Infosys ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ತೆರಿಗೆ ವಿವಾದ; ಅಮೆಜಾನ್​ಗೆ 55 ಕೋಟಿ ರೂ. ಟ್ಯಾಕ್ಸ್ ಬಾಕಿ !

Infosys ​ ನಾರಾಯಣ ಮೂರ್ತಿ ಅವರ ಅಳಿಯ, ಇಂಗ್ಲೆಂಡ್​​ನ ಚಾನ್ಸೆಲರ್​ ರಿಷಿ ಸುನಕ್​ ಈ ಸೇವಾ ತೆರಿಗೆ ವಿವಾದದಲ್ಲಿ ಸಿಲುಕಿದ್ದಾರೆ.

ಇನ್ಪೋಸಿಸ್ ನಾರಾಯಣ ಮೂರ್ತಿ

ಇನ್ಪೋಸಿಸ್ ನಾರಾಯಣ ಮೂರ್ತಿ

 • Share this:
  ಇನ್ಪೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ(Infosys Co-Founder Narayana Murthy) ಅವರ ಕ್ಯಾಟಮರನ್ ವೆಂಚರ್ಸ್​ ಹಾಗೂ ಅಮೆಜಾನ್​ ನಡುವೆ ಸೃಷ್ಟಿಯಾದ ಕ್ಲೌಡ್​ಟೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ ಎಂಬ ಆನ್​ಲೈನ್​ ರಿಟೇಲಿಂಗ್​​ ಜಂಟಿ ಉದ್ಯಮಕ್ಕೆ ಭಾರತದ ತೆರಿಗೆ ಅಧಿಕಾರಿಗಳು ದಂಡ ಹಾಗೂ ಬಡ್ಡಿ ಸೇರಿ ಒಟ್ಟು 55 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಸೂಚನೆ ನೀಡಿದ್ದಾರೆ ಎಂದು ದಿ ಗಾರ್ಡಿಯನ್​​ ವರದಿ ಮಾಡಿದೆ.

  ಇನ್ಫೋಸಿಸ್​ ನಾರಾಯಣ ಮೂರ್ತಿ ಅವರ ಅಳಿಯ, ಇಂಗ್ಲೆಂಡ್​​ನ ಚಾನ್ಸೆಲರ್​ ರಿಷಿ ಸುನಕ್​ ಈ ಸೇವಾ ತೆರಿಗೆ ವಿವಾದದಲ್ಲಿ ಸಿಲುಕಿದ್ದಾರೆ. ಜಗತ್ತಿನ ಅತೀ ದೊಡ್ಡ ಆರ್ಥಿಕತೆಗಳ ಜಿ 7 ರಾಷ್ಟ್ರಗಳ ಹಣಕಾಸು ಸಚಿವರ ಸಭೆಯಲ್ಲಿ, ಕಂಪನಿಗಳು ತಾವು ವ್ಯವಹಾರ ನಡೆಸಿದ ದೇಶದಲ್ಲಿ ತೆರಿಗೆ ಪಾವತಿಸಬೇಕು ಎಂದು ನಡೆಸಿದ ತೆರಿಗೆ ಒಪ್ಪಂದವನ್ನು ಸುನಕ್ ಸ್ವಾಗತಿಸಿದ್ದರು. ಅದರ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.

  ಅಮೆಜಾನ್​​ನಲ್ಲಿ ನಾರಾಯಣಮೂರ್ತಿ ಅವರ ಕ್ಲೌಡ್​​ಲೈಟ್​​ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಸೃಷ್ಟಿಯಾಗಿದೆ. ಡಿಜಿಟಲ್​ ವ್ಯವಹಾರಕ್ಕೆ ತೆರಿಗೆ ಪಾವತಿಸಬೇಕಾದ ವಿಚಾರ ಕುರಿತು ಸುನಕ್​ ಅವರ ಕಚೇರಿ ವಿವರಣೆ ನೀಡಿದೆ. ಕ್ಲೌಡ್​ಲೈಟ್​ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಮೆಜಾನ್​ನಲ್ಲಿನ ಅತಿ ದೊಡ್ಡ ಮಾರಾಟಗಾರರಲ್ಲಿ ಒಂದಾಗಿದೆ. 2020ರ ಹಣಕಾಸು ವರ್ಷದಲ್ಲಿ ಕ್ಲೌಡ್​ಲೈಟ್ 11,412 ಕೋಟಿ ರೂ.ಆದಾಯ ಗಳಿಸಿತ್ತು.

  ಇದನ್ನೂ ಓದಿ:KCET Exam 2021 Registration: ಇಂದಿನಿಂದ ಸಿಇಟಿ​ ಪರೀಕ್ಷೆಗೆ ನೊಂದಣಿ ಪ್ರಾರಂಭ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಅಮೆಜಾನ್​ ಜೊತೆಗೂಡಿ ಕ್ಲೌಡ್​ಲೈಟ್​ ಎಂಬ ಉದ್ಯಮ ಆರಂಭಿಸಿದ್ದರು. ಇದರಲ್ಲಿ ಮೂರ್ತಿ ಅವರ ಕ್ಯಾಟರಮನ್​ ವೆಂಚರ್ಸ್​ ಶೇ.76ರಷ್ಟು ಪಾಲನ್ನು ಹೊಂದಿದೆ.

  2018ರ ಡಿಸೆಂಬರ್ 27ರಂದು 54.5 ಕೋಟಿ ರೂಪಾಯಿ ಮೊತ್ತಕ್ಕೆ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಶೋಕಾಸ್ ನೋಟಿಸ್ ಕಳುಹಿಸಿತ್ತು ಎಂದು ಕ್ಲೌಡ್‌ಟೈಲ್ ತಿಳಿಸಿದೆ. ಇದನ್ನು 2020ರ ಮಾರ್ಚ್ 31ರಂದು ಸಂಭಾವ್ಯ ನಷ್ಟವೆಂದು ಪರಿಗಣಿಸಲಾಗಿತ್ತು.

  ಇದನ್ನೂ ಓದಿ:Bellary: ಮನೆಯವರು ಬೇಗ ಮದುವೆ ಮಾಡದಿದ್ದಕ್ಕೆ ಟವರ್​ ಏರಿ ಕುಳಿತ ಭೂಪ...!

  'ಎಲ್ಲಿ ತೆರಿಗೆಯನ್ನು ಪಾವತಿಸಲಾಗುತ್ತಿದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ ಮತ್ತು ಯಾವುದೇ ಒಪ್ಪಂದಗಳು ಬ್ರಿಟನ್‌ನಲ್ಲಿ ಡಿಜಿಟಲ್ ವ್ಯವಹಾರ ತೆರಿಗೆ ಪಾವತಿಗಳು ಆರ್ಥಿಕ ಚಟುವಟಿಕೆಗಳನ್ನು ಪ್ರತಿಫಲಿಸುವಂತೆ ಇರಬೇಕು. ನಮ್ಮ ತೆರಿಗೆ ಪಾವತಿದಾರರು ನಿರೀಕ್ಷಿಸುವುದು ಇದನ್ನೇ ಹಾಗೂ ಇದೇ ಸರಿಯಾದ ಮಾರ್ಗವಾಗಿದೆ ಎನ್ನುವುದು ಚಾನ್ಸೆಲರ್ ಅವರ ನಿಲುವಾಗಿದೆ' ಎಂದು ಬ್ರಿಟನ್‌ನ ಖಜಾನೆ ಕಚೇರಿ ವಕ್ತಾರರು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: