ಇಂದು ಮುಂಜಾನೆ ಇಂಡೋನೇಷ್ಯಾದಲ್ಲಿ ಭೂಕಂಪ: 82ಕ್ಕೂ ಅಧಿಕ ಜನ ಸಾವು
news18
Updated:August 6, 2018, 8:59 AM IST
news18
Updated: August 6, 2018, 8:59 AM IST
ನ್ಯೂಸ್18 ಕನ್ನಡ
ಇಂಡೋನೇಷ್ಯಾ (ಆ. 6): ಇಂದು ಮುಂಜಾನೆ ಇಂಡೋನೇಷ್ಯಾದ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಲಂಬೋಕ್ನ ಕರಾವಳಿ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, 82ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ನೂರಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಸಾಕಷ್ಟು ಪ್ರವಾಸಿಗರು ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿರಾರು ಕಟ್ಟಡಗಳು ಕೂಡ ಜಖಂಗೊಂಡಿವೆ. ಈ ಭೂಕಂಪನದ ತೀವ್ರತೆಗೆ ಬಾಲಿಯ ಸುತ್ತಮುತ್ತಲ ಪ್ರದೇಶಗಳ ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ.
ನಿನ್ನೆ ಸಂಜೆಯೇ ಸುನಾಮಿಯ ಸೂಚನೆ ಬಂದಿದ್ದರಿಂದ ಪ್ರವಾಸಿಗರು ಆತಂಕಕ್ಕೀಡಾಗಿದ್ದರು. ಆದರೆ, ಸುನಾಮಿಯ ಸಾಧ್ಯತೆಯಿಲ್ಲ ಎಂದು ರಾತ್ರಿ ತಿಳಿಸಲಾಗಿದ್ದರಿಂದ ಪ್ರವಾಸಿಗರು ಕೊಂಚ ನಿರಾಳರಾಗಿದ್ದರು. ಇಂದು ಬೆಳಗ್ಗೆ ಭೂಕಂಪ ಸಂಭವಿಸಿ ಮತ್ತೊಂದು ರೀತಿ ಅನಾಹುತ ಸಂಭವಿಸಿದಂತಾಗಿದೆ.ಘಟನೆ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇಂಡೋನೇಷ್ಯಾ ಸೇನೆ, ಸ್ಥಳೀಯ ಅಗ್ನಿಶಾಮಕ ದಳಗಳು, ನೈಸರ್ಗಿಕ ವಿಕೋಪ ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭೂಕಂಪದ ನಂತರವೂ ಕೆಲವು ಭಾಗಗಳಲ್ಲಿ ಲಘುಕಂಪನ ಉಂಟಾಗಿದೆ. ಇಂದು ಘಟಿಸಿರುವ ಭೂಕಂಪದಿಂದ ಸುನಾಮಿಯೇನಾದರೂ ಉಂಟಾಗಬಹುದಾ ಎಂಬ ಅನುಮಾನವನ್ನು ಹವಾಮಾನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡಿಲ್ಲ. ಆದರೆ, ಸಮುದ್ರತೀರದ ಜನರು ಎತ್ತರದ ಪ್ರದೇಶಗಳಿಗೆ ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇಂದು ಮುಂಜಾನೆಯೇ ಭೂಕಂಪ ಸಂಭವಿಸಿದ್ದರಿಂದ ಭೂಮಿ ಕಂಪನವಾಗುತ್ತಿದ್ದಂತೆ ಬಹುತೇಕ ಎಲ್ಲರೂ ಮನೆಯಿಂದ ಹೊರಗಡೆ ಓಡಿಬಂದಿದ್ದಾರೆ. ಇದೇ ರಾತ್ರಿವೇಳೆ ಆಗಿದ್ದರೆ ಸಾಕಷ್ಟು ಜನ ಮಲಗಿದ್ದಲ್ಲೇ ಸಮಾಧಿಯಾಗುವ ಸಾಧ್ಯತೆಯಿತ್ತು. 2004ರಲ್ಲಿಯೂ ಇಂಡೋನೇಷ್ಯಾದಲ್ಲಿ ಭೂಕಂಪವಾಗಿತ್ತು. ಈ ವೇಳೆ ಲಕ್ಷಾಂತರ ಜನ ಸಾವಿಗೀಡಾಗಿದ್ದರು.

Loading...