ಇನ್ಫೋಸಿಸ್​ನಲ್ಲೂ ಉದ್ಯೋಗ ಬಿಕ್ಕಟ್ಟು; ಮಧ್ಯಮ, ಹಿರಿಯ ಶ್ರೇಣಿಯ ಸಾವಿರಾರು ಉದ್ಯೋಗಿಗಳ ವಜಾಗೆ ನಿರ್ಧಾರ

ವಾರದ ಹಿಂದೆಯಷ್ಟೇ ಭಾರತದ ದೊಡ್ಡ ಐಟಿ ಹಬ್​ ಆಗಿರುವ ಅಮೆರಿಕ ಮೂಲದ ಕಾಗ್ನಿಜೆಂಟ್​ ಕಂಪನಿ ಕೂಡ 7 ಸಾವಿರ ಉದ್ಯೋಗಿಗಳು ಕೆಲಸದಿಂದ ವಜಾ ಮಾಡುವ ತೀರ್ಮಾನ ಪ್ರಕಟಿಸಿತ್ತು.

HR Ramesh | news18-kannada
Updated:November 5, 2019, 3:53 PM IST
ಇನ್ಫೋಸಿಸ್​ನಲ್ಲೂ ಉದ್ಯೋಗ ಬಿಕ್ಕಟ್ಟು; ಮಧ್ಯಮ, ಹಿರಿಯ ಶ್ರೇಣಿಯ ಸಾವಿರಾರು ಉದ್ಯೋಗಿಗಳ ವಜಾಗೆ ನಿರ್ಧಾರ
ಇನ್ಪೋಸಿಸ್
  • Share this:
ನವದೆಹಲಿ: ದೇಶದ ಪ್ರತಿಷ್ಠಿತ ಐಟಿ ಕಂಪನಿಯಾದ ಇನ್ಫೋಸಿಸ್​ನಲ್ಲೂ ಉದ್ಯೋಗ ಕಡಿತ ಪರ್ವ ಆರಂಭವಾಗಿದೆ. ಇನ್ಫೋಸಿಸ್​ನ ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿ ಇರುವ ಸಿಬ್ಬಂದಿಯನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಂಪನಿಯಿಂದ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಇನ್ಫೋಸಿಸ್​ನ ಜಾಬ್​ ಲೆವೆಲ್​ 6 ಮತ್ತು ಜಾಬ್ ಲೆವೆಲ್ 7 ಹಾಗೂ ಜಾಬ್​ ಲೆವೆಲ್ 8ರ ಶ್ರೇಣಿಯಲ್ಲಿ ಒಟ್ಟು 30,092 ಉದ್ಯೋಗಿಗಳಿದ್ದಾರೆ. ಇವರಲ್ಲಿ ಜೆಲ್​ 6 ಹಾಗೂ ಸಿನಿಯರ್ ಮ್ಯಾನೇಜರ್ ಲೆವೆಲ್​ನ ಒಟ್ಟು 2,200 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಅಸೋಸಿಯೇಟ್ ಉದ್ಯೋಗಿಗಳಲ್ಲಿ ಜೆಲ್​ 3 ಮತ್ತು ಅದಕ್ಕಿಂತ ಕೆಳಗಿನ ಹಂತದ ಹಾಗೂ ಜೆಎಲ್​ 4, ಜೆಎಲ್​ 5 ಹಂತದಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. ಈ ಶ್ರೇಣಿಗಳಲ್ಲಿ ಒಟ್ಟು 86,558 ಉದ್ಯೋಗಿಗಳಿದ್ದು, ಅಸೋಸಿಯೇಟ್ ಮತ್ತು ಮಧ್ಯಮ ಶ್ರೇಣಿಯಲ್ಲಿ ಒಟ್ಟು 1.1 ಲಕ್ಷ ಉದ್ಯೋಗಿಗಳಿದ್ದಾರೆ. ಇವರಲ್ಲಿ ಸುಮಾರು 4ರಿಂದ 10 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ಹಿರಿಯ ಉದ್ಯೋಗಿಗಳ ಶ್ರೇಣಿಯಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕಡಿತ ಮಾಡಲಿದ್ದು, ಸೀನಿಯರ್ ಎಕ್ಸಿಕ್ಯೂಟಿವ್ಸ್, ಸಹಾಯಕ ಉಪಾಧ್ಯಕ್ಷ, ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ, ಕಾರ್ಯಕಾರಿ ಉಪಾಧ್ಯಕ್ಷ ಸೇರಿದಂತೆ ಹೀಗೆ 50 ಮಂದಿ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.

ಇದನ್ನು ಓದಿ: 7 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾದ ಕಾಗ್ನಿಜೆಂಟ್​​; ಐಟಿ ಉದ್ಯೋಗಿಗಳಲ್ಲಿ ತಳಮಳ

ವಾರದ ಹಿಂದೆಯಷ್ಟೇ ಭಾರತದ ದೊಡ್ಡ ಐಟಿ ಹಬ್​ ಆಗಿರುವ ಅಮೆರಿಕ ಮೂಲದ ಕಾಗ್ನಿಜೆಂಟ್​ ಕಂಪನಿ ಕೂಡ 7 ಸಾವಿರ ಉದ್ಯೋಗಿಗಳು ಕೆಲಸದಿಂದ ವಜಾ ಮಾಡುವ ತೀರ್ಮಾನ ಪ್ರಕಟಿಸಿತ್ತು.

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ