ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಸುನಾಮಿ ಮುನ್ನೆಚ್ಚರಿಕೆ

ಇಂಡೋನೇಷ್ಯಾದ ದ್ವೀಪಗಳಲ್ಲಿ 80 ಕಿ.ಮೀ.ಆಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುನಾಮಿ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಲ್ಲಿ ಸಂಭವಿಸಿದ ಸಣ್ಣ ಭೂಕಂಪನಕ್ಕೆ ಕೆಲವು ಸ್ಥಳೀಯರು ಬಲಿಯಾಗಿರುವ ಸಾಧ್ಯತೆಯಿದೆ.


Updated:September 28, 2018, 7:52 PM IST
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಸುನಾಮಿ ಮುನ್ನೆಚ್ಚರಿಕೆ
ಇಂಡೋನೇಷ್ಯಾದ ದ್ವೀಪಗಳಲ್ಲಿ 80 ಕಿ.ಮೀ.ಆಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುನಾಮಿ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಲ್ಲಿ ಸಂಭವಿಸಿದ ಸಣ್ಣ ಭೂಕಂಪನಕ್ಕೆ ಕೆಲವು ಸ್ಥಳೀಯರು ಬಲಿಯಾಗಿರುವ ಸಾಧ್ಯತೆಯಿದೆ.
  • Share this:
ನ್ಯೂಸ್​-18 ಕನ್ನಡ

ನವದೆಹಲಿ(ಸೆ.28): ಇಂಡೋನೇಷ್ಯಾದಲ್ಲಿ ಇಂದು ಶುಕ್ರವಾರ ಸಂಭವಿಸಿದ 7.5 ತೀವ್ರತೆಯ ಭೀಕರ ಭೂಕಂಪಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಸುಲಾವೇಸಿ ದ್ವೀಪಗಳಲ್ಲಿ 80 ಕಿ.ಮೀ.ಆಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುನಾಮಿ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಲ್ಲಿ ಸಂಭವಿಸಿದ ಸಣ್ಣ ಭೂಕಂಪನಕ್ಕೆ ಕೆಲವು ಸ್ಥಳೀಯರು ಬಲಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಿವೆ ಮೂಲಗಳು.

ಇನ್ನು ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಜನ ತಮ್ಮ ಮನೆಯಿಂದ ಆಚೆ ಬಂದು ರಸ್ತೆಗಳಲ್ಲಿ ನಿಂತಿದ್ದರಿಂದ ಪ್ರಾಣ ಹಾನಿ ಕೊಂಚ ಕಡಿಮೆಯಾಗಿದೆ. ಈಗಾಗಲೇ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನೂ ನೀಡಿರುವುದರಿಂದ ಮುಂದೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಈ ಹಿಂದೆಯೂ ಇಂಡೋನೆಷ್ಯಾದ ವಿಹಾರ ದ್ವೀಪ ಲೊಮ್‍ಬೊಕ್‍ನಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿತ್ತು. ಈ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು. ಈಗ ಇದೇ ಮಾದರಿಯಲ್ಲಿ ಮತ್ತೊಂದು ಪ್ರಬಲ ಭೂಕಂಪ ಉಂಟಾಗಲಿದ್ದು ಇಂಡೋನೆಷ್ಯಾದ ಪ್ರಮುಖ ಕರಾವಳಿ ದ್ವೀಪದ ಪ್ರದೇಶ ಅಲ್ಲೋಲ್ಲಕಲ್ಲೋಲವಾಗಿದೆ ಎನ್ನುತ್ತಾರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಉನ್ನತಾಧಿಕಾರಿಯೊಬ್ಬರು.

7.0ರ ತೀವ್ರತೆಯ ಭೂಕಂಪವು ಅಲ್ಲಿನ ಲೊಮ್‍ಬೊಕ್ ದ್ವೀಪದ ನಿವಾಸಿಗಳನ್ನು ಬಲಿ ತೆಗೆದುಕೊಂಡಿತ್ತು. ನಗರದಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದ್ದವು. ಕಟ್ಟಡಗಳು, ಶಾಲೆಗಳು, ಮಸೀದಿಗಳಲ್ಲಿ ಬದುಕುಳಿದಿರಬಹುದಾದವರ ರಕ್ಷಿಸಲಾಗಿತ್ತು.

ಭೂಕಂಪದ ನಂತರ ಸುನಾಮಿ ಅಲೆ ಅಪ್ಪಳಿಸುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಅಲ್ಲದೇ ವಿನಾಶಕಾರಿ ಭೂಕಂಪ ಇಂಡೋನೆಷ್ಯಾದ ಸುಮತ್ರಾ ದ್ವೀಪದಲ್ಲಿ 2004ರಲ್ಲಿ ಸಾಗರಗರ್ಭದಲ್ಲಿ ಸಂಭವಿಸಿತ್ತು. 9.3ರ ತೀವ್ರತೆಯ ಭೂಕಂಪ ಮತ್ತು ನಂತರ ಅಪ್ಪಳಿಸಿದ ಸುನಾಮಿಯಿಂದಾಗಿ 1.68,000 ಜನರು ದುರಂತ ಸಾವಿಗೀಡಾಗಿದ್ದರು.
First published: September 28, 2018, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading