Punishment: ಇಬ್ರೂ ಸೇರಿ ತಪ್ಪು ಮಾಡಿದ್ರು, ಆದ್ರೆ ಶಿಕ್ಷೆ ಮಾತ್ರ ಮಹಿಳೆಗೇ ಹೆಚ್ಚು... ಇದ್ಯಾವ ನ್ಯಾಯ?

ಇಸ್ಲಾಮಿಕ್ ಷರಿಯಾ ಕಾನೂನು ವ್ಯವಸ್ಥೆಗೆ ಅನುಗುಣವಾಗಿ ಈ ಶಿಕ್ಷೆಯನ್ನು ನೀಡಲಾಗಿದೆ, ಇದರ ಅಡಿಯಲ್ಲಿ ಸಾರ್ವಜನಿಕವಾಗಿ ತಪ್ಪು ಮಾಡಿದ ಪುರುಷ ಮತ್ತು ಮಹಿಳೆಗೆ ಛಡಿ ಏಟು ನೀಡುವುದು ಒಂದು ಸಾಮಾನ್ಯವಾದ ಶಿಕ್ಷೆ ನೀಡುವ ಅಭ್ಯಾಸವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನುಗಳು ಮತ್ತು ಅಪರಾಧಗಳಿಗೆ ಶಿಕ್ಷೆಯೂ ಸಹ ಬೇರೆ ಬೇರೆ ಆಗಿರುವುದನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.ಆದರೆ ಕೆಲವೊಂದು ದೇಶದಲ್ಲಿ ಮಾಡಿದ ಒಂದೇ ತರಹದ ತಪ್ಪಿಗೆ ಪುರುಷನಿಗೆ ಒಂದು ಪ್ರಮಾಣದ ಶಿಕ್ಷೆ ಆದರೆ ಮಹಿಳೆಗೆ ಬೇರೆ ಪ್ರಮಾಣದ ಶಿಕ್ಷೆ ಕೊಡುತ್ತಾರೆ ನೋಡಿ. ತಪ್ಪು ತಪ್ಪೇ ಎಲ್ಲವೇ ಅದನ್ನು ಮಾಡಿದವರು ಯಾರಾದರೇನು ಅಲ್ಲವೇ? ಆದರೆ ಇಂಡೋನೇಷ್ಯಾದಲ್ಲಿ (Indonesia) ಪುರುಷ ಮತ್ತು ಮಹಿಳೆ (Women) ಇಬ್ಬರೂ ಸೇರಿ ಮಾಡಿರುವ ತಪ್ಪಿಗೆ ಪುರುಷನಿಗಿಂತಲೂ ಹೆಚ್ಚು ಶಿಕ್ಷೆ (Punishable) ಮಹಿಳೆ ಅನುಭವಿಸಬೇಕಂತೆ. ಇದೆಂಥಾ ನ್ಯಾಯ (Justice) ಅಂತ ನಮಗೆಲ್ಲಾ ಅನ್ನಿಸಬಹುದು, ಆದರೆ ಇದು ಸತ್ಯ ಎಂದು ಹೇಳುತ್ತವೆ ವರದಿಗಳು.

ವಿವಾಹೇತರ ಸಂಬಂಧಕ್ಕೆ ಶಿಕ್ಷೆ
ಮಹಿಳೆಯೊಬ್ಬಳು ವಿವಾಹೇತರ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡ ನಂತರ ವ್ಯಭಿಚಾರ ಮಾಡಿದ್ದಕ್ಕಾಗಿ ಅವಳಿಗೆ 100 ಛಡಿ ಏಟು ನೀಡಿ ಶಿಕ್ಷಿಸಲಾಯಿತು, ಆದರೆ ಆ ತಪ್ಪಿನಲ್ಲಿ ಭಾಗಿಯಾದ ಅವಳ ಪುರುಷ ಸಂಗಾತಿಗೆ ಕೇವಲ 15 ಛಡಿ ಏಟುಗಳು ನೀಡಿ ಸುಮ್ಮನಾದರು. ಇಂಡೋನೇಷ್ಯಾದ ಸಂಪ್ರದಾಯವಾದಿ ಅಸೆ ಪ್ರಾಂತ್ಯದಲ್ಲಿ ಗುರುವಾರ ಈ ಘಟನೆ ನಡೆದಿದೆ. ಇಸ್ಲಾಮಿಕ್ ಷರಿಯಾ ಕಾನೂನು ವ್ಯವಸ್ಥೆಗೆ ಅನುಗುಣವಾಗಿ ಈ ಶಿಕ್ಷೆಯನ್ನು ನೀಡಲಾಗಿದೆ, ಇದರ ಅಡಿಯಲ್ಲಿ ಸಾರ್ವಜನಿಕವಾಗಿ ತಪ್ಪು ಮಾಡಿದ ಪುರುಷ ಮತ್ತು ಮಹಿಳೆಗೆ ಛಡಿ ಏಟು ನೀಡುವುದು ಒಂದು ಸಾಮಾನ್ಯವಾದ ಶಿಕ್ಷೆ ನೀಡುವ ಅಭ್ಯಾಸವಾಗಿದೆ.

ಈ ಸಾರ್ವಜನಿಕವಾಗಿ ತಪ್ಪು ಮಾಡಿದವರಿಗೆ ಹೊಡೆಯುವುದನ್ನು ನೋಡಲು ಗುರುವಾರ ನೆರೆದಿದ್ದ ಅನೇಕರು ಈ ಛಡಿ ಏಟುಗಳನ್ನು ನೋಡಿದರು ಮತ್ತು ಚಿತ್ರೀಕರಿಸಿದರು ಎಂದು ಹೇಳಲಾಗುತ್ತಿದೆ. ಮಹಿಳೆಯ ಹೊಡೆತವನ್ನು ಸ್ವಲ್ಪ ಕಾಲ ವಿರಮಿಸಬೇಕಾಯಿತು ಏಕೆಂದರೆ ಅವಳು ನೋವನ್ನು ಸಹಿಸಲಾರಳು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನೂ ಓದಿ: Explained: ಮಹಿಳಾ ಸೈನಿಕರ 'ಕನ್ಯತ್ವ ಪರೀಕ್ಷೆ' ರದ್ದುಗೊಳಿಸಿರುವ ಇಂಡೋನೇಷ್ಯಾ, ಏನಿದರ ಹಿನ್ನೆಲೆ?

ತಪ್ಪು ಒಪ್ಪಿಕೊಂಡ ಮಹಿಳೆ
ಈಸ್ಟ್ ಅಶೆ ಪ್ರಾಸಿಕ್ಯೂಟರ್ ಕಚೇರಿಯ ಸಾಮಾನ್ಯ ತನಿಖಾ ವಿಭಾಗದ ಮುಖ್ಯಸ್ಥ ಇವಾನ್ ನಜ್ಜರ್ ಅಲಾವಿ ಅವರು ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡುತ್ತಾ “ವಿವಾಹಿತ ಮಹಿಳೆಯೊಬ್ಬಳು ತಾನು ಮದುವೆಯಾಗಿದ್ದನ್ನು ಮರೆತು ಇನ್ನೊಬ್ಬ ಪುರುಷನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದುದಾಗಿ ತನಿಖಾಧಿಕಾರಿಗಳ ಬಳಿ ತಪ್ಪು ಒಪ್ಪಿಕೊಂಡ ನಂತರ ಈ ನ್ಯಾಯಾಲಯವು ಅವರಿಗೆ ಈ ಶಿಕ್ಷೆಯನ್ನು ವಿಧಿಸಿದೆ ಎಂದು ಹೇಳಿದರು. ಈಸ್ಟ್ ಅಶೆಯ ಮೀನುಗಾರಿಕಾ ಏಜೆನ್ಸಿಯ ಮುಖ್ಯಸ್ಥನಾದ ಆ ವ್ಯಕ್ತಿ ಈ ಹೇಳಿಕೆಯನ್ನು ಒಪ್ಪಿ ಕೊಳ್ಳಲಿಲ್ಲ, ಆದ್ದರಿಂದ ನ್ಯಾಯಾಧೀಶರು ಅವನನ್ನು ಶಿಕ್ಷಿಸಲಿಲ್ಲ” ಎಂದು ಅವರು ಹೇಳಿದರು. ವರದಿಗಳ ಪ್ರಕಾರ, ಆ ವ್ಯಕ್ತಿಯೂ ಸಹ ವಿವಾಹಿತನು ಎಂಬುದು ತಿಳಿದು ಬಂದಿದೆ.

ವಿಚಾರಣೆ ನಡೆಸಿದ ನ್ಯಾಯಾಧೀಶರು
ವಿಚಾರಣೆಯ ಸಮಯದಲ್ಲಿ, ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿ ಏನನ್ನೂ ಒಪ್ಪಿಕೊಂಡಿಲ್ಲ. ಹೀಗಾಗಿ, ನ್ಯಾಯಾಧೀಶರು ಅವನು ತಪ್ಪಿತಸ್ಥನೋ ಇಲ್ಲವೋ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ" ಎಂದು ಸಾರ್ವಜನಿಕ ಛಡಿ ಏಟಿನ ಶಿಕ್ಷೆಯ ನಂತರ ಅಲವಿ ಹೇಳಿರುವುದನ್ನು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿದೆ.

2018 ರಲ್ಲಿ ಒಂದು ತೋಟದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ನ್ಯಾಯಾಧೀಶರು ವಿವಾಹಿತ ವ್ಯಕ್ತಿಯನ್ನು "ತನ್ನ ಹೆಂಡತಿಯಲ್ಲದ ಮಹಿಳೆಗೆ ಪ್ರೀತಿ ತೋರಿಸಿದ್ದಕ್ಕಾಗಿ" ತಪ್ಪಿತಸ್ಥಎಂದು ಹೇಳಿದರು. ಆ ವ್ಯಕ್ತಿಗೆ 30 ಛಡಿ ಏಟುಗಳನ್ನು ನೀಡುವ ಶಿಕ್ಷೆ ವಿಧಿಸಲಾಯಿತು. ಆದರೆ ಅವರು ಪ್ರಾಂತ್ಯದ ಷರಿಯಾ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದರು, ಹಾಗಾಗಿ ಅದು ಅವರ ಶಿಕ್ಷೆಯನ್ನು 15 ಛಡಿ ಏಟುಗಳಿಗೆ ಇಳಿಸಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Man Marries Rice Cooker: ರೈಸ್ ಕುಕರ್​ನ್ನು ಬಾಳ ಸಂಗಾತಿಯನ್ನಾಗಿ ಮಾಡ್ಕೊಂಡು ನಾಲ್ಕೇ ದಿನಕ್ಕೆ ಡಿವೋರ್ಸ್ ಕೊಟ್ಟ!

100 ಬಾರಿ ಚಾಟಿ ಏಟು
ಅಪ್ರಾಪ್ತ ವಯಸ್ಸಿನವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಶಿಕ್ಷೆಗೊಳಗಾದ ಇನ್ನೊಬ್ಬ ವ್ಯಕ್ತಿಯನ್ನು ಅದೇ ದಿನ 100 ಬಾರಿ ಚಾಟಿ ಏಟು ನೀಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಅಪರಾಧಕ್ಕಾಗಿ ಆ ವ್ಯಕ್ತಿಗೆ 75 ತಿಂಗಳ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗಿದೆ. ಹಲವಾರು ಸಂಸ್ಥೆಗಳು ಈ ಸಾರ್ವಜನಿಕ ಛಡಿ ಏಟು ನೀಡುವ ಶಿಕ್ಷೆಯ ವಿರುದ್ಧ ಧ್ವನಿ ಎತ್ತಿವೆ. ಈ ಛಡಿ ಏಟುಗಳು "ಕ್ರೂರ ಮತ್ತು ಅಮಾನವೀಯ" ಶಿಕ್ಷೆಯಾಗಿದ್ದು ಮತ್ತು ಕಳೆದ ವರ್ಷ ದೇಶದಲ್ಲಿ ಈ ಶಿಕ್ಷೆಯನ್ನು ತಕ್ಷಣವೇ ನಿಷೇಧ ಮಾಡುವಂತೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಕೇಳಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
Published by:vanithasanjevani vanithasanjevani
First published: