Indore Sex Racket: 5 ವರ್ಷದಲ್ಲಿ 75 ಮದುವೆ, 200 ಯುವತಿಯರ ಸಾಗಾಟ: ದೇಶವನ್ನೇ ಬೆಚ್ಚಿ ಬೀಳಿಸಿದ ಕೇಸ್

ಆರೋಪಿ ಮುನೀರ್ ಕಳೆದ ಐದು ವರ್ಷಗಳಿಂದ ವೇಶ್ಯಾವಟಿಕೆ ದಂಧೆಯಲ್ಲಿದ್ದಾನೆ. ಬಡ ಮತ್ತು ನಿರಾಶ್ರಿತ ಕುಟುಂಬದ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಮುನೀರ್ ಐದು ವರ್ಷಗಳಲ್ಲಿ 75 ಮದುವೆ ಆಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಆರೋಪಿ ಮುನೀರ್

ಆರೋಪಿ ಮುನೀರ್

  • Share this:
    ಭೋಪಾಲ್: ಮಧ್ಯಪ್ರದೇಶದ ಇಂದೋರ್ ಪೊಲೀಸರು (Indore Police) ಬಯಲಿಗೆಳೆದಿರುವ ಸೆಕ್ಸ್ ರಾಕೆಟ್ ಪ್ರಕರಣ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಓರ್ವ ಸೆಕ್ಸ್ ರಾಕೆಟ್ ಸ್ಮಗ್ಲರ್ ನನ್ನು ಬಂಧಿಸುವ ಪೊಲೀಸರು ಆತನಿಂದ ಭಯಾನಕ ಮಾಹಿತಿಗಳನ್ನು ಕಕ್ಕಿಸಿದ್ದಾರೆ. ಬಂಧಿತ ಆರೋಪಿ ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಯುವತಿಯರನ್ನು ವೇಶ್ಯಾವಾಟಿಕೆಗೆ ತಂದಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಬಾಂಗ್ಲಾದೇಶದ ಯುವತಿ(Bangladeshi Girls)ಯರನ್ನು ದೇಶಕ್ಕೆ ಕರೆತಂದು ಸೆಕ್ಸ್ ದಂಧೆಗೆ ತಳ್ಳುತ್ತಿದ್ದನು. ಇಂದೋರ್ ಎಸ್‍ಐಟಿ (SIT-ವಿಶೇಷ ತನಿಖಾ ದಳ) ಆರೋಪಿ ಮುನೀರ್ ನನ್ನು ಸೂರತ್ ಬಳಿ ಬಂಧಿಸಿದ್ದಾರೆ.

    5 ವರ್ಷದಲ್ಲಿ 75 ಮದುವೆ

    ಆರೋಪಿ ಮುನೀರ್ ಕಳೆದ ಐದು ವರ್ಷಗಳಿಂದ ವೇಶ್ಯಾವಟಿಕೆ ದಂಧೆಯಲ್ಲಿದ್ದಾನೆ. ಬಡ ಮತ್ತು ನಿರಾಶ್ರಿತ ಕುಟುಂಬದ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಮುನೀರ್ ಐದು ವರ್ಷಗಳಲ್ಲಿ 75 ಮದುವೆ (Marriage) ಆಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪ್ರತಿ ತಿಂಗಳು ಬಾಂಗ್ಲಾದೇಶದಿಂದ 55 ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಕರೆದುಕೊಂಡು ಬರುತ್ತಿದ್ದನು. ಯುವತಿಯರನ್ನು ಭಾರತ ಮತ್ತು ಬಾಂಗ್ಲಾದೇಶದ (India-Bangladesh Border) ಗಡಿ ಗ್ರಾಮಗಳ ಅಡ್ಡ ರಸ್ತೆ ಮತ್ತು ಕಾಲುವೆಗಳ ಮೂಲಕ ಕರೆತರುತಿದ್ದನು. ನಂತರ ಮುರ್ಶಿದಾಬಾದ್ ಮತ್ತು ಸಮೀಪದ ಗ್ರಾಮಗಳಿಗೆ ಕರೆತಂದು ದೇಶದೊಳಗೆ (Human-Trafficking)ಪ್ರವೇಶಿಸುತ್ತಿದ್ದನು.

    ಸೆಕ್ಸ್ ಅಡ್ಡೆಗಳ ಮೇಲೆ ದಾಳಿ

    11 ತಿಂಗಳ ಹಿಂದೆ ಇಂದೋರ್ ಪೊಲೀಸರು ಲಸೂಡಿಯಾ ಮತ್ತು ವಿಜಯನಗರ ವ್ಯಾಪ್ತಿಯ ಸೆಕ್ಸ್ ಅಡ್ಡೆಗಳ ಮೇಲೆ ದಾಳಿ ನಡೆಸಿ 21 ಬಾಂಗ್ಲಾದೇಶ ಮೂಲದ ಯುವತಿಯರನ್ನು ರಕ್ಷಿಸಿದ್ದರು. ಇದರಲ್ಲಿ ಬಾಂಗ್ಲಾದೇಶದ ಜೊತೆಯಲ್ಲಿ ಬೇರೆ ರಾಜ್ಯದ ಯುವತಿಯರಿದ್ದರು. ದಂಧೆ ನಡೆಸುತ್ತಿದ್ದ ಸಾಗರ್ ಅಲಿಯಾಸ್ ಸೆಂಡೋ , ಆಫ್ರೀನ್, ಅಮರೀನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಆದ್ರೆ ಅಂದು ಮುನೀರ್ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದನು.

    ಮುನೀರ್ ಹಿಂದೆ ದೊಡ್ಡ ನೆಟ್‍ವರ್ಕ್

    ಇಂದೋರ್ ಪೊಲೀಸರು ಮುನೀರ್ ಕುರಿತು ಮಾಹಿತಿ ನೀಡಿದವರಿಗೆ 10 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಮುನೀರ್ ಬಾಂಗ್ಲಾದೇಶದ ಜಾಸೋರ್ ಮೂಲದವನು ಎಂದು ತಿಳಿದು ಬಂದಿದೆ. ಹೆಚ್ಚು ಯುವತಿಯರನ್ನು ಮದುವೆಯಾಗಿ ಭಾರತಕ್ಕೆ ಕರೆ ತರುತ್ತಿದ್ದನು. ಕೇವಲ ಮುನೀರ್ ಒಬ್ಬನಿಂದಲೇ ಇಷ್ಟು ದೊಡ್ಡಮಟ್ಟದಲ್ಲಿ ದಂಧೆ ನಡೆಸಲು ಸಾಧ್ಯವಿಲ್ಲ. ಆತನ ಹಿಂದೆ ದೊಡ್ಡ ನೆಟ್ ವರ್ಕ್ ಇರೋ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದಿಂದ ಕರೆತರಲಾಗುತ್ತಿದ್ದ ಯುವತಿಯರನ್ನು ಮೊದಲಿಗೆ ಮುಂಬೈ ಮತ್ತು ಕೋಲ್ಕತ್ತಾಕ್ಕೆ ಕಳುಹಿಸಿ ಟ್ರೈನಿಂಗ್ ಕೊಡಿಸುತ್ತಿದ್ದನು. ನಂತರ ಬೇಡಿಕೆಯನುಸಾರವಾಗಿ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸುತ್ತಿದ್ದನು.

    ಇದನ್ನೂ ಓದಿ: Man Assaults Girlfriend: ಸೋದರ-ಸ್ನೇಹಿತನ ಜೊತೆ ಮಲಗಲು ನಿರಾಕರಿಸಿದ ಯುವತಿಗೆ ನರಕ ತೋರಿಸಿದ ಬಾಯ್​​​ಫ್ರೆಂಡ್​​!

    ಮುಂಬೈ-ಕೋಲ್ಕತ್ತಾಗಳಲ್ಲಿ ಟ್ರೈನಿಂಗ್

    ಬಾಂಗ್ಲಾದೇಶದ ಬಡ ಕುಟುಂಬಕ್ಕೆ ಉದ್ಯೋಗ ಕೊಡಿಸೋದಾಗಿ ಹೇಳಿ ಕದ್ದುಮುಚ್ಚಿ ಯುವತಿಯರನ್ನು ಮೊದಲಿಗೆ ಕೋಲ್ಕತ್ತಾ(Kolkata)ಗೆ ಕರೆದುಕೊಂಡು ಬರಲಾಗುತ್ತಿತ್ತು. ಇಲ್ಲಿ ಯುವತಿಯರಿಗೆ ವೇಷಭೂಷಣ, ಫ್ಯಾಶನ್, ಬಾಡಿ ಲಾಂಗ್ವೇಜ್ ಮತ್ತು ಗ್ರಾಹಕರ ಜೊತೆ ಮಾತನಾಡುವ ಕಲೆಯನ್ನು ಹೇಳಿಕೊಡಲಾಗುತ್ತಿತ್ತು. ಇಲ್ಲಿ ತರಬೇತಿ ಪಡೆದ ನಂತರ ಮುಂಬೈಗೆ ಕಳುಹಿಸಲಾಗುತ್ತಿತ್ತು. ಕೋಲ್ಕತ್ತಾದಿಂದ ಮುಂಬೈ(Mumbai)ಗೆ ತೆರಳುವ ಮೊದಲೇ ಯುವತಿಯರ ಎಲ್ಲ ದಾಖಲೆ ಪತ್ರಗಳನ್ನು  ತಮ್ಮ ಬಳಿಯಲ್ಲಿರಿಸಿಕೊಳ್ಳುತ್ತಿದ್ದರು. ಮುಂಬೈನಲ್ಲಿ ಮತ್ತೆ ಟ್ರೈನಿಂಗ್ ನೀಡಲಾಗುತ್ತಿತ್ತು. ಇಲ್ಲಿಂದ ವಿವಿಧ ನಗರಗಳ ಸ್ವಾ ಸೆಂಟರ್ ಗಳಿಗೆ ಶಿಫ್ಟ್ ಮಾಡಲಾಗುತ್ತಿತ್ತು. ಚಿಕ್ಕ ವಯಸ್ಸಿನ ಯುವತಿತಯರನ್ನು ನೇರವಾಗಿಯೇ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು.

    ವರದಿ: ಮೊಹ್ಮದ್​ ರಫೀಕ್​ ಕೆ 
    Published by:Kavya V
    First published: