Indore Fire Accident: ಯುವಕನ ಲವ್​ ಫೈಲ್ಯೂರ್, ಜೀವಂತ ಸುಟ್ಟು ಕರಕಲಾಗಿದ್ದು 7 ಮಂದಿ

ಇಂದೋರ್ ಭೀಕರ ಬೆಂಕಿ ಅವಘಡದ ಹಿಂದೆ ಲವ್ ಫೈಲ್ಯೂರ್ ಸ್ಟೋರಿಯೊಂದು ಅಡಗಿದೆ. ಭಗ್ನಪ್ರೇಮಿಯೊಬ್ಬ ವಾಹನಕ್ಕೆ ಹಚ್ಚಿದ ಬೆಂಕಿ, ಇಡೀ ವಸತಿ ಸಮುಚ್ಛಯಕ್ಕೆ ಹಬ್ಬಿದ ಕಾರಣ, 7 ಜನರು ಸಾವನ್ನಪ್ಪಿ, ಇತರೆ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಪೊಲೀಸರು

ಘಟನಾ ಸ್ಥಳದಲ್ಲಿ ಪೊಲೀಸರು

  • Share this:
ಏಳು ಜನರ ಸಾವಿಗೆ ಕಾರಣವಾದ ಬೆಂಕಿಗೆ ಕಾರಣವಾಗಿದ್ದು ಪ್ರೀತಿ. ಇಂದೋರ್ ಭೀಕರ ಬೆಂಕಿ ಅವಘಡದ ಹಿಂದೆ ಲವ್ ಫೈಲ್ಯೂರ್ ಸ್ಟೋರಿಯೊಂದು ಅಡಗಿದೆ. ಭಗ್ನಪ್ರೇಮಿಯೊಬ್ಬ ವಾಹನಕ್ಕೆ ಹಚ್ಚಿದ ಬೆಂಕಿ, ಇಡೀ ವಸತಿ ಸಮುಚ್ಛಯಕ್ಕೆ ಹಬ್ಬಿದ ಕಾರಣ, 7 ಜನರು ಸಾವನ್ನಪ್ಪಿ, ಇತರೆ 9 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ನಡೆದಿದೆ. ಇಲ್ಲಿನ 3 ಮಹಡಿ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ನಿದ್ದೆಯ ಮಂಪರಿನಲ್ಲಿದ್ದ ಜನರಿಗೆ ಅರಿವಾಗುವುದರ ಒಳಗೆ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು.

ಹೀಗಾಗಿ 7 ಜನರು ಸುಟ್ಟು ಕರಕಲಾಗಿ ಹೋಗಿದ್ದರು. ಹಲವರು ಮನೆಯ ಬಾಲ್ಕನಿಯಿಂದ ಹಾರಿ ಜೀವ ಉಳಿಸಿಕೊಂಡಿದ್ದರು. ಈ ವೇಳೆ ಹಲವರಿಗೆ ತೀವ್ರ ಗಾಯಗಳಾಗಿತ್ತು. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರೂ, ಅವರು ತಕ್ಷಣಕ್ಕೆ ಬರಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದರು. ಪ್ರಾಥಮಿಕ ತನಿಖೆ ವೇಳೆ, ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು.

ಸಿಸಿಟಿವಿ ಗಮನಿಸಿದಾಗ ಗೊತ್ತಾಯ್ತು ವಿಚಾರ

ಆದರೆ ಸಮೀಪದ ಸಿಸಿಟಿವಿ ಗಮನಿಸಿದಾಗ ವ್ಯಕ್ತಿಯೊಬ್ಬ ನೆಲ ಮಾಳಿಗೆಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ ಹಚ್ಚಿದ್ದು, ಅದರಿಂದಲೇ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕಟ್ಟಡದಲ್ಲಿದ್ದ ಮಹಿಳೆಯೊಬ್ಬರು, ವ್ಯಕ್ತಿಯೊಬ್ಬನ ಪ್ರೀತಿ ನಿರಾಕರಿಸಿದ್ದಕ್ಕೆ ಆತ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿಗೆ ಮನಸೋತ ಯುವಕನೊಬ್ಬ ಶನಿವಾರ ಮುಂಜಾನೆ ಇಂದೋರ್‌ನ ಸ್ವರ್ಣ ಬಾಗ್ ಕಾಲೋನಿಯಲ್ಲಿ ಎರಡಂತಸ್ತಿನ ಕಟ್ಟಡಕ್ಕೆ ಬೆಂಕಿ ಹಚ್ಚಿ ಏಳು ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ ಎಂದು ಇಂದೋರ್ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: Evening Digest: ಮೋದಿ ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದೆ ಎಂದ ಮಧ್ವರಾಜ್: 79 ದಿನ ಕೂಡಿಟ್ಟು ಅತ್ಯಾಚಾರಗೈದ ಮಂತ್ರವಾದಿ: ಇಂದಿನ ಪ್ರಮುಖ ಸುದ್ದಿಗಳು

ಎಎನ್‌ಐಗೆ ಮಾತನಾಡಿದ ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ, ತನಿಖೆಯ ವೇಳೆ ಸಂಜಯ್ ಅಲಿಯಾಸ್ ಶುಭಂ ದೀಕ್ಷಿತ್ ಎಂಬ ವ್ಯಕ್ತಿ ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ.

50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿ ವಿಶ್ಲೇಷಣೆ

''50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗಿದೆ. ಸಂಜಯ್ ಅಲಿಯಾಸ್ ಶುಭಂ ದೀಕ್ಷಿತ್ ಎಂಬ ವ್ಯಕ್ತಿ ಘಟನೆಯ ಸ್ವಲ್ಪ ಮೊದಲು ಹೋಗುತ್ತಿರುವುದನ್ನು ಒಂದು ದೃಶ್ಯಾವಳಿ ತೋರಿಸಿದೆ. ಹೆಚ್ಚಿನ ಮಾಹಿತಿ ಪಡೆದ ಪೊಲೀಸರು ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ. ಹೆಚ್ಚಿನ ಮಾಹಿತಿಯನ್ನು ಹೊರತೆಗೆಯಲಾಗುತ್ತಿದೆ ಎಂದು ಮಿಶ್ರಾ ಹೇಳಿದರು.

ಇದನ್ನೂ ಓದಿ: Indore Fire Accident: ಬೆಂಕಿ ಅವಘಡದಲ್ಲಿ 7 ಜನ ಸಜೀವ ದಹನ

ಆರೋಪಿಗೆ ಹಣವಿದ್ದು, ಹುಡುಗಿಯೊಬ್ಬಳ ಮೇಲೆ ಇನ್ನಿಲ್ಲದ ಪ್ರೀತಿ ಇತ್ತು ಎಂದು ಆಯುಕ್ತರು ತಿಳಿಸಿದ್ದಾರೆ. ಈ ಹಿಂದೆಯೂ ಅವರ ನಡುವೆ ಜಗಳ ನಡೆದಿದ್ದು, ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಇಂದೋರ್‌ನ ಸ್ವರ್ನ್ ಬಾಗ್ ಕಾಲೋನಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಪಘಾತದಲ್ಲಿ ಹಲವಾರು ಅಮೂಲ್ಯ ಜೀವಗಳ ಅಕಾಲಿಕ ಮರಣದ ದುಃಖದ ಸುದ್ದಿ ಬಂದಿದೆ.

ಅಗಲಿದ ಆತ್ಮಗಳಿಗೆ ಅವರ ಪಾದದ ಬಳಿಯಲ್ಲಿ ದೇವರು ಸ್ಥಳವನ್ನು ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಆಳವಾದ ದುಃಖವನ್ನು ಸಹಿಸಿಕೊಳ್ಳಿ ಮತ್ತು ಗಾಯಾಳುಗಳಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಮಧ್ಯಪ್ರದೇಶ ಸಿಎಂ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Published by:Divya D
First published: