I&B Ministry Twitter: ಕೇಂದ್ರ ಸರ್ಕಾರದ ಟ್ವಿಟರ್​ ಖಾತೆ ಹ್ಯಾಕ್​; ಮಾಡಿದ್ದು ಯಾರು ಗೊತ್ತಾ?

ಕಳೆದ ತಿಂಗಳ ಪ್ರಧಾನಿ ನರೇಂದ್ರ ಮೋದಿಯವರ ಖಾತೆಯನ್ನು ಕೂಡ ಕೆಲವು ಸಮಯ ಹ್ಯಾಕ್ ಮಾಡಲಾಗಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಜ. 12): ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (Information and Broadcasting Ministry) ಟ್ವಿಟರ್ ಖಾತೆಯನ್ನೇ ಇಂದು ಹ್ಯಾಕ್ (Twitter Account Hack)​ ಮಾಡಲಾಗಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಪ್ರವೃತ್ತವಾದ ಐಟಿ ಟೀಂ ಖಾತೆ ಹ್ಯಾಕ್​ ಅದ ಕೆಲವು ಕ್ಷಣಗಳ ಬಳಿಕ ಅದು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಖಾತೆ ಹ್ಯಾಕ್​ ಆದ ಸಂದರ್ಭದಲ್ಲಿ ನಡೆ ಅಚ್ಚರಿ ಎಂದರೆ ಈ ಸಚಿವಾಲಯದ ಅಧಿಕೃತ ಹ್ಯಾಂಡಲ್ ಅನ್ನು 'ಎಲಾನ್ ಮಸ್ಕ್' ಎಂದು ಮರುನಾಮಕರಣ ಮಾಡಲಾಯಿತು. ಅಲ್ಲದೇ ಅನೇಕ ಟ್ವೀಟ್​ ಮಾಡಿದ್ದು, ಇದು ಸ್ವಲ್ಪ ಸಮಯದವರೆಗೆ ಉತ್ತಮ ಕೆಲಸ ಎಂದು ಪೋಸ್ಟ್ ಮಾಡಲಾಗಿತ್ತು.

    ಖಾತೆ ಹ್ಯಾಕ್​ ಆಗುತ್ತಿದ್ದಂತೆ CERT-IN, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeIT) ಐಟಿ ಭದ್ರತಾ ಗುಂಪು ಈ ಕುರಿತು ತನಿಖೆಗೆ ಮುಂದಾದವು. ಈ ಸಂಬಂಧ ಮಾಹಿತಿ ನೀಡಿದ ಅವು ತಕ್ಷಣಕ್ಕೆ ಖಾತೆಯನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾಗಿವೆ. ಖಾತೆಯನ್ನು ತನ್ನ ನಿಯಂತ್ರಣಕ್ಕೆ ಪಡೆದ ಬಳಿ ಪ್ರೊಫೈಲ್ ಚಿತ್ರವನ್ನು ಮರುಸ್ಥಾಪಿಸಿ, ಹ್ಯಾಕರ್‌ಗಳು  ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ಅಳಿಸಲಾಗಿದೆ.

    ಪ್ರಧಾನಿ ಮೋದಿ ಖಾತೆ ಕೂಡ ಹ್ಯಾಕ್​

    ಕಳೆದ ತಿಂಗಳ ಕೂಡ, ಪ್ರಧಾನಿ ನರೇಂದ್ರ ಮೋದಿಯವರ ಖಾತೆಯನ್ನು ಕೂಡ ಕೆಲವು ಸಮಯ ಹ್ಯಾಕ್ ಮಾಡಲಾಗಿತು. ಅಲ್ಲದೇ ಪ್ರಧಾನಿ ಅವರ ಹ್ಯಾಕ್​ ಆದ ಖಾತೆ ಮೂಲಕ ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಆಗಿ ಅಳವಡಿಸಿಕೊಂಡಿದೆ ಎಂದು ಹೇಳಿಕೊಳ್ಳುವ ಟ್ವೀಟ್ ಮಾಡಲಾಗಿತ್ತು. ಈ ಮೂಲಕ ಅನೇಕ ಗೊಂದಲ ಸೃಷ್ಟಿಸಲಾಗಿತ್ತು.

    ಇದನ್ನು ಓದಿ: ಪ್ರಿಯಾಂಕಾ ವಾದ್ರಾ ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಿರೋಕೆ ಸಾಧ್ಯ ಇಲ್ಲ

    ಬಿಟ್​ ಕಾಯಿನ್​ ಬಗ್ಗೆ ಸಂಚಲನ

    ಭಾರತ ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನು ಟೆಂಡರ್ ಆಗಿ ಅಳವಡಿಸಿಕೊಂಡಿದೆ. ಸರ್ಕಾರವು ಅಧಿಕೃತವಾಗಿ 500 BTC ಖರೀದಿಸಿದೆ. ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ. ಎಂದು ಪ್ರಧಾನಿ ಮೋದಿ ಅವರ ಟ್ವಿಟರ್ ಟೈಮ್‌ಲೈನ್‌ನಲ್ಲಿ ಟ್ವೀಟ್ ಅನ್ನು ಡಿಸೆಂಬರ್ 12 ರಂದು ಹಂಚಿಕೊಳ್ಳಲಾಗಿದೆ. ಆದರೆ, ವಿಷಯ ಸಾಕಷ್ಟು ಚರ್ಚೆಗೆ ಗುರಿಯಾಗುತ್ತಿದ್ದಂತೆ ಇದು ಹ್ಯಾಕ್ ನಿಂದ ಆದ ಪ್ರಮಾದ ಎಂದು ಅರಿತು ಪ್ರಧಾನಿ ಅವರ ಟ್ವಿಟರ್‌ ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಿ, ಪುನಃ ಸ್ಥಾಪಿಸಲಾಯತು.

    ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(IMA) ಮತ್ತು ಮನ್ ದೇಶಿ ಮಹಿಳಾ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತು. ಇದನ್ನು ಕೂಡ 'ಎಲೋನ್ ಮಸ್ಕ್' ಎಂದು ಮರುನಾಮಕರಣ ಮಾಡಲಾಗಿದೆ.

    ಇದನ್ನು ಓದಿ:  ದೆಹಲಿಯಲ್ಲಿ ಖಾಕಿ ಬೆನ್ನತ್ತಿದ ಕೋವಿಡ್ -1700 ಪೊಲೀಸರಿಗೆ ಪಾಸಿಟಿವ್

    ಪದೇ ಪದೇ ಎಲಾನ್​ ಮಸ್ಕ್​ ಹೆಸರಲ್ಲಿ ಖಾತೆ ಹ್ಯಾಕ್
    ಎಲಾನ್ ರೀವ್ ಮಸ್ಕ್ (Elon Musk) ಒಬ್ಬ ಖ್ಯಾತ ಇಂಜಿನಿಯರ್, ಕೈಗಾರಿಕಾ ತಜ್ಞ ಹಾಗು ಉದ್ದಿಮೆದಾರ. ಖಾಸಗಿ ಬಾಹ್ಯಾಕಾಶ ನೌಕೆ 'ಸ್ಪೇಸ್-ಎಕ್ಸ್'ನ   ಸಂಸ್ಥಾಪಕ. ಟೆಸ್ಲಾಂ ಕಂಪನಿ ಸಿಇಒ ಆಗಿರುವ ಅವರು, ಬಿಟ್‌ಕಾಯಿನ್‌, ಡಾಗಿಕಾಯಿನ್ ಮತ್ತು ಇಥೆರಿಯಂ ಡಿಜಿಟಲ್‌ ಕರೆನ್ಸಿ ಗಳನ್ನು ತಮ್ಮ ಸ್ವಾಧೀನ ಪಡಿಸಿಕೊಂಡಿದ್ದಾರೆ. ಅವರು ಮಾಡುವ ಪ್ರತಿ ಟ್ವೀಟ್​ಗಳು ಹಲವು ಅರ್ಥಗಳನ್ನು ಒಳಗೊಂಡಿದ್ದು, ಕೆಲವೊಮ್ಮೆ ಅಸಂಬದ್ದವಾಗಿರುತ್ತವೆ. ಇವರ ಟ್ವೀಟ್​ಗಳು ಬಿಟ್​ ಕಾಯಿನ್​, ಕ್ರಿಪ್ಟೋ ಕರೆನ್ಸಿ ವಹಿವಾಟಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ.
    Published by:Seema R
    First published: