Indo-China Conflict: ಅರುಣಾಚಲ ಪ್ರದೇಶದ ಗಡಿಯಲ್ಲಿ ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, "ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕುರಿತಂತೆ ಇತ್ತೀಚಿಗಿನ ವರದಿಗಳನ್ನು ನೋಡಿದ್ದೇವೆ. ಹಿಂದೆ ಕೂಡ ಚೀನಾ ಇಂತಹ ನಿರ್ಮಾಣ ಕೆಲಸ ನಡೆಸಿದೆ" ಎಂದು ಹೇಳಿದೆ.
ನವ ದೆಹಲಿ: ಲಡಾಖ್ನಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ಮುಸುಕಿನ ಗದ್ದಾಟ ನಡೆಯುತ್ತಲೇ ಇದೆ. ಗಡಿಯಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿ ಇದೆ. ಅದರಲ್ಲೂ ಕಳೆದ ಜೂನ್ ತಿಂಗಳ ಘರ್ಷಣೆಯ ನಂತರ ಬಿಸಿ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಅರುಣಾಚಲ ಪ್ರದೇಶದ ಕೆಲವು ಭೂ ಭಾಗಗಳೂ ಸಹ ತನಗೇ ಸೇರಬೇಕು ಎಂದು ಚೀನಾ ಕಳೆದ ಹಲವು ವರ್ಷಗಳಿಂದ ತಗಾದೆ ತೆಗೆಯುತ್ತಲೇ ಇದೆ. ಅರುಣಾಚಲ ಪ್ರದೇಶದ ಗಡಿಗೆ ಸಂಬಂಧಿಸಿದಂತೆಯೂ ಭಾರತಕ್ಕೆ ಚೀನಾ ಜೊತೆಗೆ ವಿವಾದ ಇದೆ. ಈ ನಡುವೆ ಚೀನಾ ಸದ್ದಿಲ್ಲದೆ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದ್ದು, ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಇದೀಗ ಭಾರತಕ್ಕೆ ದೊರಕಿವೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
"ತ್ಸಾರ್ ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿದ್ದು. ಇದು ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ. ಆಗಸ್ಟ್ 26, 2019 ರ ಉಪಗ್ರಹ ಚಿತ್ರದಲ್ಲಿ ಅಲ್ಲಿ ಯಾವುದೇ ಗ್ರಾಮದ ಕುರುಹು ಇರಲಿಲ್ಲ. ಹಾಗಾಗಿ ಈ ಗ್ರಾಮ ಕಳೆದ ವರ್ಷ ನಿರ್ಮಾಣವಾಗಿದೆ" ಎಂದು ಅಂದಾಜಿಸಲಾಗಿದೆ.
We have seen recent reports on China undertaking construction work along the border areas with India. China has undertaken such infrastructure construction activity in the past several years: MEA on media reports saying that China has built a village in Arunachal Pradesh
"ನವೆಂಬರ್ 1, 2020 ದಿನಾಂಕ ನಮೂದಿಸಲ್ಪಟ್ಟಿರುವ ಈ ಉಪಗ್ರಹ ಚಿತ್ರಗಳನ್ನು ಹಲವಾರು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತೀಯ ಭೂಭಾಗದಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮವು ವಾಸ್ತವಿಕ ಗಡಿ ರೇಖೆಯಿಂದ ಅಂದಾಜು 4.5 ಕಿಮೀ ಒಳಗಿದೆ" ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, "ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕುರಿತಂತೆ ಇತ್ತೀಚಿಗಿನ ವರದಿಗಳನ್ನು ನೋಡಿದ್ದೇವೆ. ಹಿಂದೆ ಕೂಡ ಚೀನಾ ಇಂತಹ ನಿರ್ಮಾಣ ಕೆಲಸ ನಡೆಸಿದೆ" ಎಂದು ಹೇಳಿದೆ.
"ಗಡಿ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯ ಉತ್ತಮ ಪಡಿಸಲು ಸರ್ಕಾರ ಬದ್ಧವಾಗಿದೆ. ಗಡಿ ಪ್ರದೇಶದ ಜನರಿಗೆ ಅನುಕೂಲವಾಗಲು ಅಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ" ಎಂದು ಸರ್ಕಾರ ಹೇಳಿದೆ.
ಈ ಉಪಗ್ರಹ ಚಿತ್ರಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ಮೂಲಕ ಪಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಭಾರತ ಸರ್ಕಾರ ತನ್ನ ಅಧಿಕೃತ ನಕ್ಷೆ ಎಂದು ಬಳಸುವ ಸರ್ವೇಯರ್ ಜನರಲ್ ಆಫ್ ಇಂಡಿಯಾದ ಆನ್ಲೈನ್ ನಕ್ಷೆಯಲ್ಲೂ ಚೀನಾದ ಈ ಗ್ರಾಮ ಭಾರತದ ಭೂಭಾಗದಲ್ಲಿರುವುದು ಕಾಣಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ