HOME » NEWS » National-international » INDIRA GANDHI BIRTH ANNIVERSARY CONGRESS LEADERS REMEMBER THEIR GREAT LEADER SNVS

Indira Gandhi Birth Anniversary: ಇಂದಿರಾ ಗಾಂಧಿ 103ನೇ ಜಯಂತಿಯಂದು ಕಾಂಗ್ರೆಸ್ಸಿಗರಿಂದ ನಮನ

1917, ನ. 19ರಂದು ಅಲಾಹಾಬಾದ್ನಲ್ಲಿ ಜನಿಸಿದ ಇಂದಿರಾ ಗಾಂಧಿ ಅವರು ದೇಶದ ಮೂರನೇ ಪ್ರಧಾನಿಯಾಗಿ ಹಲವು ಮೈಲುಗಲ್ಲುಗಳನ್ನ ಸ್ಥಾಪಿಸಿದ್ದಾರೆ. ಭಾರತದ ಐರನ್ ಲೇಡಿ ಎಂದೂ ಅವರನ್ನ ಬಣ್ಣಿಸಲಾಗುತ್ತದೆ.

news18
Updated:November 19, 2020, 11:36 AM IST
Indira Gandhi Birth Anniversary: ಇಂದಿರಾ ಗಾಂಧಿ 103ನೇ ಜಯಂತಿಯಂದು ಕಾಂಗ್ರೆಸ್ಸಿಗರಿಂದ ನಮನ
ಇಂದಿರಾ ಗಾಂಧಿ ಸಮಾಧಿಗೆ ರಾಹುಲ್ ಗಾಂಧಿ ಗೌರವ
  • News18
  • Last Updated: November 19, 2020, 11:36 AM IST
  • Share this:
ನವದೆಹಲಿ(ನ. 19): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ಸ್ಮಾರಕ ಇರುವ ಶಕ್ತಿ ಸ್ಥಳ್​ಗೆ ಭೇಟಿ ನೀಡಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೌರವ ಸಲ್ಲಿಸಿದರು. ಈ ವೇಳೆ, ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಅವರನ್ನು ಈ ದೇಶದ ಮಹಾನ್ ಪುತ್ರಿ ಎಂದು ಬಣ್ಣಿಸಿ ಟ್ವೀಟ್ ಮಾಡಿದೆ. “ನಾವೀನ್ಯ, ಅನನ್ಯ ದೃಷ್ಟಿಕೋನ, ಶ್ರೇಷ್ಠ ನಾಯಕತ್ವದವರಾಗಿದ್ದರು ಇಂದಿರಾ ಗಾಂಧಿ. ನಮ್ಮ ಪ್ರಜೆಗಳಿಗೆ ಅವರು ಪ್ರಧಾನ ಮಂತ್ರಿಗಿಂತಲೂ ಮಿಗಿಲಾಗಿದ್ದರು. ದೇಶದ ಸಮೃದ್ಧಿಯತ್ತ ಜನಸಾಮಾನ್ಯರ ಆಶೋತ್ತರಗಳಿಗೆ ಅವರು ಶಕ್ತಿಯಾಗಿದ್ದರು. ಇವತ್ತು ನಾವು ಇಂಡಿಯಾದ ಇಂದಿರಾಗೆ ಹೆಮ್ಮೆಯಿಂದ ಗೌರವ ಸಲ್ಲಿಸುತ್ತೇವೆ” ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಿಂದ ಟ್ವೀಟ್ ಮಾಡಲಾಗಿದೆ.

ಇಂದಿರಾ ಗಾಂಧಿ ಅವರ ಮೊಮ್ಮಗ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, ತಮ್ಮ ಅಜ್ಜಿಯಿಂದ ಕಲಿತ ಪಾಠ ತಮಗೆ ಸ್ಫೂರ್ತಿಯಾಗಿರುವ ವಿಚಾರವನ್ನು ಹಂಚಿಕೊಂಡಿದ್ಧಾರೆ. “ಒಬ್ಬ ಕ್ರಿಯಾಶೀಲ ಹಾಗೂ ಶಕ್ತಿ ಸ್ವರೂಪಿಣಿಯಾದ ಇಂದಿರಾ ಗಾಂಧಿ ಅವರ ಜಯಂತಿಯಂದು ಶ್ರದ್ಧಾಂಜಲಿ… ಇಡೀ ದೇಶವು ಅವರ ಪ್ರಭಾವಶಾಲಿ ನಾಯಕತ್ವವನ್ನು ಈಗಲೂ ಕೊಂಡಾಡುತ್ತದೆ. ಆದರೆ, ನಾನು ಅವರನ್ನು ಯಾವಾಗಲೂ ನನ್ನ ಅಜ್ಜಿಯಾಗಿ ಸ್ಮರಿಸಿಕೊಳ್ಳುತ್ತೇನೆ. ಅವರು ಹೇಳಿಕೊಟ್ಟ ಮಾತುಗಳು ನನಗೆ ಯಾವಾಗಲೂ ಪ್ರೇರಣೆ ನೀಡುತ್ತವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದಿರಾ ಗಾಂಧಿ ಜನ್ಮದಿನದಂದು ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ.1917, ನವೆಂಬರ್ 19ರಂದು ಅಲಹಾಬಾದ್​ನಲ್ಲಿ ಜನಿಸಿದ ಇಂದಿರಾ ಗಾಂಧಿ, ದೇಶದ ಅತ್ಯಂತ ಪ್ರಬಲ ಪ್ರಧಾನಮಂತ್ರಿಯಾಗಿ ಬೆಳೆದ ಕಥೆ ಸ್ಫೂರ್ತಿದಾಯಕ. ತಂದೆ ಜವಾಹರಲಾಲ್ ನೆಹರೂ, ತಾಯಿ ಕಮಲಾ ನೆಹರೂ. ಮಕ್ಕಳು ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ. ಮೊಮ್ಮಕ್ಕಳು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವರುಣ್ ಗಾಂಧಿ.

ಇದನ್ನೂ ಓದಿ: Pfizer: ಕೊರೋನಾಗೆ ಫಿಜರ್​ ಶೇ 95ರಷ್ಟು ಪರಿಣಾಮಕಾರಿ ಲಸಿಕೆ; ತುರ್ತು ಅನುಮೋದನೆ ಪಡೆಯಲು ಸಿದ್ಧತೆ

ಭಾರತದ ಮೂರನೇ ಪ್ರಧಾನಿಯಾದ ಇಂದಿರಾ ಗಾಂಧಿ ಅವರನ್ನ ದೇಶ ನೆನೆಯುವುದು ಪ್ರಮುಖವಾಗಿ ಅವರ ಗರೀಭೀ ಹಠಾವೋ ಸ್ಲೋಗನ್, 1971ರ ಭಾರತ-ಪಾಕ್ ಯುದ್ಧ ಹಾಗೂ 1975ರ ತುರ್ತು ಸ್ಥಿತಿ ಘೋಷಣೆಯಿಂದ. 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಲಾಯಿತು. ಈ ನಿಟ್ಟಿನಲ್ಲಿ ಇಂದಿರಾ ಗಾಂಧಿ ನಿರ್ಣಾಯಕ ಪಾತ್ರ ವಹಿಸಿದ್ದರು.

1984, ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರನ್ನು ಅವರ ಬಾಡಿಗಾರ್ಡ್​ಗಳೇ ಹತ್ಯೆಗೈದರು. ಅಮೃತಸರದಲ್ಲಿ ಸಿಖ್ ಪ್ರತ್ಯೇಕತಾವಾದಿಗಳು ಅಡಗಿದ್ದ ಗೋಲ್ಡನ್ ಟೆಂಪಲ್​ಗೆ ಸೇನೆಯನ್ನು ಕಳುಹಿಸಿದ ಕಾರಣಕ್ಕೆ ಇಂದಿರಾ ಗಾಂಧಿ ಅವರನ್ನು ಕೊಲ್ಲಲಾಗಿತ್ತು. ಅವರ ಹತ್ಯೆ ಬಳಿಕ ದೆಹಲಿಯ ವಿವಿಧೆಡೆ ಸಿಖ್ ವಿರೋಧಿ ದಂಗೆಗಳಾಗಿ ನೂರಾರು ಸಿಖ್ಖರ ನರಮೇಧ ಆಗಿತ್ತು.
Published by: Vijayasarthy SN
First published: November 19, 2020, 11:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading