್ತಂತೆ. ಹೀಗಾಗಿ ರಾಹುಲ್ ಮನಸಲ್ಲಿ ಮಾನಸ ಸರೋವರ ಯಾತ್ರೆ ಮಾಡಬೇಕೆಂಬ ಸಂಕಲ್ಪ ಮೂಡಿದಂತೆ. ಎರಡು ದಿನಗಳ ನಂತರ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆಯನ್ನು ಘಟನೆ ಮೆಲುಕು ಹಾಕಿದ್ದರು.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...