ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರಕ್ಕೆ 380 ಸಾವು; ಅಪಾಯದಲ್ಲಿ 3.5ಲಕ್ಷ ಜನ

Seema.R | news18
Updated:September 29, 2018, 1:18 PM IST
ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರಕ್ಕೆ 380 ಸಾವು; ಅಪಾಯದಲ್ಲಿ 3.5ಲಕ್ಷ ಜನ
ಸಾಂದರ್ಭಿಕ ಚಿತ್ರ
  • News18
  • Last Updated: September 29, 2018, 1:18 PM IST
  • Share this:
ನ್ಯೂಸ್​ 18 ಕನ್ನಡ

ಇಂಡೋನೇಷ್ಯಾ (ಸೆ.29): ಇಲ್ಲಿನ ಸುಲಾವೇಸಿ ದ್ವೀಪದ ಸಾಗರದ ಆಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಉಂಟಾದ ಸುನಾಮಿಗೆ  380 ಜನ ಸಾವನ್ನಪ್ಪಿದ್ದು, 356ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸುಲಾವೇಸಿ, ಪಲು ದ್ವೀಪದಲ್ಲಿ 10 ಅಡಿಯ ಎತ್ತರದ ಅಲೆ ಎದ್ದಿದ್ದು, 3,50,000 ಜನರ ಬದುಕು ಅಪಾಯದಲ್ಲಿದೆ. ಸುನಾಮಿ ಹೊಡೆತಕ್ಕೆ ದ್ವೀಪದ ಅನೇಕ ಕಟ್ಟಡಗಳು ನೆಲಕ್ಕೆ ಉರುಳಿದ್ದು, ಜನರು ಜೀವಭಯದಲ್ಲಿದ್ದಾರೆ.

7.5 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು,ಅಧಿಕಾರಿಗಳು ಸುನಾಮಿಯಲ್ಲಿ ಸಿಲುಕಿದವರ ಸ್ಥಳಾಂತರ ಕಾರ್ಯಕ್ಕೆ ಮುಂದಾಗಿದ್ದಾರೆ, ಸುನಾಮಿ ಯಾಗುತ್ತಿದ್ದಂತೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಮನೆಯಿಂದ ಹೊರ ಬಂದಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದಾರೆ.

ಈವರೆಗೆ 380 ಜನ ಸಾವನ್ನಪ್ಪಿದ್ದಾರೆ ಎಂಬುದು ತಿಳಿದು ಬಂದಿದ್ದು, ಇದು ನಿಖರ ಸಂಖ್ಯೆಯಲ್ಲ. ಕಾರಣ ಸುನಾಮಿಯಿಂದಾಗಿ ಸಂಪರ್ಕ ಸಾಧ್ಯವಾಗದೇ ಇರುವುದರಿಂದ ಇದಕ್ಕಿಂತ ಹೆಚ್ಚಿ ಅನಾಹುತ ಕೂಡ ಸಂಭವಿಸಿರಬಹುದು ಎಂದು ಹೇಳಲಾಗಿದೆ ಎಂದು ಅಲ್ಲಿನ ಏಜೆನ್ಸಿ ತಿಳಿಸಿದೆ.

ರಸ್ತೆಗಳ ಸಂಪರ್ಕ ಕಡಿತವಾಗಿದ್ದು,  ವಿಮಾನ ನಿಲ್ದಾಣದ ರನ್​ವೇ ಗಳು ಹಾನಿಗೆ ಒಳಗಾಗಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೆ ಹೆಲಿಕ್ಯಾಪ್ಟರ್​ ಬಳಸಿಕೊಂಡು ರಕ್ಷಣಾ ಕಾರ್ಯ ನಡೆಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಸುನಾಮಿ ಮುನ್ನೆಚ್ಚರಿಕೆವಿಮಾನ ನಿಲ್ದಾಣ ಬಂದ್​: ಸುನಾಮಿ ಅಲೆ ಹೊಡೆತಕ್ಕೆ ಸಿಲುಕಿರುವ ಪಲುವಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 24 ಗಂಟೆಗಳ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ, ಸುಲಾವೇಸಿ ದ್ವೀಪದಿಂದ 78 ಕೀಮಿ ದೂರದಲ್ಲಿ ವಿಮಾನ ನಿಲ್ದಾಣವಿದೆ.

ಕಳೆದ ಆಗಸ್ಟ್​ನಲ್ಲಿ ಕೂಡ ಲಾಂಬೋರ್ಕ್​, ಬಾಲಿಯಲ್ಲಿ ನಡೆದ ಭೂಕಂಪಕ್ಕೆ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದರು. ಸದಾ ಭೂಕಂಪದಂತಹ ಪ್ರಾಕೃತಿಕ ವಿಕೋಪಕ್ಕೆ ಈ ದೇಶ ತುತ್ತಾಗುತ್ತಲೆ ಇರುತ್ತದೆ. ಫೆಸಿಫಿಕ್​ ರಿಮ್​ ವಲಯದಲ್ಲಿ ಈ ಪ್ರದೇಶ ಬರುವುದರಿಂದ ಇಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಾಮಾನ್ಯವಾಗಿದೆ.  2004ರಲ್ಲಿ ಸುಮಾತ್ರಾ ದ್ವೀಪದ ಬಳಿ ಭೂಕಂಪ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದ್ದರು

First published: September 29, 2018, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading