• Home
  • »
  • News
  • »
  • national-international
  • »
  • Football Match: ಫುಟ್​ಬಾಲ್ ಪಂದ್ಯದಿಂದ 127 ಜನರು ದುರ್ಮರಣ; 180 ಜನರಿಗೆ ಗಾಯ

Football Match: ಫುಟ್​ಬಾಲ್ ಪಂದ್ಯದಿಂದ 127 ಜನರು ದುರ್ಮರಣ; 180 ಜನರಿಗೆ ಗಾಯ

ಪಂದ್ಯದ ವೇಳೆ ಅನಾಹುತ

ಪಂದ್ಯದ ವೇಳೆ ಅನಾಹುತ

ಅಭಿಮಾನಿಗಳು ಪಿಚ್​ಗೆ ಇಳಿಯುತ್ತಿದ್ದಂತೆ ಪೊಲೀಸರು ಅಶ್ರುವಾಯು ಹಾರಿಸಿ ನಿಯಂತ್ರಿಸಲು ಯತ್ನಿಸಿದರು. ಆದರೂ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ 127 ಜನರು ಮೃತಪಟ್ಟಿದ್ದಾರೆ.

  • Share this:

ಜಕಾರ್ತ: ಪೂರ್ವ ಜಾವಾ ಪ್ರಾಂತ್ಯದಲ್ಲಿ ರಾತ್ರಿಯಿಡೀ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಪ್ರೇಕ್ಷಕರಿಂದಾಗಿ ನೂಕುನುಗ್ಗಲು ಉಂಟಾಗಿ 127 ಜನರು ಸಾವನ್ನಪ್ಪಿದ್ದಾರೆ.  ಜೊತೆಗೆ 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು (Indonsia Police) ಭಾನುವಾರ ತಿಳಿಸಿದ್ದಾರೆ. ಇಂಡೋನೇಷ್ಯಾದ ಟಾಪ್ ಲೀಗ್ BRI ಲಿಗಾ 1 ಪಂದ್ಯದಲ್ಲಿ ಪರ್ಸೆಬಯಾ ತಂಡ 3-2 ರಿಂದ ಗೆದ್ದ ನಂತರ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಇಂಡೋನೇಷ್ಯಾದಲ್ಲಿ ಒಂದು ವಾರಗಳ ಕಾಲ ಆಟಗಳನ್ನು ಸ್ಥಗಿತಗೊಳಿಸಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ ​​(PSSI) ತಿಳಿಸಿದೆ.


ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಬೆಂಬಲಿಗರು ಪಿಚ್‌ಗೆ ನುಗ್ಗಿ ಗಲಾಟೆ ಮಾಡಿದ್ದೇ ಈ ದುರ್ಘಟನೆಗೆ ಕಾರಣ. ಅಭಿಮಾನಿಗಳು ಪಿಚ್​ಗೆ ಇಳಿಯುತ್ತಿದ್ದಂತೆ ಪೊಲೀಸರು ಅಶ್ರುವಾಯು ಹಾರಿಸಿ ನಿಯಂತ್ರಿಸಲು ಯತ್ನಿಸಿದರು. ಆದರೂ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ 127 ಜನರು ಮೃತಪಟ್ಟಿದ್ದಾರೆ.ಇದನ್ನೂ ಓದಿ: 5G Launch: ಪ್ರಾಕೃತಿಕ ವಿಕೋಪ ಬರೋ ಮೊದಲೇ ಸಿಗುತ್ತೆ ಸೂಚನೆ, C-Dot Technologyಯಿಂದ ಮೊಬೈಲ್​ಗೆ ಸಂದೇಶ!


ಸ್ಥಳೀಯ ಸುದ್ದಿ ವಾಹಿನಿಗಳ ವಿಡಿಯೋ ತುಣುಕಿನಲ್ಲಿ ಜನರು ಮಲಾಂಗ್‌ನಲ್ಲಿರುವ ಕ್ರೀಡಾಂಗಣದಲ್ಲಿನ ಪಿಚ್‌ಗೆ ನುಗ್ಗುತ್ತಿರುವುದನ್ನು ಕಾಣಬಹುದು.


ತನಿಖೆ ನಡೆಸುತ್ತೇವೆ ಎಂದ ಇಂಡೋನೇಷ್ಯಾ ಸರ್ಕಾರ
ಇಂಡೋನೇಷ್ಯಾ ಸರ್ಕಾರವು ಘಟನೆ ಕುರಿತು ಕ್ಷಮೆಯಾಚಿಸಿದೆ. ಕಾಲ್ತುಳಿತಕ್ಕೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡುವುದಾಗಿ ಭರವಸೆ ನೀಡಿದೆ.


ಕ್ರೀಡಾಸ್ಪೂರ್ತಿಗೆ ಧಕ್ಕೆ
"ಈ ಘಟನೆಗಾಗಿ ನಾವು ವಿಷಾದಿಸುತ್ತೇವೆ. ಬೆಂಬಲಿಗರು ಕ್ರೀಡಾಂಗಣದಿಂದ ಫುಟ್​ಬಾಲ್ ಪಂದ್ಯಗಳನ್ನು ವೀಕ್ಷಿಸಬಹುದಾದ ಸಮಯದಲ್ಲಿ ಇದು ನಮ್ಮ ಫುಟ್​ಬಾಲ್ ಕ್ರೀಡಾಸ್ಪೂರ್ತಿಗೆ  ಧಕ್ಕೆ ತರಬಲ್ಲ ವಿಷಾದನೀಯ ಘಟನೆಯಾಗಿದೆ" ಎಂದು ಇಂಡೋನೇಷ್ಯಾದ ಕ್ರೀಡಾ ಮತ್ತು ಯುವ ಸಚಿವ ಜೈನುದಿನ್ ಅಮಾಲಿ ಬ್ರಾಡ್ಕಾಸ್ಟರ್ ಕೊಂಪಸ್ಗೆ ಪ್ರತಿಕ್ರಿಯಿಸಿದ್ದಾರೆ.


ದುರಂತದ ನಂತರ ಇಂಡೋನೇಷಿಯಾದ FA ನಿಂದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಇಂಡೋನೇಷ್ಯಾ ಲೀಗ್​ನ ಎಲ್ಲಾ ಪಂದ್ಯಗಳನ್ನು ಮುಂದಿನ ವಾರಕ್ಕೆ ಅಮಾನತುಗೊಳಿಸಲಾಗಿದೆ.


ಇದನ್ನೂ ಓದಿ: Buddhist Caves: 20ಕ್ಕೂ ಹೆಚ್ಚು ಬೌದ್ಧಗುಹೆಗಳ ಉತ್ಖನನ! ರೋಚಕ ಸಂಗತಿ ಬಯಲು


ಅಸೋಸಿಯೇಷನ್ ​​ಅಧ್ಯಕ್ಷ ಮೊಚಮದ್ ಇರಿಯಾವಾನ್ ಸಂತ್ರಸ್ತರ ಕುಟುಂಬಗಳಿಗೆ ಕ್ಷಮೆಯಾಚಿಸಿದರು. ಈ ಘಟನೆಯು "ನಿಜವಾಗಿಯೂ ಇಂಡೋನೇಷ್ಯಾದ ಫುಟ್‌ಬಾಲ್‌ನ ಮುಖವನ್ನು ಕಳಂಕಗೊಳಿಸುತ್ತದೆ" ಎಂದು ಹೇಳಿದರು.


ಕಾಬೂಲ್​ನಲ್ಲಿ ಬಾಂಬ್ ಸ್ಫೋಟ
ತಾಲಿಬಾನ್ ಆಡಳಿತವಿರುವ ಅಘ್ಫಾನಿಸ್ತಾನದಲ್ಲ ಉಗ್ರರ ದಾಳಿ ಜೋರಾಗಿದೆ. ಇಂದು ಕಾಬೂಲ್‌ನ ಶಾಲೆಯೊಂದರ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಪರಿಣಾಮ ಬರೋಬ್ಬರಿ 100 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯದ ಹೆಚ್ಚಿನ ಜನರು ವಾಸಿಸುತ್ತಿರುವ ಕಾಬೂಲ್‌ನ ದಷ್ಟಿ ಬರ್ಚಿ ಪ್ರದೇಶದಲ್ಲಿ ಈ ಭೀಕರ ಬಾಂಬ್ ಸ್ಪೋಟ ಸಂಭವಿಸಿದೆ. ಭೀಕರ ಬಾಂಬ್ ಸ್ಫೋಟದಿಂದಾಗಿ 32ಕ್ಕೂ ಹೆಚ್ಚು ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ಹೇಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಘ್ಫಾನಿಸ್ತಾನ್ ಸರ್ಕಾರದ ಮೂಲಗಳು ಇದನ್ನು ಖಚಿತ ಪಡಿಸಿಲ್ಲ.


ವಿದ್ಯಾರ್ಥಿಗಳ ಮಧ್ಯೆ ನಿಂತು ಬಾಂಬ್ ಸ್ಫೋಟಿಸಿದ ಉಗ್ರ
ಭಾರತೀಯ ಕಾಲಮಾನ ಬೆಳಗ್ಗೆ 7:30ಕ್ಕೆ ಕಾಜ್ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ. ಹಜಾರಾ ನೆರೆಹೊರೆಯಲ್ಲಿರುವ ಕಾಜ್ ಶೈಕ್ಷಣಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್‌, ವಿದ್ಯಾರ್ಥಿಗಳ ನಡುವೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಇನ್ನು ಬಾಂಬ್ ಸ್ಫೋಟಕ್ಕೂ ಮುನ್ನ ಸೂಸೈಡ್ ಬಾಂಬರ್ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಹೇಳಿಕೊಟ್ಟು, ಬಳಿಕ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ.

Published by:ಗುರುಗಣೇಶ ಡಬ್ಗುಳಿ
First published: