INS Vikrant: ದೇಶದ ಹೆಮ್ಮೆಯ ಐಎನ್​ಎಸ್ ವಿಕ್ರಾಂತ್, ಹೊಸ ನೌಕಾಧ್ವಜ ಅನಾವರಣಗೊಳಿಸಿದ ಪಿಎಂ ಮೋದಿ

13 ವರ್ಷಗಳ ಸತತ ಪರಿಶ್ರಮದಿಂದ ದೇಶದಲ್ಲೇ ಐಎನ್​ಎಸ್ ವಿಕ್ರಾಂತ್ ತಯಾರಿಸಲಾಗಿದೆ.

ಐಎನ್​ಎಸ್ ವಿಕ್ರಾಂತ್ ಮತ್ತು ಹೊಸ ನೌಕಾಧ್ವಜ

ಐಎನ್​ಎಸ್ ವಿಕ್ರಾಂತ್ ಮತ್ತು ಹೊಸ ನೌಕಾಧ್ವಜ

 • Share this:

  ಕೊಚ್ಚಿ: ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದ ಹೊಸ ನೌಕಾ ಧ್ವಜವನ್ನು(Naval Ensign) ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಕ್ರವಾರ ಅನಾವರಣಗೊಳಿಸಿದ್ದಾರೆ. ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹನ ಯುದ್ಧನೌಕೆ ಐಎನ್​ಎಸ್ ವಿಕ್ರಾಂತ್ (INS Vikrant) ಮತ್ತು ಹೊಸ ನೌಕಾಧ್ವಜವನ್ನು ಲೋಕಾರ್ಪಡೆಗೊಳಿಸಲಾಗಿದೆ. ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ನೌಕಾ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

  ಒಮ್ಮೆ ಕಾರ್ಯಾರಂಭ ಮಾಡಿದ ನಂತರ ಐಎನ್​ಎಸ್​  ವಿಕ್ರಾಂತ್,  ಐಎನ್ಎಸ್ ವಿಕ್ರಮಾದಿತ್ಯ ಜೊತೆಗೆ ನೌಕಾಪಡೆಯೊಂದಿಗೆ ಸೇವೆಯಲ್ಲಿರುವ ಎರಡನೇ ವಿಮಾನವಾಹಕ ನೌಕೆಯಾಗಿದೆ. ಮೂರನೇ ಸ್ವದೇಶಿ ವಿಮಾನವಾಹಕ ನೌಕೆಗೆ ಇನ್ನೂ ಸರ್ಕಾರದ ಅನುಮತಿ ಸಿಗಬೇಕಿದೆ.  13 ವರ್ಷಗಳ ಸತತ ಪರಿಶ್ರಮದಿಂದ ದೇಶದಲ್ಲೇ ಐಎನ್​ಎಸ್ ವಿಕ್ರಾಂತ್ ತಯಾರಿಸಲಾಗಿದೆ.


  ಹೊಸ ವಿಶ್ವಾಸ ತುಂಬಿದ ಐಎನ್​ಎಸ್ ವಿಕ್ರಾಂತ್
  ಐಎನ್​ಎಸ್ ವಿಕ್ರಾಂತ್ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತವು ಸ್ಥಳೀಯ ತಂತ್ರಜ್ಞಾನದೊಂದಿಗೆ ಅಂತಹ ದೊಡ್ಡ ವಿಮಾನವಾಹಕ ನೌಕೆಗಳನ್ನು ನಿರ್ಮಿಸುವ ದೇಶಗಳಿಗೆ ಸೇರಿದೆ. ಇಂದು ಐಎನ್‌ಎಸ್ ವಿಕ್ರಾಂತ್ ಭಾರತವನ್ನು ಹೊಸ ವಿಶ್ವಾಸದಿಂದ ತುಂಬಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಭಾರತೀಯ ನೌಕಾಪಡೆ, ಎಲ್ಲಾ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

  ಇದನ್ನೂ ಓದಿ:YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ 

  ವಿಶೇಷ ವಿಭಿನ್ನ ಯುದ್ಧನೌಕೆ
  ವಿಕ್ರಾಂತ್ ಬೃಹತ್ ಮತ್ತು ಭವ್ಯವಾಗಿದೆ. ವಿಭಿನ್ನವಾಗಿದೆ. ವಿಕ್ರಾಂತ್ ವಿಶೇಷವಾಗಿದೆ. ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಇದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

  ಇದನ್ನೂ ಓದಿ: Mamata Banerjee: ಆರ್​ಎಸ್​ಎಸ್​ ಹೊಗಳಿದ ಮಮತಾ ಬ್ಯಾನರ್ಜಿ; ಸಂಘದ ನಾಯಕರನ್ನು ಸೆಳೆಯುವ ಯತ್ನವೇ?

  ಹೊಸ ನೌಕಾಧ್ವಜದ ವಿಶೇಷತೆಯೇನು?
  ಇಂದಿನವರೆಗೂ ಭಾರತೀಯ ನೌಕಾ ಧ್ವಜವು ಗುಲಾಮಗಿರಿಯ ಸಂಕೇತವನ್ನು ಹೊಂದಿತ್ತು. ಅದನ್ನು ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಪೂರ್ತಿ ಪಡೆದು ಹೊಸ ನೌಕಾಧ್ವಜ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಎಸ್ ವಿಕ್ರಾಂತ್‌ಗೆ ಚಾಲನೆ ನೀಡುವ ಮೊದಲು ಹೇಳಿದರು. ಹಳೆಯ ಧ್ವಜವು ಕೆಂಪು ಸೇಂಟ್ ಜಾರ್ಜ್ ಕ್ರಾಸ್ ಅನ್ನು ಹೊಂದಿತ್ತು. ಇದು ಭಾರತದ ವಸಾಹತುಶಾಹಿ ಗತಕಾಲಕ್ಕೆ ಸಂಬಂಧಿಸಿದ ಅಂಶಗಳನ್ನು ಹೊಂದಿತ್ತು. ಆದರೆ ಹೊಸ ನೌಕಾಧ್ವಜದಲ್ಲಿ ಭಾರತದ ಧ್ವಜವನ್ನು ಸೇರಿಸಲಾಗಿದೆ.
  Published by:guruganesh bhat
  First published: