ಇಂಡೋನೇಷ್ಯಾಕ್ಕೆ ಬಂದಪ್ಪಳಿಸಿದ ಸುನಾಮಿ; ಸಾವಿನ ಸಂಖ್ಯೆ 492 ಕ್ಕೆ ಏರಿಕೆ, 128 ಮಂದಿ ನಾಪತ್ತೆ!

ಅನೇಕ ಮನೆಗಳು ನೆಲಕ್ಕುರುಳಿವೆ. ಸಮುದ್ರ ತೀರದಲ್ಲಿರುವ ಹೋಟೆಲ್​ಗಳು ನೆಲಕಚ್ಚಿವೆ. ಈಗಾಗಲೇ ಅನೇಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

Rajesh Duggumane | news18
Updated:December 25, 2018, 9:11 PM IST
ಇಂಡೋನೇಷ್ಯಾಕ್ಕೆ ಬಂದಪ್ಪಳಿಸಿದ ಸುನಾಮಿ; ಸಾವಿನ ಸಂಖ್ಯೆ 492 ಕ್ಕೆ ಏರಿಕೆ, 128 ಮಂದಿ ನಾಪತ್ತೆ!
ಸುನಾಮಿಯಿಂದ ಇಂಡೋನೇಷ್ಯಾದಲ್ಲಿ ಮನೆಗಳು ಹಾನಿಗೊಳಗಾಗಿವೆ
  • News18
  • Last Updated: December 25, 2018, 9:11 PM IST
  • Share this:
ಜಕಾರ್ತಾ(ಡಿ.23): ಇಂಡೋನೇಷ್ಯಾದಲ್ಲಿ ಸುನಾಮಿ ಬಂದಪ್ಪಳಿಸಿದ್ದು, ಸಾವಿನ ಸಂಖ್ಯೆ 429 ಕ್ಕೆ ಏರಿದೆ. 843 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು,  128 ಜನರು ಕಾಣೆಯಾಗಿದ್ದಾರೆ.

ಸುಂಡಾ ಸ್ಟ್ರೈಟ್​ ಪ್ರದೇಶದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಬಂದಪ್ಪಳಿಸುತ್ತಿವೆ. ಅನೇಕ ಮನೆಗಳು ನೆಲಕ್ಕುರುಳಿವೆ. ಸಮುದ್ರ ತೀರದಲ್ಲಿರುವ ಹೋಟೆಲ್​ಗಳು ನೆಲಕಚ್ಚಿವೆ. ಈಗಾಗಲೇ ಅನೇಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅನಕ್​ ಕ್ರಾಕತು ಪ್ರದೇಶದಲ್ಲಿ ಜ್ವಾಲಾಮುಖಿ ಕಾಣಿಸಿಕೊಂಡಿದೆ. ಹಾಗಾಗಿ ಸಮುದ್ರದಾಳದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದಾಗಿ 20 ಮೀಟರ್ ಎತ್ತರದ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ​ ಎಂದು ಇಂಡೋನೇಷ್ಯಾ ಹವಾಮಾನ ಇಲಾಖೆ ತಿಳಿಸಿದೆ.“ನಾನು ನೋಡ ನೋಡುತ್ತಿದ್ದಂತೆ ಬೃಹತ್​ ಗಾತೃದ ಅಲೆಗಳು ದಡಕ್ಕೆ ಬರಲು ಆರಂಭಿಸಿದವು. ಮನೆಗಳೆಲ್ಲ ನೆಲಕ್ಕೆ ಉರುಳಿದ್ದವು. ಈ ಘಟನೆಯಲ್ಲಿ ನಾನು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು” ಎಂದು ಪ್ರತ್ಯಕ್ಷ ದರ್ಶಿಯೋರ್ವ ಹೇಳಿದ್ದಾನೆ.
ಮನೆ ಕಳೆದುಕೊಂಡವರು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ
"ನಾನು ಹೋಟೆಲ್​ನಲ್ಲಿ ಕುಳಿತಿದ್ದೆ. ಈ ವೇಳೆ ಸಮುದ್ರದ ಅಲೆಗಳು ಬಂದಪ್ಪಳಿಸಿದಂತೆ ಭಾಸವಾಯಿತು. ಸಮುದ್ರದೆಡೆಗೆ ನೋಡಿದರೆ ಬೃಹತ್​ ಗಾತೃದ ಅಲೆಗಳು ಏಳುತ್ತಿದ್ದವು. ನಾನು ಕುಟುಂಬ ಸಮೇತ ಹೊಟೆಲ್​ನಿಂದ ಹೊರ ಬಂದೆ. ನಂತರ ಹೇಗೋ ಪ್ರಾಣ ಉಳಿಸಿಕೊಂಡೆ" ಎಂದು ಜೀವ ಉಳಿಸಿಕೊಂಡ ಪ್ರವಾಸಿಗರೊಬ್ಬರು ಅಲ್ಲಿಯ ಪರಿಸ್ಥಿತಿ ವಿವರಿಸಿದ್ದಾರೆ.

ಸುಮಾರು 430 ಮನೆಗಳು ಹಾನಿಗೊಳಗಾಗಿವೆ ಎನ್ನಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ಇಂಡೋನೇಷ್ಯಾಕ್ಕೆ ಸುನಾಮಿ ಅಪ್ಪಳಿಸಿತ್ತು. ಈ ವೇಳೆ 2500ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

First published:December 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ