Indonesia Earthquake: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಕಂಪಿಸಿದ ಭೂಮಿ; ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲು

2004ರಲ್ಲಿ ಸುಮಾತ್ರಾ ಕಡಲ ತೀರದಲ್ಲಿ 9.1 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಆಗ ಭೀಕರವಾದ ಸುನಾಮಿ ಸಂಭವಿಸಿ ಸುಮಾರು 2,20,000 ಮಂದಿ ಸಾವನ್ನಪ್ಪಿದ್ದರು. ಇವರಲ್ಲಿ 1,70,000 ಜನರು ಇಂಡೋನೇಷ್ಯಾದವರೇ ಆಗಿದ್ದರು.

news18-kannada
Updated:July 7, 2020, 9:05 AM IST
Indonesia Earthquake: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಕಂಪಿಸಿದ ಭೂಮಿ; ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲು
ಸಾಂದರ್ಭಿಕ ಚಿತ್ರ
  • Share this:
ಇಂಡೋನೇಷ್ಯಾ(ಜು.07): ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 6.6 ತೀವ್ರತೆಯ ಭೂಕಂಪವಾಗಿರುವುದು ದಾಖಲಾಗಿದೆ. ಅಮೆರಿಕನ್ ಜಿಯಾಲಾಜಿಕಲ್ ಸರ್ವೇ ಭೂಕಂಪದ ತೀವ್ರತೆಯನ್ನು ಮಾಪನ ಮಾಡಿದೆ.

ಭೂಕಂಪನದ ತೀವ್ರತೆಯು ಸುಮಾರು 500 ಕಿ.ಮೀ.ಗಿಂತಲೂ(300 ಮೈಲಿ) ಹೆಚ್ಚು ಆಳದವರೆಗೆ ವ್ಯಾಪಿಸಿದೆ. ಭೂಕಂಪದಿಂದಾಗಿ ಸಣ್ಣ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ತಿಳಿಸಿದೆ.

ಕೊಡಗಿನಲ್ಲಿ ಕೊರೋನಾದಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಮುಂದಾದ ಸ್ವಯಂ ಸೇವಕರು

ಸಮೀಕ್ಷೆಯ ಪ್ರಕಾರ, ಬಟಾಂಗ್ ನಗರದ ಸುಮಾರು 100 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

2018ರಲ್ಲಿ ಸುಲವೆಸಿ ದ್ವೀಪದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ವೇಳೆ ಎದ್ದ ಸುನಾಮಿಯಿಂದಾಗಿ 4300 ಜನ ಕಣ್ಮರೆಯಾಗಿದ್ದರು.

ಇನ್ನು, 2004ರಲ್ಲಿ ಸುಮಾತ್ರಾ ಕಡಲ ತೀರದಲ್ಲಿ 9.1 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಆಗ ಭೀಕರವಾದ ಸುನಾಮಿ ಸಂಭವಿಸಿ ಸುಮಾರು 2,20,000 ಮಂದಿ ಸಾವನ್ನಪ್ಪಿದ್ದರು. ಇವರಲ್ಲಿ 1,70,000 ಜನರು ಇಂಡೋನೇಷ್ಯಾದವರೇ ಆಗಿದ್ದರು. 
Published by: Latha CG
First published: July 7, 2020, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading