ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಉದ್ಯಮಿ ರತನ್​ ಟಾಟಾ- ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

news18
Updated:August 24, 2018, 4:18 PM IST
ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಉದ್ಯಮಿ ರತನ್​ ಟಾಟಾ- ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​
news18
Updated: August 24, 2018, 4:18 PM IST
ನ್ಯೂಸ್​18 ಕನ್ನಡ

ಮುಂಬೈ (ಆ. 24): ಮುಂಬೈನಲ್ಲಿ ನಾನಾ ಪಾಲ್ಕರ್​ ಸ್ಮೃತಿ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರ ಜೊತೆಗೆ ಖ್ಯಾತ ಉದ್ಯಮಿ ರತನ್​ ಟಾಟಾ ವೇದಿಕೆ ಹಂಚಿಕೊಂಡಿದ್ದಾರೆ. ಇದು ರಾಜಕೀಯವಾಗಿ ಮಹತ್ವ ಪಡೆಯುವ ಸಾಧ್ಯತೆ ಇದೆಯಾ? ಎಂಬ ಚರ್ಚೆಗಳು ಎದ್ದಿವೆ.

ಈ ಮೊದಲು ನಾಗ್ಪುರದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಕೂಡ ಮೋಹನ್​ ಭಾಗವತ್​ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. 2016ರ ಡಿಸೆಂಬರ್​ನಲ್ಲಿ ಅನಿರೀಕ್ಷಿತವಾಗಿ ಆರ್​ಎಸ್ಎಸ್​ ಕೇಂದ್ರ ಕಚೇರಿಗೆ ರತನ್ ಟಾಟಾ ಭೇಟಿ ನೀಡಿದ್ದರು. ತಮ್ಮ 79ನೇ ವರ್ಷದ ಹುಟ್ಟುಹಬ್ಬದ ದಿನವೇ ಇಲ್ಲಿಗೆ ಭೇಟಿ ನೀಡಿದ್ದರು.

ಬಿಜೆಪಿ ಪಕ್ಷದ ಬೆಂಬಲಿತವಾಗಿರುವ ಆರ್​ಎಸ್​ಎಸ್​ ಮುಖ್ಯಸ್ಥರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ರತನ್​ ಟಾಟಾ ಬಗ್ಗೆ ರಾಜಕೀಯ ವಲಯದಲ್ಲೂ ಕುತೂಹಲ ಉಂಟಾಗಿದೆ.

 

 
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ