2021ರ ಹಜ್ ಯಾತ್ರೆ: ಯಾತ್ರೆಯ ದಿನಾಂಕ, ಇತಿಹಾಸ, ಮಹತ್ವ ಇಲ್ಲಿದೆ ಮಾಹಿತಿ

ಹಜ್ 8 ನೇ ದಿನದಿಂದ ಪ್ರಾರಂಭವಾಗುತ್ತದೆ ಮತ್ತು ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಧು ಅಲ್-ಹಿಜ್ಜಾದ 12 ನೇ ದಿನದಂದು ಕೊನೆಗೊಳ್ಳುತ್ತದೆ. ಈ ವರ್ಷ, ಹಜ್ ಜುಲೈ 17 ರ ಸಂಜೆ ಪ್ರಾರಂಭವಾಯಿತು ಮತ್ತು ಜುಲೈ 22 ರ ಸಂಜೆ ಕೊನೆಗೊಳ್ಳುತ್ತದೆ.

ಪವಿತ್ರ ಕಾಬಾ

ಪವಿತ್ರ ಕಾಬಾ

 • Share this:

  ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮದಿಂದ ಎರಡನೇ ಬಾರಿಗೆ, ಸೌದಿ ಅರೇಬಿಯಾದ ಮೆಕ್ಕಾಗೆ 6 ದಿನಗಳ ಹಜ್ ಅಥವಾ ಮುಸ್ಲಿಂ ತೀರ್ಥಯಾತ್ರೆಯ ಪ್ರಯಾಣವನ್ನು ಹಾಗೂ ಭೇಟಿಯನ್ನು ಕೆಲವು ನಿರ್ಬಂಧದೊಂದಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.


  ಈದ್-ಉಲ್-ಅಧಾ ಅಥವಾ ಬಕ್ರಾ ಈದ್ ಇಸ್ಲಾಮಿಯರು ಆಚರಿಸುವ ಅತಿ ದೊಡ್ಡ ಎರಡನೆಯ ಹಬ್ಬವಾಗಿದೆ. ಜುಲ್ ಹಿಜ್ಜಾದ ಹತ್ತನೇ ದಿನ ಇದನ್ನು ಆಚರಿಸುತ್ತಾರೆ, ಅರಾಫಾ ದಿನ ಅಂದರೆ ಧು ಅಲ್-ಹಿಜ್ಜಾದ ಒಂಬತ್ತನೇ ದಿನವನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುವ ಹಬ್ಬ ಇದು ಪಶ್ಚಾತ್ತಾಪದ ದಿನವಾದ್ದರಿಂದ ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ.


  ಅರಾಫಾ ದಿನವು ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಪವಿತ್ರ ದಿನವೆಂದು ಹಾಗೂ ರಜಾ ದಿನವೆಂದು ಗುರುತಿಸಲಾಗುವುದು ಮತ್ತು ಇದನ್ನು ಹಜ್ ತೀರ್ಥಯಾತ್ರೆಯ ಎರಡನೇ ದಿನದಂದು ಆಚರಿಸಲಾಗುತ್ತದೆ. ಇಸ್ಲಾಂ ಧರ್ಮದಲ್ಲಿ ಐದು ಪವಿತ್ರ ಸ್ಥಳಗಳಿವೆ. ಹಜ್ ಟು ಮೆಕ್ಕಾ ಕೂಡ ಆರೋಗ್ಯವಂತರಿಗೆ ಮಾತ್ರ ಎಂಬುದು ಪ್ರತೀತಿ. ಆರ್ಥಿಕವಾಗಿ ಮತ್ತು ದೈಹಿಕವಾಗಿ ಫಿಟ್​ ಆಗಿರುವವರು ಕೂಡ ಮೆಕ್ಕಾಗೆ ಹೋಗಬಹುದು.ಇಸ್ಲಾಂ ಧರ್ಮದ ಐದನೇ ಮತ್ತು ಅಂತಿಮ ಪವಿತ್ರ ಸ್ಥಳವನ್ನು ಮುಸ್ಲಿಮರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು, ಸರಳ ಬಿಳಿ ಬಟ್ಟೆಗಳನ್ನು ಧರಿಸಿ ಆಚರಣೆಗಳನ್ನು ಮಾಡಬೇಕು ಎಂಬುದು ನಂಬಿಕೆ.


  ಹಜ್ 8 ನೇ ದಿನದಿಂದ ಪ್ರಾರಂಭವಾಗುತ್ತದೆ ಮತ್ತು ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಧು ಅಲ್-ಹಿಜ್ಜಾದ 12 ನೇ ದಿನದಂದು ಕೊನೆಗೊಳ್ಳುತ್ತದೆ. ಈ ವರ್ಷ, ಹಜ್ ಜುಲೈ 17 ರ ಸಂಜೆ ಪ್ರಾರಂಭವಾಯಿತು ಮತ್ತು ಜುಲೈ 22 ರ ಸಂಜೆ ಕೊನೆಗೊಳ್ಳುತ್ತದೆ.


  ಇತಿಹಾಸ:ಮಕ್ಕಾದ ಕಾಬಾ ದೇಗುಲಕ್ಕೆ ಭೇಟಿ ನೀಡುವುದಕ್ಕೆ ಒಂದು ಕಾರಣವೆಂದರೆ ಅಸಾಧಾರಣ ಇತಿಹಾಸವನ್ನು ಆ ದೇಗಲವು ಹೊಂದಿದೆ. ದೇವರ ಆತ್ಮೀಯ ಸ್ನೇಹಿತ ಮತ್ತು ಪ್ರವಾದಿಯ ತಂದೆ ಪ್ರವಾದಿ ಇಬ್ರಾಹಿಂ ಅಥವಾ ಅಬ್ರಹಾಂ ಅವರ ಪತ್ನಿ ಹಜ್ರಾ ಮತ್ತು ಮಗ ಇಸ್ಮಾಯಿಲ್ ಅವರನ್ನು ದೇವರು ಜನರ ಯೋಗಕ್ಷೇಮವನ್ನು ನೋಡೊಕೊಳ್ಳಲ್ಲು ಮಕ್ಕಾ ಮರುಭೂಮಿಯಲ್ಲಿ ಅವರನ್ನು ಬೀಡುಬಿಟ್ಟಿದ್ದಾನೆ ಹಾಗೂ ನಮ್ಮ ಒಳಿತಿಗೆ ಸೂಚನೆ ನೀಡಿದ್ದಾನೆ ಎಂದು ಜನರು ನಂಬುತ್ತಾರೆ.ಇಬ್ರಾಹಿಂ ಅಭಿವೃದ್ಧಿ ಹೊಂದುತ್ತಿರುವ ಕುಟುಂಬವನ್ನು ತೊರೆದರು, ಆದರೆ ಕಾಲಾನಂತರದಲ್ಲಿ, ಅ ಅಭಿವೃದ್ಧಿಯು ನಾಶವಾಯಿತು. ಅವರ ಪತ್ನಿ ಹಜಾರಾ ಮತ್ತು ಮಗ ಇಸ್ಮಾಯಿಲ್ ಅವರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಆ ಸಮಯದಲ್ಲಿ, ಹಜಾರಾ ಸಫಾ ಮತ್ತು ಮಾರ್ವಾ ಪರ್ವತಗಳ ನಡುವೆ ಏಳು ಬಾರಿ ಪ್ರಯಾಣಿಸಿದರೂ ಯಾವುದೇ ನೀರಿನ ಮೂಲವನ್ನು ಕಂಡುಹಿಡಿಯಲಾಗಲಿಲ್ಲ ಅವರ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲ್ಲಿಲ್ಲ.ನಂತರ,ಅವಳ ಪುಟ್ಟ ಮಗ ಇಸ್ಮಾಯಿಲ್ ತನ್ನ ಪಾದದಿಂದ ನೆಲವನ್ನು ಉಜ್ಜಿದಾಗ, ಆ ಸ್ಥಳದಲ್ಲಿ ನೀರಿನ ಕಾರಂಜಿ ಚಿಮ್ಮಿತು. ಈ ಸ್ಥಳವನ್ನು ನಂತರ ಪವಿತ್ರವೆಂದು ಗುರುತಿಸಲಾಯಿತು ಮತ್ತು ದೇವರು ಇಬ್ರಾಹಿಂಗೆ ಆ ಸ್ಥಳದಲ್ಲಿ ಕಾಬಾವನ್ನು ನಿರ್ಮಿಸಲು ಮತ್ತು ಆ ಸ್ಥಳವನ್ನು ತೀರ್ಥಯಾತ್ರೆ ಮಾಡಬೇಕೆಂದು ಹೇಳಿದ್ದಾನೆ ಎಂದು ಇಬ್ರಾಹಿಂ ಜನರನ್ನು ಆಹ್ವಾನಿಸಿದನು.


  ಇಬ್ರಾಹಿಂ ಮತ್ತು ಇಸ್ಮಾಯಿಲ್ ಸೂಚಿಸಿದಂತೆ ಜನರು ಮಾಡಿದರು ಮತ್ತು ಗೇಬ್ರಿಯಲ್ ಎಂಬ ಪ್ರಧಾನ ದೇವದೂತನು ಕಾಬಾಗೆ ಜೋಡಿಸಲು ಸ್ವರ್ಗದಿಂದ ಕಪ್ಪು ಕಲ್ಲನ್ನು ಹೇಗೆ ತಂದನು ಎಂದು ಕುರಾನ್ ವಿವರಿಸುತ್ತದೆ.ನಂತರ ಇಸ್ಲಾಮಿಕ್ ಪೂರ್ವ ಅರೇಬಿಯಾದ “ಜಹಿಲಿಯಾಹ್” ಸಮಯದಲ್ಲಿ, ಕೆಲವು ಪೇಗನ್ ವಿಗ್ರಹಗಳನ್ನು ಕಾಬಾದ ಸುತ್ತಲೂ ಇರಿಸಲಾಗಿತ್ತು ಆದರೆ ಕ್ರಿ.ಶ 630 ರಲ್ಲಿ ಪ್ರವಾದಿ ಮುಹಮ್ಮದ್ ಮದೀನಾದಿಂದ ಮೆಕ್ಕಾಗೆ ತಮ್ಮ ಹಿಂಬಾಲಕರ ಜೊತೆ ಯಾತ್ರೆ ಹೊರಟರು ಮತ್ತು ಎಲ್ಲಾ ಪೇಗನ್ ವಿಗ್ರಹಗಳನ್ನು ನಾಶಮಾಡುವ ಮೂಲಕ ಕಾಬಾವನ್ನು ಶುದ್ಧೀಕರಿಸಿದರು. ಇನ್ನೊಬ್ಬ ಮೆಸ್ಸೀಯ ಮತ್ತು ಇಸ್ಲಾಂ ಧರ್ಮದಲ್ಲಿ ಪರಿಗಣಿಸಲ್ಪಟ್ಟ ಕೊನೆಯ ಪ್ರವಾದಿ. ಕಾಬಾವನ್ನು ಶುದ್ಧೀಕರಿಸಿದ ನಂತರ, ಅವರು ಆ ಕಟ್ಟಡವನ್ನು ಅಲ್ಲಾಹನ ಸನ್ನಿಧಾನ ಎಂದು ಕರೆದರು ಮತ್ತು ಕ್ರಿ.ಶ 632 ರಲ್ಲಿ ತಮ್ಮ ಮೊದಲ ಮತ್ತು ಕೊನೆಯ ತೀರ್ಥಯಾತ್ರೆ ಮಾಡಿದರು. ಇದರ ನಂತರ ಪ್ರವಾದಿ ಮುಹಮ್ಮದ್ ಅವರ ಅನುಯಾಯಿಗಳಿಗೆ ಅದರ ಆಚರಣೆಗಳ ಕುರಿತು ಮಾಡಿದ ಧರ್ಮೋಪದೇಶ ಮತ್ತು ಹಜ್ ಇಸ್ಲಾಂ ಧರ್ಮದ ಐದು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.


  ಮಹತ್ವ:ಸಮಾನತೆಯೇ ಇದರ ಉಸಿರು, ಜಾತಿ, ಸಂಸ್ಕೃತಿ ಮತ್ತು ಬಣ್ಣವನ್ನು ಆಧರಿಸಿದ ಯಾವುದೇ ತಾರತಮ್ಯವಿಲ್ಲದೆ, ಪ್ರಪಂಚದಾದ್ಯಂತದ ಮುಸ್ಲಿಮರನ್ನು ಏಕತೆ ಮತ್ತು ಸಹೋದರತ್ವದ ಮನೋಭಾವದಲ್ಲಿ ಹಜ್ ಉತ್ತೇಜಿಸುತ್ತದೆ ಮತ್ತು ಒಲವು ತೋರುತ್ತದೆ. ಯಾರು ಹಜ್ ಆಚರಣೆಯನ್ನು ನಿಜವಾದ ಮತ್ತು ಶುದ್ಧವಾಗಿ ನಿರ್ವಹಿಸುತ್ತಾರೋ ಅವರು ಮನೆಗೆ ಹಿಂದಿರುಗಿದಾಗ ತಮ್ಮ ಜೀವನದ ಪಾಪಗಳನ್ನು ತೊಳೆದುಕೊಳ್ಳುತ್ತಾರೆ ಎಂದು ಜನರು ನಂಬುತ್ತಾರೆ.ವಾರ್ಷಿಕ ತೀರ್ಥಯಾತ್ರೆ ಸಮಾನತೆಯ ಕುರಿತು ಭೋದಿಸುತ್ತದೆ. ನ್ಯಾಯದಿಂದ ನಡೆದುಕೊಂಡೆ, ಯಾತ್ರಾರ್ಥಿಗಳು ಮರಣಾನಂತರ ಸ್ವರ್ಗಕ್ಕೆ ಹೋಗುತ್ತಾರೆ. ಇದು ದಯೆ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ ಮತ್ತು ಇದು ಗೌರವದ ಅತ್ಯುನ್ನತ ರೂಪವಾಗಿದೆ, ಏಕೆಂದರೆ ಇದು ಪ್ರವಾದಿ ಅಬ್ರಹಾಂ ಅವರು ಪ್ರವಾದಿ ಮುಹಮ್ಮದ್ ಅವರುಗಳು ಅನುಸರಿಸಿದ ಸರ್ವಶಕ್ತ ದೇವರ ತ್ಯಾಗ ಮತ್ತು ವಿಧೇಯತೆಯನ್ನು ಪ್ರತಿನಿಧಿಸುತ್ತದೆ.


  ಅರಾಫಾ ದಿನದ ಪ್ರಾಮುಖ್ಯತೆ:ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳು ಜುಲೈ 19 ರಂದು ಅರಾಫಾ ದಿನವೆಂದು ಆಚರಿಸುತ್ತಾರೆ, ಭಾರತದ ಮುಸ್ಲಿಮರು ಇದನ್ನು ಜುಲೈ 20 ರಂದು ಆಚರಿಸುತ್ತಾರೆ. ಅರಾಫಾ ದಿನವು ಧು ಅಲ್-ಹಿಜ್ಜಾದ ಒಂಬತ್ತನೇ ತಾರೀಖಿನಂದು ಬರುತ್ತದೆ.ಮುಸ್ಲಿಂ ಯಾತ್ರಿಕರು ಅರಾಫತ್ ಪರ್ವತದ ಮೇಲೆ ಜಮಾಯಿಸಿ ಕುರಾನ್ ಪಠಿಸಿದಾಗ ಅದು ತೀರ್ಥಯಾತ್ರೆಯ ಪರಮ ಪವಿತ್ರ ಕೆಲಸ. ಅರಾಫತ್ ಪರ್ವತವು ಮಕ್ಕಾದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವುದರಿಂದ, ಮುಸ್ಲಿಂ ಯಾತ್ರಿಕರು ಅಲ್ಲಿ ಒಂದು ದಿನ ಹೋಗಿ ಆಚರಣೆಗಳನ್ನು ಮಾಡುತ್ತಾರೆ ಆದರಿಂದ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಯಾತ್ರಿಕರು ಟೆಂಟ್​ಗಳಲ್ಲಿ ವಾಸಿಸುತ್ತಾರೆ.ಪ್ರವಾದಿ ಮುಹಮ್ಮದ್ ಅರಾಫತ್ ಪರ್ವತದ ಮೇಲೆ ತಮ್ಮ ಕೊನೆಯ ಇಸ್ಲಾಮಿಕ್ ಧರ್ಮೋಪದೇಶವನ್ನು ನೀಡಿದರು.ಆದ್ದರಿಂದ, ಯಾತ್ರಿಕರು ಇಲ್ಲಿಗೆ ಬಂದು ಗೌರವ ಸಲ್ಲಿಸುತ್ತಾರೆ, ಪ್ರಾರ್ಥನೆಯ ಮೂಲಕ ತಮ್ಮ ಪಾಪಗಳಿಗೆ ಕ್ಷಮೆ ಕೋರುತ್ತಾರೆ, ಮತ್ತು ಈ ಕ್ಷಣವನ್ನು "ದೇವರ ಮುಂದೆ ನಿಂತು ಕ್ಷಮೆ ಕೋರುವ ದಿನ" ಎಂದು ವಿವರಿಸಬಹುದು.


  ಯಾತ್ರಿಕರು ಅರಾಫತ್‌ನಲ್ಲಿ ಉಪವಾಸ ಮಾಡುವುದನ್ನು ನಿಷೇಧಿಸಿದ್ದರೂ, ಯಾತ್ರಿಕರಲ್ಲದವರು ಉಪವಾಸ ಮಾಡಬೇಕೆಂದು ಏಕೆಂದರೇ ಇದರಿಂದ ಸನ್ಮಂಗಳ ಉಂಟಾಗುತ್ತದೆ ಎಂದು ನಂಬಲಾಗಿದೆ. ಈ ರೀತಿ ಮಾಡುವುದರಿಂದ ಅಲ್ಲಾಹನು ಎರಡು ವರ್ಷಗಳ ಪಾಪವನ್ನು ಕ್ಷಮಿಸುತ್ತಾನೆ ಎಂದು ಕೆಲವು ಜನರು ನಂಬುತ್ತಾರೆ.


  ಇದನ್ನೂ ಓದಿ: ಮುಸ್ಲಿಂಮರು ಹೆಚ್ಚಿರುವ ಕಡೆ ಜನಸಂಖ್ಯೆ ನಿಯಂತ್ರಿಸಲಿದೆ ಅಸ್ಸಾಂ ರಾಜ್ಯದ ‘ಜನಸಂಖ್ಯಾ ಸೇನೆ’

  ಅರಾಫಾ ದಿನವನ್ನು ಮುಸ್ಲಿಮರು ಕೃತಜ್ಞತೆಯ ದಿನವಾಗಿ ನೋಡುವುದರಿಂದ, ಮರುದಿನವನ್ನು ಈದ್-ಉಲ್-ಅಧಾ ಎಂದು ಆಚರಿಸಲಾಗುತ್ತದೆ, ಇದು ಪ್ರವಾದಿ ಇಬ್ರಾಹಿಂ ಅವರ ಮತ್ತೊಂದು ತ್ಯಾಗವನ್ನು ಸೂಚಿಸುತ್ತದೆ. ಸಾಮಾನ್ಯ ದಿನಗಳಲ್ಲಿ ಸುಮಾರು 2 ಮಿಲಿಯನ್ ಮುಸ್ಲಿಂ ಯಾತ್ರಿಕರು ಅರಾಫತ್ ಪರ್ವತದ ಮೇಲೆ ಸೇರುತ್ತಾರೆ ಆದರೆ ಕರೋನ ವೈರಸ್ ಕಾರಣ, ಯಾತ್ರಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ಸಲುವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ, ಆದ್ದರಿಂದ ಈ ವರ್ಷ ಸೌದಿ ಅರೇಬಿಯಾ ಸರ್ಕಾರವು ಕೇವಲ 60,000 ಭಕ್ತರನ್ನು ಮಾತ್ರ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ ಎಂದು ವರದಿಗಳು ತಿಳಿಸಿವೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: