ಜಾರ್ಜ್ ಫರ್ನಾಂಡಿಸ್ ಅವರನ್ನು ಕಂಡರೆ ಇಂದಿರಾ ಗಾಂಧಿ ಭಯ ಬೀಳುತ್ತಿದ್ದರಂತೆ!

George Fernandes Passes away: ಕಾಂಗ್ರೆಸ್​ ವಿರೋಧಿಸುವುದು ಜಾರ್ಜ್​ ಡಿಎನ್​ಎಯಲ್ಲೇ ಇತ್ತೆಂದು ನನಗೆ ಅನೇಕ ಬಾರಿ ಅನ್ನಿಸಿದ್ದಿದೆ ಎನ್ನುವ ಸ್ವಾಮಿ, ಗಾಂಧಿ ಕುಟುಂಬವನ್ನು ಜಾರ್ಜ್​ ತೀವ್ರವಾಗಿ ವಿರೋಧಿಸುತ್ತಿದ್ದರು. ಗಾಂಧಿ ಕುಟುಂಬ ದೇಶಕ್ಕೆ ಒಳಿತು ಮಾಡುವುದಿಲ್ಲ ಎಂಬುದನ್ನು ಅವರ ನಂಬಿಕೆ ಆಗಿತ್ತು ಎನ್ನುತ್ತಾರೆ.

Rajesh Duggumane | news18
Updated:January 29, 2019, 11:18 AM IST
ಜಾರ್ಜ್ ಫರ್ನಾಂಡಿಸ್ ಅವರನ್ನು ಕಂಡರೆ ಇಂದಿರಾ ಗಾಂಧಿ ಭಯ ಬೀಳುತ್ತಿದ್ದರಂತೆ!
ಜಾರ್ಜ್​​ ಫರ್ನಾಂಡಿಸ್​​ ಮತ್ತು ಡಾ. ಸುಬ್ರಮಣ್ಯ ಸ್ವಾಮೀ
  • News18
  • Last Updated: January 29, 2019, 11:18 AM IST
  • Share this:
ಡಿಪಿ ಸತೀಶ್​

ನವದೆಹಲಿ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಜಾರ್ಜ್​ ಫರ್ನಾಂಡಿಸ್​​ ಅವರನ್ನು ಕಂಡರೆ ಭಯ ಬೀಳುತ್ತಿದ್ದರಂತೆ! ಈ ವಿಚಾರವನ್ನು ಜಾರ್ಜ್​ ಗೆಳೆಯ ಹಾಗೂ ಬಿಜೆಪಿ ಸಂಸದ ಹಾಗೂ ಡಾ. ಸುಬ್ರಮಣಿಯನ್​ ಸ್ವಾಮಿ ನೆನಪಿಸಿಕೊಂಡಿದ್ದಾರೆ.

“ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಜಾರ್ಜ್​ ಫರ್ನಾಂಡಿಸ್​ಗೆ ಇಂದಿರಾ ಹೆದರುತ್ತಿದ್ದರು. ನಂತರ ಜಾರ್ಜ್​​ರನ್ನು ಬಂಧನ ಮಾಡಲಾಯಿತು. ಈ ವೇಳೆ ಇಂದಿರಾ ನಿಟ್ಟುಸಿರು ಬಿಟ್ಟರು. ನಾವಿಬ್ಬರೂ ಉತ್ತಮ ಗೆಳೆಯರಾಗಿದ್ದೆವು. ತುರ್ತು ಪರಿಸ್ಥಿತಿಯನ್ನು ಒಟ್ಟಿಗೆ ಎದುರಿಸಿದ್ದೇವೆ. ನಾನು ಭೂಗತನಾಗಿ ಕಾರ್ಯನಿರ್ವಹಿಸಿದರೆ, ಜಾರ್ಜ್​ ಎಲ್ಲರ ಎದುರಿದ್ದೇ ಕೆಲಸ ಮಾಡುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾದ ನಂತರ ಅವರು ಮತ್ತೆ ಎದ್ದೇಳಲೇ ಇಲ್ಲ ಎಂಬುದು ಬೇಸರದ ಸಂಗತಿ” ಎಂದು ಹಳೆಯ ದಿನಗಳನ್ನು ನೆನೆದರು ಸ್ವಾಮಿ.

“ಜಾರ್ಜ್​ ಅವರದ್ದು ವಿಶಾಲ ಹೃದಯ, ಸಮಾಜವಾದಿ. ರಾಮ್​ ಮನೋಹರ್​ ಲೋಹಿಯಾ ಹಿಂಬಾಲಕರು. ನಾನು ಇದನ್ನು ವಿರೋಧಿಸಿದ್ದೆ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನತೆ ಇದ್ದರೂ ಇಂದಿರಾ ಗಾಂಧಿ ವಿರುದ್ಧ ಒಟ್ಟಾಗಿ  ಹೋರಾಡಬಹುದು ಎಂದು ನನಗೆ ಮನವರಿಕೆ ಮಾಡಿಕೊಟ್ಟಿದ್ದರು,” ಎನ್ನುತ್ತಾರೆ ಸ್ವಾಮಿ.

ಇದನ್ನೂ ಓದಿ: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ನಿಧನ

“ಜಾರ್ಜ್​ ನನ್ನ ಆಪ್ತ ಗೆಳೆಯ. ಅವರು ರಾಜಕೀಯಕ್ಕಿಂತ ಮೇಲಿರುತ್ತಿದ್ದರು. ಹಲವು ವಿಚಾರಗಳ ಕುರಿತು ನಾವಿಬ್ಬರೂ ಚರ್ಚೆ ನಡೆಸುತ್ತಿದ್ದೆವು. ಸಾಕಷ್ಟು ಸಮಾವೇಶಗಳನ್ನು ಅವರು ನಡೆಸಿದ್ದಾರೆ. ಇದರಿಂದ ಸರ್ಕಾರ ಆಡಳಿತಾರೂಢ ಪಕ್ಷದ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ಸೈದ್ಧಾಂತಿಕವಾಗಿ ನಮ್ಮಿಬ್ಬರ ನಡುವೆ ಭಿನ್ನತೆ ಇದ್ದರೂ ಉತ್ತಮ ಗೆಳೆಯರಾಗೇ ಉಳಿದೆವು,” ಎಂದು ತಮ್ಮ ಗೆಳೆತನದ ಬಗ್ಗೆ ನ್ಯೂಸ್​ 18 ಜೊತೆಗೆ ಹಂಚಿಕೊಂಡರು.

ಕಾಂಗ್ರೆಸ್​ ವಿರೋಧಿ ಗುಣ ಅವರ ಡಿಎನ್​ಎಯಲ್ಲೇ ಇದೆ:ಕಾಂಗ್ರೆಸ್​ ವಿರೋಧಿಸುವುದು ಜಾರ್ಜ್​ ಡಿಎನ್​ಎಯಲ್ಲೇ ಇತ್ತೆಂದು ನನಗೆ ಅನೇಕ ಬಾರಿ ಅನ್ನಿಸಿದ್ದಿದೆ ಎನ್ನುವ ಸ್ವಾಮಿ, “ಗಾಂಧಿ ಕುಟುಂಬವನ್ನು ಜಾರ್ಜ್​ ತೀವ್ರವಾಗಿ ವಿರೋಧಿಸುತ್ತಿದ್ದರು. ಗಾಂಧಿ ಕುಟುಂಬ ದೇಶಕ್ಕೆ ಒಳಿತು ಮಾಡುವುದಿಲ್ಲ ಎಂಬುದನ್ನು ಅವರ ನಂಬಿಕೆ. ಈ ವಿಚಾರದಲ್ಲಿ ಅವರು ಒಮ್ಮೆಯೂ ರಾಜಿ ಆಗಲಿಲ್ಲ. ಸೋನಿಯಾ ಗಾಂಧಿ ಪ್ರಧಾನಿಯಾಗಿದ್ದನ್ನು ನಾಗರಿಕ ಕಾಯ್ದೆ ಅಡಿಯಲ್ಲಿ ನಾನು ಪ್ರಶ್ನಿಸಲು ಮುಂದಾಗಿದ್ದೆ. ಈ ವೇಳೆ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಎಲ್​.ಕೆ ಅಡ್ವಾಣಿ ಇದನ್ನು ವಿರೋಧಿಸುತ್ತಾರೆ ಎಂದುಕೊಂಡಿದ್ದೆ. ಅಚ್ಚರಿ ಎಂದರೆ ಅವರು ಸಂಪೂರ್ಣ ಬೆಂಬಲ ನೀಡಿದರು,” ಎಂದು ತಿಳಿಸಿದರು.

ಇದನ್ನೂ ಓದಿ: ‘ಇದು ಲಫಂಗಾ ರಾಜಕೀಯ ಅಲ್ಲದೆ ಮತ್ತೇನು?’; ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಭೋಫೋರ್ಸ್​​ ಪ್ರಕರಣಕ್ಕೆ ಅಂದೇ ಅಂತ್ಯ ಹಾಡುವುದಕ್ಕೆ ಜಾರ್ಜ್​ ಸಿದ್ಧರಾಗಿದ್ದರಂತೆ. ಆದರೆ, ವಾಜಪೇಯಿ ಅವರಿಗೆ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನ ಕಾಡಿತ್ತು. ಹಾಗಾಗಿ, ವಾಜಪೇಯಿ ಈ ಧೈರ್ಯಕ್ಕೆ ಮುಂದಾಗಿರಲಿಲ್ಲ ಎನ್ನುತ್ತಾರೆ ಸುಬ್ರಮಣಿಯನ್​.

ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವರ ಪೈಕಿ ಜಾರ್ಜ್​ ಫರ್ನಾಂಡಿಸ್​  ಮೊದಲಿಗರು ಎಂಬುದು ಸ್ವಾಮಿ ಅಭಿಪ್ರಾಯ. “ಸಿಯಾಚಿನ್​ ಪ್ರದೇಶದಲ್ಲಿ ಸೈನಿಕರು ವಾಸಿಸಲು ಅನುಕೂಲವಾಗುವ ಪರಿಸ್ಥಿತಿ ನಿರ್ಮಾಣ ಮಾಡಿಕೊಟ್ಟ ಹಿರಿಮೆ ಜಾರ್ಜ್​ ಅವರದ್ದು. ಅವರು ಅಲ್ಲಿಗೆ ಆಗಾಗ ಭೇಟಿಯನ್ನೂ ನೀಡುತ್ತಿದ್ದರು. ಸೈನಿಕರ ಬಗ್ಗೆ ಅಷ್ಟು ಕಾಳಜಿಯನ್ನು ಯಾರೊಬ್ಬರೂ ತೋರಿಸುತ್ತಿರಲಿಲ್ಲ. ಅಂತವರು ಸಿಗುವುದು ತೀರಾ ಅಪರೂಪ” ಎನ್ನುತ್ತಾರೆ ಅವರು.

ಕಳೆದ 12 ವರ್ಷಗಳಿಂದ ಜಾರ್ಜ್​ ಅವರು ಅಲ್ಜಮೈರ್​ ಖಾಯಿಲೆಯಿಂದ ಬಳಲುತ್ತಿದ್ದರು. ನಂತರ ಅವರ ಭೇಟಿ ಸಾಧ್ಯವೇ ಆಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ವಾಮಿ.

First published: January 29, 2019, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading