ನವದೆಹಲಿ: ಮಹಾತ್ಮಾ ಗಾಂಧೀಜಿಯವರ (Mahatma Gandhiji) ಜನ್ಮ ದಿನಾಚರಣೆ (Birthday) ಹಿನ್ನೆಲೆಯಲ್ಲಿ ದೇಶದ ಸ್ವಚ್ಛ ನಗರಗಳ ಪಟ್ಟಿ (List of cleanest cities in the country) ಹೊರ ಬಿದ್ದಿದೆ. ಮಧ್ಯ ಪ್ರದೇಶ (Madhya Pradesh) ರಾಜ್ಯದ ಇಂದೋರ್ ನಗರ (Inodre City) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸತತ 7ನೇ ಬಾರಿಗೆ ಇಂದೋರ್ ನಗರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ಗುಜರಾತ್ನ (Gujarat) ಸೂರತ್ (Surat) ಹಾಗೂ ಮಹಾರಾಷ್ಟ್ರದ (Maharashtra) ನವಿ ಮುಂಬೈ (Navi Mumbai) ಇದೆ. ಟಾಪ್ 10ರ (Top-10) ಪಟ್ಟಿಯಲ್ಲಿ ಕರ್ನಾಟಕದ (Karnataka) ಮೈಸೂರು ನಗರ (Mysuru City) ಮಾತ್ರ ಸ್ಥಾನ ಪಡೆದಿದೆ. ಮೈಸೂರಿಗೆ ಈ ಪಟ್ಟಿಯಲ್ಲಿ 8ನೇ ಸ್ಥಾನ ಧಕ್ಕಿದೆ. ಇನ್ನುಳಿದಂತೆ ರಾಷ್ಟ್ರ ರಾಜಧಾನಿ ನವದೆಹಲಿ (New Delhi) 9ನೇ ಸ್ಥಾನ ಹಾಗೂ ಛತ್ತೀಸ್ಗಡ್ನ (Chhattisgarh) ಅಂಬಿಕಾಪುರ (Ambikapur) 10ನೇ ಸ್ಥಾನ ಪಡೆದಿದೆ.
ದೇಶದ ಸ್ವಚ್ಛ ನಗರವಾಗಿ ಹೊರಹೊಮ್ಮಿದ ಇಂದೋರ್
ಸತತ ಆರನೇ ಬಾರಿಗೆ "ಸ್ವಚ್ಛ ನಗರ" ಟ್ಯಾಗ್ ಅನ್ನು ಉಳಿಸಿಕೊಂಡು, ಇಂದೋರ್ ನಗರವು ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಮಧ್ಯ ಪ್ರದೇಶವು 7 ನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್ 2022 ರಲ್ಲಿ 'ಸ್ವಚ್ಛ ರಾಜ್ಯ' ಟ್ಯಾಗ್ ಅನ್ನು ಉಳಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ವಿತರಿಸಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪಟ್ಟಿಯಲ್ಲಿ ಮೈಸೂರಿಗೆ 8ನೇ ಸ್ಥಾನ
ಕರ್ನಾಟಕದ ಕೇವಲ ಒಂದು ನಗರ ಮಾತ್ರ ಸ್ವಚ್ಛ ನಗರಗಳ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಮೈಸೂರಿಗೆ 8ನೇ ಸ್ಥಾನ ದೊರಕಿದೆ.. 2021ರಲ್ಲಿ ಮೈಸೂರು 12ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಬಾರಿ ಎಂಟನೇ ಸ್ಥಾನಕ್ಕೆ ಏರಿದೆ. ಆದರೆ 2020ರಲ್ಲಿ ಅದು ಐದನೇ ಸ್ಥಾನದಲ್ಲಿತ್ತು, ಅದಕ್ಕೆ ಹೋಲಿಸಿಕೊಂಡರೆ ಹಿನ್ನಡೆಯಾದಂತಾಗಿದೆ. ಇನ್ನು ಶಿವಮೊಗ್ಗ ನಗರವು ಅತ್ಯಂತ ಚಲನೆಯ ನಗರ ಎಂಬ ಪ್ರಶಸ್ತಿ ಪಡೆದುಕೊಂಡಿದೆ.
ಇದನ್ನೂ ಓದಿ: Brand Bengaluru: ಬೆಂಗಳೂರನ್ನು ಟ್ರೋಲ್ ಮಾಡುವವರಿಗೆ ತಪರಾಕಿ, ಕನ್ನಡಿಗರು ಹೇಳ್ತಿದ್ದಾರೆ ಬೆಂಗಳೂರು ಬಿಟ್ಟು ತೊಲಗಿ!
ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ನಗರಗಳು
ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಸೂರತ್ ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನ ಪಡೆದಿದೆ.
ಸ್ಥಾನಗಳು | ನಗರ | ರಾಜ್ಯ |
01 | ಇಂದೋರ್ | ಮಧ್ಯಪ್ರದೇಶ |
02 | ಸೂರತ್ | ಗುಜರಾತ್ |
03 | ನವಿ ಮುಂಬೈ | ಮಹಾರಾಷ್ಟ್ರ |
04 | ವಿಶಾಖಪಟ್ಟಣಂ | ಆಂಧ್ರಪ್ರದೇಶ |
05 | ವಿಜಯವಾಡ | ಆಂಧ್ರಪ್ರದೇಶ |
06 | ಭೋಪಾಲ್ | ಮಧ್ಯಪ್ರದೇಶ |
07 | ತಿರುಪತಿ | ಆಂಧ್ರಪ್ರದೇಶ |
08 | ಮೈಸೂರು | ಕರ್ನಾಟಕ |
09 | ನವದೆಹಲಿ | ದೆಹಲಿ |
10 | ಅಂಬಿಕಾಪುರ | ಛತ್ತೀಸ್ಗಡ್ |
ಇದನ್ನೂ ಓದಿ: IT Companies: ಐಟಿ ಸಿಟಿಯ ಖ್ಯಾತಿ ಕಳೆದುಕೊಳ್ಳುತ್ತಾ ಬೆಂಗಳೂರು? ಪರರಾಜ್ಯದತ್ತ ಸಾಫ್ಟ್ವೇರ್ ಕಂಪನಿಗಳ ಚಿತ್ತ!
ನಗರಗಳ ಶ್ರೇಯಾಂಕ 2 ಭಾಗಗಳಾಗಿ ವರ್ಗೀಕರಣ
ನಗರ ಸ್ಥಳೀಯ ಸಂಸ್ಥೆಗಳ ಶ್ರೇಯಾಂಕವನ್ನು 1 ಲಕ್ಷಕ್ಕಿಂತ ಅಧಿಕ ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ಎರಡು ವರ್ಗಗಳಲ್ಲಿ ನೀಡಲಾಗುತ್ತದೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಮೊದಲ ಐದು ನಗರಗಳ ಪೈಕಿ, ನಾಲ್ಕು ನಗರಗಳು ಮಹಾರಾಷ್ಟ್ರದಲ್ಲಿವೆ. ಮಹಾರಾಷ್ಟ್ರದ ಪಂಚಗನಿ ಮೊದಲ ಸ್ಥಾನದಲ್ಲಿದೆ. ಛತ್ತೀಸಗಡದ ಪತಾನ್ ಎರಡನೇ ಅತ್ಯಂತ ಸ್ವಚ್ಛನಗರಿ ಎನಿಸಿದೆ. ಮಹಾರಾಷ್ಟ್ರದ ಕರ್ಹಾದ್ ಮೂರನೇ ಸ್ಥಾನದಲ್ಲಿದೆ. ಲೋನಾವಾಲ ಮತ್ತು ಕರ್ಜತ್ ಉಳಿದ ಎರಡು ನಗರಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ