ಗಾಳಿಯಿಂದ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ...!; ಇಂಡೋನೇಷ್ಯಾ ಮಹಿಳೆಯ ಮಾತು

ನೀಲಿ ಬಣ್ಣದ ಬಟ್ಟೆ ಧರಿಸಿರುವ ಮಹಿಳೆಯೇ ಮಗುವಿಗೆ ಜನ್ಮ ನೀಡಿರುವ ಸಿತಿ ಜೈನ್ಹಾ

ನೀಲಿ ಬಣ್ಣದ ಬಟ್ಟೆ ಧರಿಸಿರುವ ಮಹಿಳೆಯೇ ಮಗುವಿಗೆ ಜನ್ಮ ನೀಡಿರುವ ಸಿತಿ ಜೈನ್ಹಾ

ತಜ್ಞರು ಹೇಳುವ ಪ್ರಕಾರ, ಇದು ರಹಸ್ಯ ಗರ್ಭಧಾರಣೆಯಾಗಿದೆ. ಹೆರಿಗೆಯಾಗುವವರೆಗೂ ತಾನು ಗರ್ಭಿಣಿ ಎಂಬುದು ತಾಯಿಯ ಗಮನಕ್ಕೆ ಬಂದಿರುವುದಿಲ್ಲ ಎನ್ನಲಾಗುತ್ತಿದೆ.

  • Share this:

ಇಂಡೋನೇಷ್ಯಾ(ಫೆ.18): ಯುವತಿಯೊಬ್ಬಳು ಇಂಡೋನೇಷ್ಯಾದಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗು ಹುಟ್ಟುವುದಕ್ಕೆ ಆಕೆ ನೀಡಿದ ಕಾರಣ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಗಾಳಿಯು ನನ್ನ ಜನನಾಂಗದ ಮೂಲಕ  ನನ್ನ ದೇಹ ಸೇರಿತು. ಆದ್ದರಿಂದ ನಾನು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ್ದು, ಲೈಂಗಿಕ ಕ್ರಿಯೆಯಿಂದ ಅಲ್ಲ ಎಂದು ಯುವತಿ ಹೇಳುತ್ತಿದ್ದಾಳೆ. ಇದನ್ನು ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ. ಈ ಘಟನೆ ಇಂಡೋನೇಷ್ಯಾದ ಸಿಯಾಂಜುರ್​​ ಸಿಟಿಯ ವೆಸ್ಟ್​ ಜಾವಾದಲ್ಲಿ ನಡೆದಿದೆ. ಯುವತಿಯ ಹೇಳಿಕೆ ಕೇಳಿ ಪೊಲೀಸರೇ ದಿಗ್ಬ್ರಾಂತರಾಗಿದ್ದಾರೆ.


25 ವರ್ಷದ ಯುವತಿ ಸಿತಿ ಜೈನ್ಹಾ ಎಂಬಾಕೆ ಪೊಲೀಸರ ಮುಂದೆ ಈ ರೀತಿ ಹೇಳಿದ್ದಾಳೆ. ಇದೆಲ್ಲವೂ ಕೇವಲ ಒಂದೇ ಗಂಟೆಯ ಸಮಯದಲ್ಲಿ ಆಗಿದ್ದು. ವರದಿಗಳ ಪ್ರಕಾರ, ಸಿತಿ ತನ್ನ ಮನೆಯ ಲಿವಿಂಗ್ ರೂಮ್​ನಲ್ಲಿ ಕುಳಿತಿದ್ದಾಗ, ಬುಧವಾರ ಮಧ್ಯಾಹ್ನ ಆಕೆ ಗರ್ಭವತಿ ಎಂಬುದು ತಿಳಿಯಿತು ಎಂದು ಹೇಳಿಕೊಂಡಿದ್ದಾಳೆ. ಹೆರಿಯಾಗುವುದಕ್ಕೆ ಕೇವಲ ಇನ್ನೊಂದು ಗಂಟೆಯಿದೆ ಎನ್ನುವಾಗ ಆಕೆಗೆ ತಾನು ಗರ್ಭಿಣಿ ಎಂಬ ವಿಷಯ ಗಮನಕ್ಕೆ ಬಂದಿದೆ.


ಕೃಷಿ ಕಾಯ್ದೆ ವಿರೋಧಿಸಿ ಇಂದು ರಾಜ್ಯಾದ್ಯಂತ ರೈಲು ತಡೆ; ಮೆಜೆಸ್ಟಿಕ್, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ


"ನಾನು ಮಧ್ಯಾಹ್ನದ ಪ್ರಾರ್ಥನೆ ಮುಗಿಸಿ, ಕೊಠಡಿಯಲ್ಲಿ ಮುಖ ಕೆಳಗೆ ಮಾಡಿ ಮಲಗಿದ್ದೆ. ಆಗ ಇದ್ದಕ್ಕಿದ್ದಂತೆ ಗಾಳಿಯು ನನ್ನ ಜನನಾಂಗದ ಮೂಲಕ ನನ್ನ ದೇಹ ಸೇರಿದಂತೆ ಭಾಸವಾಯಿತು" ಎಂದು ಸಿತಿ ಮಾಧ್ಯಮಗಳ ಬಳಿ ಹೇಳಿದ್ದಾಳೆ. "ಗಾಳಿಯು ನನ್ನ ದೇಹ ಸೇರಿದ 15 ನಿಮಿಷಗಳ ಬಳಿಕ ಹೊಟ್ಟೆನೋವು ಶುರುವಾಯಿತು. ಆಗ ನನ್ನ ಹೊಟ್ಟೆ ತುಂಬಾ ದೊಡ್ಡದಾಗಿರುವಂತೆ ಕಾಣಿಸಿತು. ಹೊಟ್ಟೆನೋವು ಹೆಚ್ಚಾದ ಕಾರಣ ಕೂಡಲೇ ನಾನು ಪಕ್ಕದ ಕಮ್ಯುನಿಟಿ ಆಸ್ಪತ್ರೆಗೆ ಹೋದೆ. ಅಲ್ಲಿ ನನಗೆ ಹೆಣ್ಣು ಮಗು ಜನಿಸಿತು" ಎಂದು ಯುವತಿ ಹೇಳಿಕೊಂಡಿದ್ದಾಳೆ.


ನಿಗೂಢವಾಗಿ ಗರ್ಭಿಣಿಯಾಗಿ, ಮಗುವಿಗೆ ಜನ್ಮ ನೀಡಿರುವ ಜೈನ್ಹಾಳದ್ದೇ ಈಗ ಎಲ್ಲೆಡೆ ಸುದ್ದಿಯಾಗಿದೆ. ಯುವತಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವಿದೆ. ನಾಲ್ಕು ತಿಂಗಳ ಹಿಂದೆ ಗಂಡ-ಹೆಂಡತಿ ಇಬ್ಬರೂ ಬೇರೆಯಾಗಿದ್ದು, ಈಗ ಜೊತೆಯಲ್ಲಿಲ್ಲ.


ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ರೀತಿಯ ನಿಗೂಢ ಗರ್ಭಧಾರಣೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ತಜ್ಞರು ಹೇಳುವ ಪ್ರಕಾರ, ಇದು ರಹಸ್ಯ ಗರ್ಭಧಾರಣೆಯಾಗಿದೆ. ಹೆರಿಗೆಯಾಗುವವರೆಗೂ ತಾನು ಗರ್ಭಿಣಿ ಎಂಬುದು ತಾಯಿಯ ಗಮನಕ್ಕೆ ಬಂದಿರುವುದಿಲ್ಲ ಎನ್ನಲಾಗುತ್ತಿದೆ.


ಇನ್ನು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಆಕೆಯ ಮಾಜಿ ಗಂಡನ ಬಗ್ಗೆಯೂ ಸಹ ಮಾಹಿತಿ ಕಲೆ ಹಾಕಿದ್ದಾರೆ.ಯುವತಿ ಅಸ್ವಾಭಾವಿಕವಾಗಿ ಮಗುವಿಗೆ ಜನ್ಮ ನೀಡಿದ್ದರ ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ಬಗೆಹರಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

First published: