ಜಗತ್ತಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ ಅನಿಸುತ್ತಿದೆ. ಕೊರೋನಾ ಎಲ್ಲಾ ಮುಗಿಯಿತು ಇನ್ನೇನು ಎಲ್ಲ ಸರಿಯಾಯಿತು ಅಂದುಕೊಂಡಿದ್ದ ಜನರಿಗೆ ಶಾಕ್ ಆಗಿದೆ. ಆ ಶಾಕ್ ಕೊಟ್ಟಿರೋದು ಬಿಎಫ್ 7 ಒಮಿಕ್ರಾನ್ ರೂಪಾಂತರಿ ತಳಿ. ಚೀನಾದಲ್ಲಿ (China) ಈಗಾಗಲೇ ಭುಗಿಲೆದ್ದಿರುವ ಈ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನ ಭಯದ (Fear) ಕೂಪಕ್ಕೆ ದೂಡಿದೆ. ಏಕೆಂದರೆ ಈ ಇದು ಈವರೆಗಿನ ಎಲ್ಲ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. 2020 ರಲ್ಲಿ ಕರೋನ ವೈರಸ್ ಹರಡಲು ಆರಂಭವಾದಾಗಿನಿಂದ ಹಲವಾರು ರೂಪಾಂತರಗಳನ್ನು ಕಂಡಿದೆ. ಕಳೆದ ವರ್ಷದ ಕೊನೆಯಲ್ಲಿ (Year End) ಹೊರಹೊಮ್ಮಿದ ಒಮಿಕ್ರಾನ್ (Omicron) ಸೋಂಕು ತೀವ್ರವಾಗಿ ಕಂಗೆಡುವಂತೆ ಮಾಡಿತ್ತು.
ಅದರದ್ದೇ ರೂಪಾಂತರ BF.7, ಇದೀಗ ಜಗತ್ತಿನ್ನೆಲ್ಲೆಡೆ ಹರಡಲು ಆರಂಭವಾಗಿದೆ. ಈಗಾಗಲೇ ಭಾರತ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಡೆನ್ಮಾರ್ಕ್ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಇದು ಚೀನಾದಲ್ಲಿ ಹರಡುತ್ತಿರುವ ಪ್ರಮುಖ ರೂಪಾಂತರವಾಗಿದೆ. ಅಲ್ಲಿ ಕೋವಿಡ್ ನಿರ್ಬಂಧಗಳ ಸಡಿಲಗೊಳಿಸಿರುವುದು ಹಾಗೂ ಕೆಲವೊಂದು ಸಂದರ್ಭದಲ್ಲಿ ಸಂಪೂರ್ಣವಾಗಿ ತೆಗೆದುಹಾಕಿರುವುದು ಈ ರೂಪಾಂತರ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಹೀಗಾಗಿ ಪ್ರಪಂಚದಾದ್ಯಂತದ ಮಾರಣಾಂತಿಕ ವೈರಸ್ನ ನವೀಕರಿಸಿದ ರೂಪಾಂತರ ಜಾಗತಿಕವಾಗಿ ಭಾರೀ ಉಲ್ಬಣಕ್ಕೆ ಕಾರಣವಾಗಿದೆ.
ಓಮಿಕ್ರಾನ್ ನ ಉಪ-ವೇರಿಯಂಟ್ BF.7 ಕುರಿತು ಇಲ್ಲಿದೆ ಮಾಹಿತಿ:
BF.7 ಅನ್ನೋ ರೂಪಾಂತರವು BA.5 ನ ಒಂದು ಭಾಗವೇ ಆಗಿದೆ. ಆದ್ರೆ ಈ BA.5 Omicron ರೂಪಾಂತರದ ಉಪ-ವಂಶಾವಳಿಯು ಇದುವರೆಗೆ ತಿಳಿದಿರುವ ಬೇರೆ ರೂಪಾಂತರಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ.
ಇದು ವೇಗವಾಗಿ ಹರಡುತ್ತದೆ ಎಂದು ನಂಬಲಾಗಿದೆ ಮತ್ತು ಲಸಿಕೆ ಹಾಕಿದವರಿಗೂ ಸಹ ಸೋಂಕು ತರಬಹುದು.
ಇದನ್ನೂ ಓದಿ: Eye Care: ಮಧುಮೇಹಿಗಳು ಕಣ್ಣಿನ ಆರೈಕೆಯನ್ನು ಈ ರೀತಿ ಮಾಡಬೇಕಂತೆ
ಇದು 10 ರಿಂದ 18.6 ರ ಸಂತಾನೋತ್ಪತ್ತಿ ಸಂಖ್ಯೆ ಹೊಂದಿದೆ. ಅಂದರೆ BF.7 ಸೋಂಕಿತ ವ್ಯಕ್ತಿಯು 10 ರಿಂದ 18 ಜನರಿಗೆ ವೈರಸ್ ಅನ್ನು ಹರಡುವ ಸಾಧ್ಯತೆಯಿದೆ.
- BF.7 ನಿಂದಾಗಿ ಚೀನಾ ತಮ್ಮ ದೈನಂದಿನ ಪ್ರಕರಣಗಳಲ್ಲಿ ಭಾರಿ ಏರಿಕೆಯನ್ನು ಕಾಣುತ್ತಿದೆ. ಚೀನಾದಲ್ಲಿ ಪ್ರತಿದಿನ 3,049ಕ್ಕೂ ಹೆಚ್ಚು ಹೊಸ ಸ್ಥಳೀಯ ಪ್ರಕರಣಗಳು ವರದಿಯಾಗುತ್ತಿವೆ.
ಬಿಎಫ್ 7 ನ ರೋಗ ಲಕ್ಷಣಗಳು
ಅನಾರೋಗ್ಯ ಸಮಸ್ಯೆ
ಇನ್ನು ICMR ನ ಗೌರವಾನ್ವಿತ ವಿಶ್ರಾಂತ ವಿಜ್ಞಾನಿ ಡಾ N K ಮೆಹ್ರಾ ಪ್ರಕಾರ, BF.7 ಒಮಿಕ್ರಾನ್ನ BA.5 ಸ್ಟ್ರೈನ್ನ ಉಪ-ರೂಪವಾಗಿದೆ. "ಇದು 10 ಕ್ಕಿಂತ ಹೆಚ್ಚು ಸಂತಾನೋತ್ಪತ್ತಿ ಮೌಲ್ಯವನ್ನು ಹೊಂದಿದೆ. ಆದರೆ ಗಂಭೀರವಾದ ಅನಾರೋಗ್ಯವನ್ನು ಉಂಟುಮಾಡುವ ಹೊಸ ರೂಪಾಂತರದ ಸಾಮರ್ಥ್ಯದ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿ ವ್ಯಾಪಕವಾಗುತ್ತಿದೆ ಸೋಂಕು
ಅಲ್ಲದೇ "ಭಾರತದಲ್ಲಿ, ವ್ಯಾಪಕವಾದ ಸೋಂಕು ಮತ್ತು ವ್ಯಾಕ್ಸಿನೇಷನ್ ಕಾರಣದಿಂದಾಗಿ ಹೆಚ್ಚಿನ ಜನರು ಹೈಬ್ರಿಡ್ ಪ್ರತಿರಕ್ಷೆಯನ್ನು ಹೊಂದಿದ್ದಾರೆ. ಆದಾಗ್ಯೂ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಚ್ಚರಿಕೆಯು ಮುಖ್ಯವಾಗಿದೆ" ಎಂದು ಅವರು ಹೇಳಿದ್ದಾರೆ. ಇನ್ನು ಈ ಸೋಂಕನ್ನು ತಡೆಗಟ್ಟಲು ನಾವು ಶುಚಿತ್ವವನ್ನು ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಪದೇ ಪದೇ ಕೈತೊಳೆಯುತ್ತಿರುವುದು ಮುಖ್ಯ ಎನ್ನುವ ತಜ್ಞರು, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ