ಹೊಟ್ಟೆಪಾಡಿಗಾಗಿ ದರೋಡೆಗಿಳಿದ ಜನ; ಸುನಾಮಿ ಬಳಿಕ ಇಂಡೋನೇಷ್ಯಾ ಜನರ ಸ್ಥಿತಿ ಹೇಗಿದೆ ಗೊತ್ತಾ?

sushma chakre | news18
Updated:October 2, 2018, 5:10 PM IST
ಹೊಟ್ಟೆಪಾಡಿಗಾಗಿ ದರೋಡೆಗಿಳಿದ ಜನ; ಸುನಾಮಿ ಬಳಿಕ ಇಂಡೋನೇಷ್ಯಾ ಜನರ ಸ್ಥಿತಿ ಹೇಗಿದೆ ಗೊತ್ತಾ?
Rescuers recover the body of an earthquake victim from the ruins of the collapsed Roa Roa Hotel in Palu, Central Sulawesi, Indonesia, Tuesday, Oct. 2, 2018. The magnitude 7.5 earthquake struck at dusk Friday and generated a tsunami said to have been as high as 6 meters (20 feet) in places. (AP Photo/Fauzy Chaniago)
sushma chakre | news18
Updated: October 2, 2018, 5:10 PM IST
ನ್ಯೂಸ್​18 ಕನ್ನಡ

ಪಲು (ಅ. 2): ಇಂಡೋನೇಷ್ಯಾದಲ್ಲಿ ಕಳೆದ ಶುಕ್ರವಾರ ರಾತ್ರಿ ಸಂಭವಿಸಿದ್ದ ಸುನಾಮಿಯಿಂದ ಇಡೀ ದೇಶವೇ ಅಲ್ಲೋಲಕಲ್ಲೋಲವಾಗಿತ್ತು. ಸಾಗರದ ಮಧ್ಯೆ ಉಂಟಾದ ಭಾರೀ ಭೂಕಂಪದಿಂದ ತೆರೆಗಳು ಅಪ್ಪಳಿಸಿ ಸುನಾಮಿ ಎದ್ದಿತ್ತು. ಈ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,234ಕ್ಕೇರಿದೆ.

ಸುನಾಮಿ ಹೊಡೆತಕ್ಕೆ ಸಿಕ್ಕಿದ ಸ್ಥಳದ ಭೀಕರತೆಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗದಂತಿದೆ. ಇಂದು ಹತ್ತಾರು ವಿದ್ಯಾರ್ಥಿಗಳ ದೇಹವನ್ನು ಮಣ್ಣಿನ ಅಡಿಯಿಂದ ಹೊರತೆಗೆಯಲಾಗಿದೆ. ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದರಿಂದ ಅದರಡಿ ಸಿಲುಕಿರುವವರನ್ನು ರಕ್ಷಣಾ ಪಡೆಗಳು ಹೊರತೆಗೆಯುತ್ತಿದ್ದಾರೆ.

ಭೂಕಂಪದಿಂದಾಗಿ ಸಂಪರ್ಕ ವ್ಯವಸ್ಥೆ ಕೂಡ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ. ಇದುವರೆಗೂ 2 ಲಕ್ಷಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪಲು ನಗರದಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದೆ. ಇಲ್ಲಿ ಆಸ್ಪತ್ರೆಗೆ ಸೇರಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ.

ತುತ್ತು ಅನ್ನಕ್ಕೂ ಪರದಾಟ

ಇಂಡೋನೇಷ್ಯಾದಲ್ಲಿ ಸಂಭವಿಸಿದ ಸುನಾಮಿಯಿಂದ ಬಚಾವಾದವರು ಜೀವವನ್ನೇನೋ ಉಳಿಸಿಕೊಂಡರು. ಆದರೆ, ಹೊಟ್ಟೆಪಾಡಿನ ಗತಿಯೇನು? ಇಡೀ ದೇಶದ ಬಹುತೇಕ ಭಾಗ ಛಿದ್ರವಾಗಿರುವುದರಿಂದ ಊಟ, ತಿಂಡಿ, ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಹಾಗಾಗಿ, ಸುತ್ತಮುತ್ತಲೂ ಇರುವ ಅಂಗಡಿಗಳು, ಮಾರ್ಕೆಟ್​ಗಳಿಗೆ ನುಗ್ಗುತ್ತಿರುವ ಅಲ್ಲಿಯ ಜನ ಕಳ್ಳತನ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ಕೈಯಲ್ಲಿ ದುಡ್ಡಿಲ್ಲದೆ, ಉಳಿದುಕೊಳ್ಳಲು ಮನೆಯಿಲ್ಲದೆ, ಹೊಟ್ಟೆಗೂ ಊಟವಿಲ್ಲದೆ ನರಳಾಡುವಂತಾಗಿದೆ.

ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲು ಇಂಡೋನೇಷ್ಯಾದ ಅಧಿಕಾರಿಗಳು, ರೆಡ್​ಕ್ರಾಸ್​ ಮುಂತಾದ ಅನೇಕ ಸ್ವಯಂಸೇವಾ ಸಂಸ್ಥೆಗಳು ಪ್ರಯತ್ನ ಪಡುತ್ತಿದ್ದರೂ ಆ ಪ್ರದೇಶಕ್ಕೆ ಹೋಗಲು ಮಾರ್ಗವಿಲ್ಲದೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಅಗತ್ಯ ವಸ್ತುಗಳನ್ನು ತಲುಪಿಸಲು ಆಗುತ್ತಿಲ್ಲ.
Loading...

ಇದನ್ನೂ ಓದಿ:  ಇಂಡೋನೇಷ್ಯಾ ಭೂಕಂಪ, ಸುನಾಮಿ: ಸಾವಿನ ಸಂಖ್ಯೆ 832ಕ್ಕೇರಿಕೆ; 1 ಸಾವಿರ ಗಡಿದಾಟುವ ಭೀತಿ

ಇನ್ನು ಎರಡು ದಿನಗಳಲ್ಲಿ ಆಹಾರದ ಸರಬರಾಜು ಮಾಡಲಾಗುವುದು. ಅವುಗಳನ್ನು ಎಲ್ಲರಿಗೂ ಸಿಗುವಂತೆ ವಿತರಣೆ ಮಾಡುವುದು ನಿಜವಾದ ಸವಾಲಾಗಿ ಪರಿಣಮಿಸಲಿದೆ. ಸದ್ಯಕ್ಕೆ ಆಹಾರ ಪದಾರ್ಥಗಳನ್ನು ದರೋಡೆ ಮಾಡುತ್ತಿರುವುದರಿಂದ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಂದುವೇಳೆ ಹಣ ಮುಂತಾದ ಬೆಲೆಬಾಳುವ ವಸ್ತುಗಳ ದರೋಡೆಗಿಳಿದರೆ ಮುಂದಿನ ಕ್ರಮ ಜರುಗಿಸಲಾಗುವುದು. ಸದ್ಯಕ್ಕೆ ಎಲ್ಲ ಕಡೆ ಎಟಿಎಂಗಳು ತೆರೆದಿವೆ. ತಮ್ಮ ಬಳಿ ಕಾರ್ಡ್​ ಇರುವವರು ಅದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.

ದುಡ್ಡು ಇದ್ದರೂ ಆಹಾರ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಡೆಪ್ಯುಟಿ ನ್ಯಾಷನಲ್​ ಪೊಲೀಸ್​ ಚೀಫ್​ ಅರಿ ಡೋನೋ ಸುಕ್ಮಂಟೋ ಮಾಹಿತಿ ನೀಡಿದ್ದಾರೆ.
ಭೂಕಂಪದ ಭೀತಿಯಿಂದ ಅನೇಕ ನಿವಾಸಿಗಳು ಬಯಲಲ್ಲಿ ಮಲಗಿದರೆ, ಕೆಲವರು ಬಿದಿರಿನ ಗುಡಿಸಲು ಮಾಡಿಕೊಂಡು ಅದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಯಕ್ಕೆ ಅಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಮಣ್ಣಿನಲ್ಲಿ ಕಿಲೋಮೀಟರ್​ಗಟ್ಟಲೆ ನಡೆದುಕೊಂಡು ಹೋಗಿ ದೇಹಗಳನ್ನು ಆ್ಯಂಬುಲೆನ್ಸ್​ವರೆಗೆ ಸಾಗಿಸುವುದೇ ದೊಡ್ಡ ಸಮಸ್ಯೆಯಾಗಿದೆ.
First published:October 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...